Breaking News

ರಮೇಶ ಜಾರಕಿಹೊಳಿ ನಿಮ್ಮೆಲ್ಲರ ಆಶಿರ್ವಾಧದಿಂದ 6ಬಾರಿ ಆಯ್ಕೆಯಾಗಿ 7ನೇ ಬಾರಿ ಆಯ್ಕೆಗೆ ಆಶಿರ್ವಧಿಸಿ-ಸಚಿವ ಮುರುಘೇಶ ನಿರಾಣಿ!

Spread the love

ರಮೇಶ ಜಾರಕಿಹೊಳಿ ನಿಮ್ಮೆಲ್ಲರ ಆಶಿರ್ವಾಧದಿಂದ 6ಬಾರಿ ಆಯ್ಕೆಯಾಗಿ 7ನೇ ಬಾರಿ ಆಯ್ಕೆಗೆ ಆಶಿರ್ವಧಿಸಿ-ಸಚಿವ ಮುರುಘೇಶ ನಿರಾಣಿ!

ಯುವ ಭಾರತ ಸುದ್ದಿ ಗೋಕಾಕ: ದೇಶದಲ್ಲಿ ಕಾಂಗ್ರೇಸ್ ಪಕ್ಷ 6೦ವರ್ಷಗಳ ಆಡಳಿತ ಅವಧಿಯಲ್ಲಿ ಮಾಡಲಾಗದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರಕಾರ ೯ವರ್ಷಗಳ ಕಡಿಮೆ ಅವಧಿಯಲ್ಲಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಅವರು, ನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ಯ ಹಮ್ಮಿಕೊಂಡಿದ್ದ ರೋಡ ಶೋನಲ್ಲಿ ಪಾಲ್ಗೊಂಡು ಮಾತನಾಡುತ್ತ, ಮೋದಿಯವರ ನೇತ್ರತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಿದೆ ಎಂದರು.

ಗೋಕಾಕ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ಯ ಹಮ್ಮಿಕೊಂಡಿದ್ದ ರೋಡ ಶೋ

ದೇಶದ ಸ್ವಾತಂತ್ರö್ಯ ನಂತರ 6೦ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೇಸ್‌ದಿ0ದ ದೇಶದ ಅಭಿವೃದ್ಧಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ದೇಶದ ಸಮಗ್ರ ಅಭಿವೃದ್ಧಿಯಾಗಿದ್ದು ಜನತೆಯ ಕಣ್ಣು ಮುಂದಿದೆ. ಕರೋನಾದಂತಹ ಸಂಕಷ್ಟ ಸಮಯದಲ್ಲಿ ಇಡಿ ಪ್ರಪಂಚವೇ ಕೊಂಡಾಡುವ ನಿಟ್ಟಿನಲ್ಲಿ ೧೩೦ಕೋಟಿ ದೇಶವಾಸಿಗಳಿಗೆ ಉಚಿತ ವ್ಯಾಕ್ಸಿನ್ ನೀಡಿದ್ದಲ್ಲದೇ ನಮ್ಮ ನರೆಹೊರೆಯ ರಾಷ್ಟçಗಳಿಗೂ ಕೊಟ್ಟು ಮಾನವಿಯತೆ ಮೆರೆದರು. ಬಿಜೆಪಿ ಪಕ್ಷದಿಂದ ಮಾತ್ರ ಉತ್ತಮ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಸಾಧ್ಯ ಎಂಬುದು ಜನತೆಗೆ ಮನಗಣನೆಯಾಗಿದೆ ಎಂದರು.

ಗೋಕಾಕ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ಯ ಹಮ್ಮಿಕೊಂಡಿದ್ದ ರೋಡ ಶೋನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡುತ್ತಿರುವದು.

ಸಚಿವ ಮುರುಘೇಶ ನಿರಾಣಿ ಮಾತನಾಡುತ್ತ, ಪ್ರಧಾನಿಯವರ ಮಾರ್ಗದರ್ಶನದಲ್ಲಿ ದೇಶದಲ್ಲಿ ಔದ್ಯೋಗಿಕ ಕ್ರಾಂತಿ ನಡೆಯುತ್ತಿದೆ. ರಾಜ್ಯದಲ್ಲೂ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲು ಶ್ರಮಿಸಲಾಗುತ್ತಿದೆ. ರಾಜ್ಯದಲ್ಲಿ ಸಾಲ ಮನ್ನಾ ಮಾಡಿದ ಪ್ರಥಮ ಪಕ್ಷ ಬಿಜೆಪಿಯಾಗಿದೆ. ಉಚಿತ ಶಿಕ್ಷಣ, ಮಸಾಶನಗಳನ್ನು ಹೆಚ್ಚಿಸಲಾಗಿದೆ. ಮಹಿಳೆಯರ ಶಿಕ್ಷಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಎಸ್‌ಸಿ ಮತ್ತು ಎಸ್‌ಟಿ ಜನರಿಗೆ ಕೈಗಾರಿಕೆ ಪ್ರಾರಂಭಿಸಲು ಜಮೀನು ಖರೀಧಿಗೆ ಶೇ೭೫ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು ಇವುಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ರಮೇಶ ಜಾರಕಿಹೊಳಿ ಅವರು ನಿಮ್ಮೆಲ್ಲರ ಆಶಿರ್ವಾಧದಿಂದ ೬ಬಾರಿ ಆಯ್ಕೆಯಾಗಿ ೭ನೇ ಬಾರಿ ಆಯ್ಕೆಗೆ ಆಶಿರ್ವಧಿಸಿ. ಗೋಕಾಕ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದ್ದು ಇನ್ನು ಹೆಚ್ಚಿನ ಅಭಿವೃದ್ಧಿಗೆ ಅವರನ್ನು ೧ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆ ಮಾಡುವಂತೆ ವಿನಂತಿಸಿದರು.

