Breaking News

ವೀರಭದ್ರೇಶ್ವರ ಕಾರ್ತಿಕೋತ್ಸವದ ಪ್ರವಚನ ಮಂಗಲೋತ್ಸವ!

Spread the love

ವೀರಭದ್ರೇಶ್ವರ ಕಾರ್ತಿಕೋತ್ಸವದ ಪ್ರವಚನ ಮಂಗಲೋತ್ಸವ!

ಯುವ ಭಾರತ‌ ಸುದ್ದಿ ದೇವರಹಿಪ್ಪರಗಿ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಸುಮಾರು 5 ದಿನಗಳ ಕಾಲ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ನಿಮಿತ್ತ ಮಂಗಳವಾರ ಗಂಗಾ ಸ್ಥಾನಕ್ಕೆ ಹೋಗಿ ಬರುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆಯ 10ನೇ ವರ್ಷದ ಪ್ರಯುಕ್ತ ಸುಮಾರು 5ದಿನಗಳ ಕಾಲ ಜಡಿಮಠದ ಜಡಿ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಹಾಗೂ ಸದಯ್ಯನ ಮಠದ ವೀರಗಂಗಾಧರ ಶಿವಾಚಾರ್ಯರು ಸಾನಿಧ್ಯದಲ್ಲಿ ನಡೆದ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ನೆರೆದ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಅದ್ಧೂರಿಯಾಗಿ ನಡೆಯಿತು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಕಾರ್ತಿಕೋತ್ಸವದ ಮುಕ್ತಾಯ ಹಾಗೂ ಪ್ರವಚನದ ಮಂಗಲೋತ್ಸವ ಸಮಾರಂಭದ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಯುವತಿಯರು ಕಳಸ ಕುಂಬಗಳೊಡನೆ ಪಲ್ಲಕ್ಕಿ ಹಿಂದೆ ವಿವಿಧ ಸಂಗೀತಮೇಳ, ಭಜನೆ, ಡೊಳ್ಳು ಕುಣಿತ, ಬಾಜಿ ಭಜಂತ್ರಿಗಳ ಮೂಲಕ ಅಪಾರ ಸಂಖ್ಯೆಯ ಭಕ್ತ ಸಮೂಹ ಹೆಜ್ಜೆ ಹಾಕಿದರು. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಗಂಗೆ ಸ್ಥಳಕ್ಕೆ ಮೆರವಣಿಗೆಯಲ್ಲಿ ಸುಮಾರು 21ಜನ ಪುರವಂತರ ನೂರಾರು ಭಕ್ತಾದಿಗಳು ಶಸ್ತ್ರಗಳನ್ನು ಹಾಕಿಸಿಕೊಂಡು ಭಕ್ತಿ ಭಾವ ಮೆರೆದವರು ಶಸ್ತ್ರ ಹಾಕಿಸುವಾಗ ದೇವರ ಹೆಸರಿನಲ್ಲಿ ಜಯ ಘೋಷಣೆ ಮುಗಿಲು ಮುಟ್ಟಿತು. ಬೆಳಗ್ಗೆಯಿಂದಲೇ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀಗಳ ನೇತೃತ್ವದಲ್ಲಿ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ ಕಲ್ಮೇಶ್ವರ ದೇವಸ್ಥಾನದ ಗಂಗೆ ಪೂಜೆ ನೆರವೇರಿಸಿದರು. ನಂತರ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಅನ್ನ ಸಂತರ್ಪಣ ಕಾರ್ಯಕ್ರಮ ನೆರವೇರಿತು.

ಇದೇ ಸಂದರ್ಭದಲ್ಲಿ ಅವೂಗೇಶ್ವರ ತಪೋಧಾಮ ಪರದೇಶಿ ಮಠದ ಶ್ರೀಗಳಾದ ಶಿವಯೋಗಿ ಸ್ವಾಮಿಗಳು, ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಚೆನ್ನವೀರ ಕುದರಿ, ಬಾಬುಗೌಡ ಜಿಡ್ಡಿಮನಿ, ಪ್ರಭು ಹಿರೇಮಠ, ಸಂಗನಗೌಡ ಪಾಟೀಲ, ತೇಜಪ್ಪ ಕಕ್ಕಳಮೇಲಿ, ರಮೇಶ ಮಾಶಾನವರ, ಮುದುಕಪ್ಪ ದುತ್ತರಗಾಂವಿ, ಬಸಪ್ಪ ಮಿಂಚನಾಳ,ಜಗದೇವ ಮಾಸ್ತಾರ ದಾನಗೊಂಡ, ಅರ್ಚಕರಾದ ವಿನೋದ್ ನಾಸಿಮಠ, ಶ್ರೀಶೈಲ್ ಯಾಳಗಿ, ಅಶೋಕ ಮಾಶಾನವರ, ಶಾಂತಪ್ಪ ಯಾಳಗಿ, ದೇವೇಂದ್ರಪ್ಪ ಬಾಸ್ಕುರ್ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಇತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ-ಶಾಸಕ ರಮೇಶ ಜಾರಕಿಹೊಳಿ.!

Spread the loveಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ-ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ದೇಶಕ್ಕೆ …

Leave a Reply

Your email address will not be published. Required fields are marked *

fourteen − eight =