ನೆಮ್ಮದಿ ಜೀವನಕ್ಕಾಗಿ ರೂಪಿಸಿದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ- ರಾಜೀವ ಗೋಳಸಾರ!

ಯುವ ಭಾರತ ಸುದ್ದಿ ಗೋಕಾಕ: ನೆಮ್ಮದಿ ಜೀವನಕ್ಕಾಗಿ ರೂಪಿಸಿದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ ಎಂದು ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿಗಳಾದ ರಾಜೀವ ಗೋಳಸಾರ ಹೇಳಿದರು.
ಸೋಮವಾರದಂದು ನಗರದ ಜಿ ಎನ್.ಎಸ್ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸಾಮಾಜಿಕ ನ್ಯಾಯ ತಾಲೂಕು ಘಟಕ ಮತ್ತು ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹುಕ್ಕುಗಳ ದಿನಾಚರಣೆ ಮತ್ತು ಅಂತರರಾಷ್ಟ್ರೀಯ ವಿಕಲಚೇತನ ದಿನಾಚರಣೆ ನಿಮಿತ್ತ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬ ನಾಗರಿಕರು ಕಾನೂನುಗಳ ಸಂರ್ಪೂಣ ಅರಿವನ್ನು ಅರಿತುಕೊಂಡಾಗಲೆ ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುವುದು. ಕಾನೂನುಗಳ ಪಾಲನೆಯಿಂದ ನೆಮ್ಮದಿಯ ಬದುಕು ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಾಲೂಕು ಅಧ್ಯಕ್ಷೆ ವೈಶಾಲಿ ಭರಭರಿ ಹಾಗೂ ಮಹಿಳಾ ಜಿಲ್ಲಾಧ್ಯಕ್ಷೆ ಎಸ್.ಎಚ.ಬನ್ನೂರ ಇವರು ಮಾನವ ಹಕ್ಕುಗಳ ಹಾಗೂ ಸಾಮಾಜಿಕ ನ್ಯಾಯಗಳ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಆಯೋಗ ಮತ್ತು ಸಾಮಾಜಿಕ ನ್ಯಾಯ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ತಾವಂಶಿ, ಶಾಮಾನಂದ ಪೂಜೇರಿ,ತಾಲೂಕು ಅಧ್ಯಕ್ಷೆ ಎಂ.ಡಿ.ಜಕಾತಿ, ರಾಮಚಂದ್ರ ಕಾಕಡೆ, ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ನಸರೀನ ಕೊಣ್ಣೂರ ಇದ್ದರು.
YuvaBharataha Latest Kannada News