ರಮೇಶ ಜಾರಕಿಹೊಳಿ ಛಲದಿಂದ ಅನೇಕ ವರ್ಷಗಳ ಬೇಡಿಕೆ ಘಟ್ಟಿ ಬಸವಣ್ಣ ಆಣೆಕಟ್ಟು ಬೃಹತ್ ಯೋಜನೆಗೆ ಮಂಜುರಾತಿ ನೀಡಲಾಗಿದೆ-ಸಚಿವ ಗೋವಿಂದ ಕಾರಜೋಳ!
ಯುವ ಭಾರತ ಸುದ್ದಿ ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರ ಛಲದಿಂದ ಅನೇಕ ವರ್ಷಗಳ ಬೇಡಿಕೆ ಘಟ್ಟಿ ಬಸವಣ್ಣ ಆಣೆಕಟ್ಟು ೯೯೦ಕೋಟಿ ರೂಗಳ ಬೃಹತ್ ಯೋಜನೆಗೆ ಮಂಜುರಾತಿ ನೀಡಲಾಗಿದೆ. ಇಡಿ ಬೆಳಗಾವಿ ಜಿಲ್ಲೆಗೆ ೪೫೦೦ ಕೋಟಿಗೂ ಹೆಚ್ಚು ನೀರಾವರಿ ಯೋಜನೆಗಳನ್ನು ರಮೇಶ ಜಾರಕಿಹೊಳಿ ತಾವು ಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದು, ಸದ್ಯ ಕಾಮಗಾರಿ ಆರಂಭವಾಗಿವೆ. ರಮೇಶ ಜಾರಕಿಹೊಳಿ ಅವರು ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಅವರು, ರವಿವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಹಾಗೂ ಕೋಟೆ ದುರಸ್ಥಿಕಾರ್ಯಕ್ಕೆ ೨೦೧೦ರಲ್ಲಿ ನಾನು ಕನ್ನಡ ಸಂಸ್ಕೃತಿ ಮಂತ್ರಿಯಾಗಿದ್ದಾಗ ೫೦ಲಕ್ಷ ರೂಪಾಯಿ ಮಂಜುರು ಮಾಡಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದೆ. ೨೦೧೨ರಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ನಾನೇ ಆದೇಶ ಮಾಡಿದ್ದೆನೆ. ೬೦ವರ್ಷ ಆಡಳಿತ ಮಾಡಿದ ಕಾಂಗ್ರೇಸ್ ಪಕ್ಷ ಈಗ ಛತ್ರಪತಿ ಶಿವಾಜಿಮಹಾರಾಜರ ನೆನಪು ಬಂದಿದೆ. ಇಷ್ಟು ದಿನ ಎಲ್ಲಿದ್ದರು. ನಾನು ಮಾಡಿರುವ ಆದೇಶಗಳನ್ನು ಬೇಕಾದರೆ ತೆಗೆದು ನೋಡಿ. ಶಿಷ್ಟಾಚಾರ ಮೂಲಕ ಮುಖ್ಯಮಂತ್ರಿಯವರಿAದ ಮಾಡಲಾದ ಉದ್ಘಾಟನೆ ನಂತರ ಯಾರು ಮರುಮಾಡಿದರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಕಾಂಗ್ರೇಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗೋಕಾಕ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವದು.
