ಜಿ2೦ ಶೃಂಗಸಭೆಯ ಅಧ್ಯಕ್ಷತೆ ಭಾರತಕ್ಕೆ ದೊರೆತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ- ಜ್ಯೋತಿ ಕೋಲಾರ!
ಯುವ ಭಾರತ ಸುದ್ದಿ ಗೋಕಾಕ: ಜಿ2೦ ಶೃಂಗಸಭೆಯ ಅಧ್ಯಕ್ಷತೆ ಭಾರತಕ್ಕೆ ದೊರೆತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನಾಯಕತ್ವ ಮತ್ತು ಸಾಮರ್ಥ್ಯವನ್ನು ರುಜುವಾತು ಮಾಡಲು ದೊರಕಿದ ಸದಾವಕಾಶವಾಗಿದೆ ಎಂದು ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲಾರ ಹೇಳಿದರು.
ಗೋಕಾಕ ಮಹಿಳಾ ಮೋರ್ಚಾದಿಂದ ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯದಲ್ಲಿ ನಡೆಯುವ ಜಿ೨೦ ಶೃಂಗ ಸಭೆಯ ಲೋಗೊವನ್ನು ಪ್ರಮುಖ ಬೀದಿಗಳಲ್ಲಿ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವದು.
ಅವರು, ಮಂಗಳವಾರದ0ದು ಶಾಸಕ ರಮೇಶ ಜಾರಕಿಹೊಳಿ ಗೃಹ ಕಚೇರಿಯಲ್ಲಿ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಹಿಳಾ ಮೋರ್ಚಾದಿಂದ ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯದಲ್ಲಿ ನಡೆಯುವ ಜಿ೨೦ ಶೃಂಗ ಸಭೆಯ ಲೋಗೊವನ್ನು ಪ್ರಮುಖ ಬೀದಿಗಳಲ್ಲಿ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಅವರ ನೇತೃತ್ವದಲ್ಲಿ ನಮ್ಮ ದೇಶದ ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸುಮಾರು ೨೦೦ಕ್ಕೂ ಅಧಿಕ ಅಂತರಾಷ್ಟ್ರೀಯ ಸಭೆಗಳು ನಡೆಯಲಿದ್ದು ಇದು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಲಿದೆ ಈ ಸಂತೋಷದ ಸಂಗತಿಯನ್ನು ಸಂಭ್ರಮಿಸಲು ನಾವೆಲ್ಲರೂ ನಮ್ಮ ಮನೆಯ ಮುಂದೆ ಈ ರೀತಿಯ ರಂಗೋಲಿಯನ್ನು ಬಿಡಿಸುವ ಮೂಲಕ ವಿಶ್ವಗುರು ಭಾರತದ ಈ ಹೊಸ ಮನ್ವಂತರಕ್ಕೆ ಶುಭಕೋರೋಣ ಎಂದರು.
ಈ ಸಂದರ್ಭದಲ್ಲಿ ಗೋಕಾಕ ನಗರ ಮಂಡಲ ಮಹಿಳಾ ಮೋರ್ಚ ಅಧ್ಯಕ್ಷಿ ರಾಜೇಶ್ವರಿ ಒಡೆಯರ್, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಶಾಸಕರ ಕಚೇರಿ ಸಹಾಯಕರಾದ ಸುರೇಶ ಸನದಿ, ಕಾಂತು ಎತ್ತಿನಮನಿ, ಪಾರ್ವತಿ ಹಳ್ಳೂರ, ಗೀತಾ ಕಂಬಾರ, ಸಂಗೀತಾ ಗೌಡರ, ವಿಜಯಲಕ್ಷಿ ಮಾಲದಿನ್ನಿ, ಮೀನಾಕ್ಷಿ ಅಂದಾನಿ, ಸವೀತಾ ಪಾಟೀಲ, ಗೀತಾ ಜರತಾರಕರ ಸೇರಿದಂತೆ ಇತರರು ಇದ್ದರು.