ಹನುಮಂತ ದೇವರಿಗೆ ಶತ-ಶತಮಾನಗಳ ಐತಿಹಾಸಿಕ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀ!
Yuva Bharatha
December 12, 2022
Uncategorized
281 Views
ಹನುಮಂತ ದೇವರಿಗೆ ಶತ-ಶತಮಾನಗಳ ಐತಿಹಾಸಿಕ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀ!
ಯುವ ಭಾರತ ಸುದ್ದಿ ಬೆಟಗೇರಿ :ಮನುಷ್ಯನ ಮನಸ್ಸು ಸದಾ ಪರಿಶುದ್ದವಾಗಿದ್ದರೆ ಆತನ ಮನೆ-ಮನ ನಿತ್ಯ ನಂದಾದೀಪದAತೆ ಬೆಳಗುತ್ತಿರುತ್ತದೆ. ಹನುಮಂತ ದೇವರು ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವನಾಗಿದ್ದಾನೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹನುಮಂತ ದೇವರ ದೇವಾಲಯದಲ್ಲಿ ಶನಿವಾರ ಡಿ.೧೦ ರಂದು ನಡೆದ ಕಾರ್ತಿಕೋತ್ಸವ ಕರ‍್ಯಕ್ರಮದ ಸಾನಿಧ್ಯ ವಹಿಸಿದ ಅವರು ದೀಪ ಹಚ್ಚಿ ಮಾತನಾಡಿ, ಹನುಮಂತ ದೇವರಿಗೆ ಶತ-ಶತಮಾನಗಳ ಐತಿಹಾಸಿಕ ಇತಿಹಾಸವಿದೆ ಎಂದರು.
ಸಂಭ್ರಮದಿAದ ನಡೆದ ಕಾರ್ತಿಕೋತ್ಸವ : ಬೆಟಗೇರಿ ಗ್ರಾಮದ ಹನುಮಂತ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರದಂದು ಸಂಭ್ರಮದಿAದ ನಡೆದವು. ಬೆಳೆಗ್ಗೆ ೬ ಗಂಟೆಗೆ ಹನುಮಂತ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಕುಂಕುಮ, ಎಲೆ ಪೂಜೆ, ಪುರ ಜನರಿಂದ ಪೂಜೆ, ನೈವೈದ್ಯ ಸಮರ್ಪನೆ ಜರುಗಿ, ರಾತ್ರಿ ೮ ಗಂಟೆಗೆ ದೀಪೋತ್ಸವ, ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಾಯಿ, ಕಾರಿಕ ಹಾರಿಸುವ, ಸಿಹಿ ಹಂಚುವದು ವೈಭವದಿಂದ ನಡೆಯಿತು. ಇಲ್ಲಿಯ ಹನುಂತ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ವತಿಯಿಂದ ಶ್ರೀಗಳು, ಗಣ್ಯರು, ದಾನಿಗಳನ್ನು ಸತ್ಕರಿಸಲಾಯಿತು. ಸ್ಥಳೀಯ ಕರಡಿ ಮಜಲು ತಂಡದವರಿAದ ಕರಡಿ ಮತ್ತು ಕಣಿ ವಾದನ ಎಲ್ಲರ ಗಮನ ಸೆಳೆದವು, ಮಹಾಪ್ರಸಾದ ಜರುಗಿ ಪ್ರಸಕ್ತ ಕಾರ್ತಿಕೋತ್ಸವ ಕಾರ್ಯಕ್ರಮ ಸಂಪನ್ನಗೊAಡಿತು. ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ, ಭಾವದ ಪರಾಕಷ್ಠೆ ಮರೆದರು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತರು, ಶರಣರು, ರಾಜಕೀಯ ಮುಖಂಡರು, ಗಣ್ಯರು, ಗ್ರಾಮಸ್ಥರು, ಭಕ್ತರು, ಸ್ಥಳೀಯ ಹನುಮಂತ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮತ್ತೀತರರು ಇದ್ದರು.