ಶಾಸಕ ಮಾಡಾಳ ವಿರುಪಾಕ್ಷ ಪುತ್ರ ಪ್ರಶಾಂತ ಬಂಧನ ಪ್ರಕರಣ ನಿಸ್ಪಕ್ಷಪಾತವಾಗಿ ತನಿಖೆ ಮಾಡುತ್ತೆವೆ. ಅವನೇನು ನಮ್ಮ ಪಕ್ಷದ ಪದಾಧಿಕಾರಿಯಲ್ಲ. ಆತ ಸರಕಾರಿ ನೌಕರ ಹೀಗಾಗಿ ನಮ್ಮ ಪಕ್ಷಕ್ಕೆ ಯಾವುದೇ ಮುಜುಗರವಿಲ್ಲ. ಸಿದ್ಧರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರಕಾರ ಲೋಕಾಯುಕ್ತವನ್ನು ಬಂದ್ ಮಾಡಿ, ತಮ್ಮ ಮೇಲಿನ ೬೦ಹಗರಣಗಳನ್ನು ಮುಚ್ಚಿಹಾಕಿದ್ದಾರೆ. ಆದರೆ ಬಿಜೆಪಿ ಹಾಗೇ ಮಾಡಲ್ಲ. ಕಾನೂನು ಇರುವದು ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲು ಅದನ್ನು ನಮ್ಮ ಸರಕಾರ ಮಾಡುತ್ತಿದೆ. ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಡುವ ಕೇಲಸ ಮಾಡಿತ್ತು. ಅಲ್ಲದೇ ಆಗ ಮುಖ್ಯಮಂತ್ರಿಗಳ ಪರ್ಮಿಷನ್ ಪಡೆದು ರೇಡÀ ಮಾಡುವ ಮತ್ತು ಚಾರ್ಜಶೀಟ್ ಮಾಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಬಿಜೆಪಿ ಸರಕಾರ ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರ ನೀಡಿದ ಹಿನ್ನಲೆ ಭ್ರಷ್ಟಾಚಾರಿಗಳು ಬಲೆಗೆ ಬಿಳುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತಪ್ಪು ಮಾಡಿದವರನ್ನು ಹಿಡಿದುಹಾಕುವ ಕೇಲಸ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಮ್ಮ ಸರಕಾರ ೫ಸಾವಿರ ಕ್ಕೂ ಅಧಿಕ ಕೋಟಿ ರೂ ನೀರಾವರಿ ಯೋಜನೆಗಳಿಗೆ ಹಣ ನೀಡಿದೆ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ. ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊAಡು ಜನರ ಬಳಿಗೆ ತೆರಳಿದ್ದೆವೆ. ಬರುವ ಚುನಾವಣೆಯಲ್ಲಿ ೧೫೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ ಆರೋಪಕ್ಕೆ ಇದು ಸೂಕ್ತ ವೇದಿಕೆ ಅಲ್ಲ. ಅತಿ ಶೀಘ್ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಠಿಣ ಉತ್ತರ ನೀಡುತ್ತೆನೆ. ಘಟ್ಟಿ ಬಸವಣ್ಣ ಆಣೆಕಟ್ಟು ನಿರ್ಮಾಣಕ್ಕೆ ಪೂಜೆ ಅಷ್ಟೇ ಮಾಡಿದ್ದೆವೆ. ಇನ್ನು ಸರಕಾರದಿಂದ ಮುಂದಿನ ದಿನಗಳಲ್ಲಿ ಅಡಿಗಲ್ಲು ಕಾರ್ಯಕ್ರಮವನ್ನು ಮಾಡಲಾಗುವದು. ಆಗ ಸರಕಾರದ ಶಿಷ್ಠಾಚಾರದ ಮೂಲಕ ಆಮಂತ್ರಣ ಪತ್ರಿಕೆಯೊಂದಿಗೆ ಅಡಿಗಲ್ಲು ನೆರವೇರಿಸಲಾಗುವದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಜಯ ಪಾಟೀಲ, ವಿಜಯ ಸಂಕಲ್ಪ ಯಾತ್ರೆ ಸಂಚಾಲಕ ಹಾಗೂ ಮಾಜಿ ವಿಧಾನ ಪರಿಷತ ಸದಸ್ಯ ಅರುಣ ಶಹಾಪೂರ, ಸಹಸಂಚಾಲಕ ವಿವೇಕ ಡಬ್ಬಿ, ಮಹಾಂತೇಶ ಬಾಳಿಕಾಯಿ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದನ್ನವರ, ಲಕ್ಷö್ಮಣ ತಪಸಿ, ಸುರೇಶ ಪಾಟೀಲ, ಶಶಿಧರ ದೇಮಶೆಟ್ಟಿ ಸೇರಿದಂತೆ ಇತರರು ಇದ್ದರು.