ಗೋಕಾಕ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ಯ ಹಮ್ಮಿಕೊಂಡಿದ್ದ ರೋಡ ಶೋನಲ್ಲಿ ಶಾಸಕ ರಮೇಶ ಜಾರಕಿಹೊಳಿ ಮಾತನಾಡುತ್ತಿರುವದು.

ಶಾಸಕ ರಮೇಶ ಜಾರಕಿಹೊಳಿ ಅವರು ಮಾತನಾಡುತ್ತ ನಿಮ್ಮೆಲ್ಲರ ಆಶಿರ್ವಾಧದಿಂದ ೬ಬಾರಿ ಶಾಸಕನಾಗಿ ರಾಜ್ಯ ಮಟ್ಟದ ನಾಯಕನಾಗಿದ್ದೆನೆ. ಬರುವ ಚುನಾವಣೆಯಲ್ಲಿ ಜಿಲ್ಲೆಯಿಂದ ೧೫ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವ ಸಂಕಲ್ಪ ಮಾಡಿದ್ದು ಇದಕ್ಕೆ ತಾವೆಲ್ಲರೂ ಆಶಿರ್ವಧಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸರಕಾರ ರಚಿಸಲಿದ್ದು, ಉತ್ತರ ಕನಾಟಕದ ನೀರಾವರಿ ಅಭಿವೃದ್ಧಿಗಾಗಿ ಈಗಾಗಲೇ ೫೭೦೦ಕೋಟಿ ಮಂಜೂರು ದೊರೆತಿದ್ದು ಇನ್ನು ೯ಸಾವಿರ ಕೋಟಿ ರೂಗಳ ಅನುದಾನದ ಬಿಡುಗಡೆಯೊಂದಿಗೆ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸಲಾಗುವದು. ನಿವೆಲ್ಲರೂ ಆಶಿರ್ವಧಿಸಿ ನನ್ನನ್ನು ಮತ್ತೊಮ್ಮೆ ಶಾಸಕನನ್ನಾಗಿ ಮಾಡಲು ವಿನಂತಿಸಿದ ಅವರು, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವದರೊಂದಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಿ ಭಾರತ ದೇಶವನ್ನು ವಿಶ್ವದ ದೊಡ್ಡಣ್ಣನನ್ನಾಗಿ ಮಾಡೋಣ ಎಂದರು.

ಗೋಕಾಕ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ಯ ಹಮ್ಮಿಕೊಂಡಿದ್ದ ರೋಡ ಶೋ

 

ನಗರದ ಬ್ಯಾಳಿ ಕಾಟಾ ಹತ್ತಿರವಿರುವ ಕೊಳವಿ ಹನುಮಂತ ದೇವಸ್ಥಾನದಲ್ಲಿ ಗೊ ಪೂಜೆಯೊಂದಿಗೆ ಪ್ರಾರಂಭಗೊAಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯೂ 15ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು, ವಿವಿಧ ವಾದ್ಯ ಮೇಳ, ಸುಮಂಗಲಿಯರ ಆರತಿಯೊಂದಿಗೆ ನಗರದ ಬಾಫನಾ ಕೂಟ, ಸಂಗೋಳ್ಳಿ ರಾಯಣ್ಣ ವೃತ್ತ, ಬಸ್ಸು ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶಾಸಕ ಅನೀಲ ಬೆಣಕೆ, ವಿಜಯ ಸಂಕಲ್ಪ ಯಾತ್ರೆ ಸಂಚಾಲಕ ಅರುಣ ಶಹಾಪೂರ, ಸಹಸಂಚಾಲಕ ವಿವೇಕ ಡಬ್ಬಿ, ಮಹಾಂತೇಶ ಬಾಳಿಕಾಯಿ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದನ್ನವರ, ಮಾಜಿ ಶಾಸಕರುಗಳಾದ ಶಶಿಕಾಂತ ನಾಯ್ಕ, ಎಮ್ ಎಲ್ ಮುತ್ತೆನ್ನವರ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಮಗೋಳ, ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

3 × four =