Breaking News

ಸಮಾಜಶಾಸ್ತ್ರ ಉಪನ್ಯಾಸಕರಿಗಾಗಿ ಡಿ,16 ಹಾಗೂ 17ರಂದು ಎರಡು ದಿನಗಳ ತರಬೇತಿ ಕಾರ್ಯಾಗಾರ!

Spread the love

ಸಮಾಜಶಾಸ್ತ್ರ ಉಪನ್ಯಾಸಕರಿಗಾಗಿ ಡಿ,16 ಹಾಗೂ 17ರಂದು ಎರಡು ದಿನಗಳ ತರಬೇತಿ ಕಾರ್ಯಾಗಾರ!

ಯುವ ಭಾರತ ಸುದ್ದಿ ಕೊಲ್ಹಾರ: ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ,ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ವಿಜಯಪುರ ಹಾಗೂ ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಕೊಲ್ಹಾರ ಇವರ ಸಹಯೋಗದಲ್ಲಿ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಸಮಾಜಶಾಸ್ತ್ರ ಉಪನ್ಯಾಸಕರಿಗಾಗಿ ಡಿ,16 ಹಾಗೂ 17ರಂದು ಎರಡು ದಿನಗಳ ಕಾಲ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ವಿ ವ ಸಂಘದ ಅಧ್ಯಕ್ಷ ಬಿ ಯು ಗಿಡ್ಡಪ್ಪಗೋಳ ವಹಿಸುವರು. ಉದ್ಘಾಟನೆಯನ್ನು ಸಂಗಮೇಶ್ವರ ವಿ ವ ಸಂಘದ ಕಾರ್ಯದರ್ಶಿ ಎಸ್ ಬಿ ಪತಂಗಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್ ಎನ್ ಬಗಲಿ ಭಾಗವಹಿಸುವರು.ಅತಿಥಿಗಳಾಗಿ ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಮ್ ಡಿ ಹೆಬ್ಬಿ, ಪ ಪೂ ಶಿಕ್ಷಣ ಇಲಾಖೆ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಸಂಗಮೇಶ್ವರ ಪ ಪೂ ಕಾಲೇಜ ಪ್ರಾಚಾರ್ಯರ ಡಿ ಎಸ್ ಸಜ್ಜನ,ಬಸರಕೋಡ ಸರ್ಕಾರಿ ಪ ಪೂ ಕಾಲೇಜಿನ ಪ್ರಾಚಾರ್ಯ ಎಸ್ ಎಮ್ ಕಮತರ ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್ ಆರ್ ಉಟಗಿ ಹಾಗೂ ಗೊಳಸಂಗಿ ಬಿ ಎಸ್ ಪವಾರ ಕಾಲೇಜಿನ ಉಪನ್ಯಾಸಕ ಡಾ ಸಿ ಎಂ ಜೋಶಿಯವರನ್ನು ಸನ್ಮಾನಿಸಲಾಗುವದು ಎಂದು ಸಂಗಮೇಶ್ವರ ಪ ಪೂ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಡಾ ಎ ಡಿ ಚವ್ಹಾಣ ಪ್ರಕಟಣೆಗೆ ತಿಳಿಸಿದ್ದಾರೆ.


Spread the love

About Yuva Bharatha

Check Also

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.!

Spread the loveಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕನಲ್ಲಿ ಪ್ರತಿಭಟನೆ.! ಗೋಕಾಕ: ಹುಬ್ಬಳ್ಳಿಯಲ್ಲಿ …

Leave a Reply

Your email address will not be published. Required fields are marked *

2 × 1 =