ಬಸವನಬಾಗೇವಾಡಿನಲ್ಲಿ ಬಿಜೆಪಿ ಪ್ರತಿಭಟನೆ!
ಯುವ ಭಾರತ ಸುದ್ದಿ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಬಟ್ಟಾಲ ಭುಟ್ಜೋ ಜರ್ದಾರಿ ಪ್ರತಿಕೃತಿಯನ್ನು ದಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಮುಖಂಡರಾದ ಅಪ್ಪುಗೌಡ ಪಾಟೀಲ, ವಿನೂತ ಕಲ್ಲೂರ, ನೀಲಪ್ಪ ನಾಯಕ, ವಿ.ಎಂ.ಪರೆಣ್ಣನವರ, ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿ, ಅಮೇರಿಕಾ ದೇಶದ ನ್ಯೂಯಾರ್ಕ್ ನಗರದಲ್ಲಿ ನಡೆದ ಸಮ್ಮೇಳನದಲ್ಲಿ ಪಾಕಿಸ್ತಾನ ದೇಶದ ವಿದೇಶಾಂಗ ಸಚಿವ ದೇಶದ ಹೆಮ್ಮೆಯ ಪ್ರದಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಮಾತನಾಡಿರುವುದು ಖಂಡನೀಯ. ಇದರ ಕುರಿತು ಪ್ರತಿಯೊಬ್ಬರೂ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ಕಳುಹಿಸಬೇಕು. ಹಿಂದಿ ಚಲನಚಿತ್ರವಾದ ಪಠಾಣದಲ್ಲಿ ಶಾರುಕಖಾನ, ದೀಪಿಕಾ ಪಡುಕೋಣೆ ಇವರು ಧರ್ಮದ ಬಗ್ಗೆ ಅವಹೇಳನಕಾರಿಯಾಗುವಂತೆ ಕೇಸರಿ, ಹಸಿರು ಬಣ್ಣದ ವಸ ತೊಟ್ಟು ಅಶ್ಲೀಲವಾಗಿ ಕಾಣಿಸಿಕೊಂಡಿದ್ದಾರೆ. ಇಂತಹ ಚಿತ್ರವನ್ನು ಯಾರೂ ನೋಡಬಾರದು. ಧರ್ಮದ ಕುರಿತು ಅವಹೇಳನ ಮಾಡುವ ಚಿತ್ರಗಳು ಪ್ರದರ್ಶನವಾಗದಂತೆ ನೋಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಉಗ್ರರ ಪರವಾಗಿ ಹೇಳಿಕೆ ನೀಡಿದ್ದರ ಬಗ್ಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಕಚೇರಿಯ ಶಿರಸ್ತೇದಾರರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಂಬೋಜಿ ಪವಾರ,ಅಣ್ಣು ಕುಂಬಾರ, ಭಾಗ್ಯರಾಜ್ಯ ಸೊನ್ನದ, ಸಿದ್ದು ಆದಿಗೊಂಡ, ಮಲಕಾಜಿ ಅವಟಿ, ಎನ್.ಎಸ್.ಪಾಟೀಲ, ಎಸ್.ಎ.ಯರನಾಳ, ಸಿದ್ದಲಿಂಗೇಶ ಹಿರೇಮಠ, ಶ್ರೀಧರ ಕುಂಬಾರ, ವಿನೋದ ಗಬ್ಬೂರ, ಮಹಾಂತೇಶ ಮನಗೂಳಿ, ಪರಶುರಾಮ ಅಡಗಿಮನಿ, ಸುನೀಲ ಬೇದರಕರ ಇತರರು ಭಾಗವಹಿಸಿದ್ದರು.