Breaking News

ರವಿವಾರ ದಿ.12 ರಂದು ಬೃಹತ್ ಕ್ಷತ್ರೀಯ ಮರಾಠಾ ಸಮಾವೇಶ!

Spread the love

ರವಿವಾರ ದಿ.12 ರಂದು ಬೃಹತ್ ಕ್ಷತ್ರೀಯ ಮರಾಠಾ ಸಮಾವೇಶ!


ಗೋಕಾಕ: ಕ್ಷತ್ರೀಯ ಮರಾಠಾ ಸಮಾಜದ ವತಿಂದ ಗೋಕಾಕ ತಾಲೂಕು ಮಟ್ಟದ ಗುರುವಂದನಾ ಕಾರ್ಯಕ್ರಮ ಹಾಗೂ ಬೃಹತ್ ಕ್ಷತ್ರೀಯ ಮರಾಠಾ ಸಮಾವೇಶ ಇದೆ ದಿ.12ರಂದು ಮುಂಜಾನೆ 10ಗಂಟೆಗೆ ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಮರಾಠಾ ಸಮಾಜದ ಮುಖಂಡ ಜ್ಯೋತಿಭಾ ಸುಭಂಜಿ ಹೇಳಿದರು.
ಅವರು, ನಗರದ ಮರಾಠಾ ಗಲ್ಲಿಯ ಶ್ರೀ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ನಡೆದ ಪತ್ರಿಕಾಗೊಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ಮರಾಠಾ ಸಮಾಜದ ಗೋಸಾಯಿ ಮಹಾಸಂಸ್ಥಾನ ಮಠ ಶ್ರೀ ಭವಾನಿ ದತ್ತ ಪೀಠದ ಶ್ರೀ ಮಂಜುನಾಥ ಭಾರತಿ ಮಹಾಸ್ವಾಮಿಗಳು ಪೀಠಾಧಿಕಾರಿಗಳಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವದರಿಂದ ಗುರುವಂದನಾ ಕಾರ್ಯಕ್ರಮ ಮತ್ತು ಸಮಾಜದ ಯುವ ಪೀಳಿಗೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾಜ ಬಾಚಿಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಮರಾಠಾ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಹಿಂದೆ ಆಯೋಗಗಳು ಮಾಡಿರುವ ಶಿಫಾರಸ್ಸಿನಂತೆ ೩ಬಿ ಯಿಂದ ೨ಎಗೆ ಸೇರಿಸಬೇಕು. ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನ ಮತ್ತು ಸಮುದಾಯ ಭವನ ನಿರ್ಮಾಣ. ಸುವರ್ಣ ಸೌಧದ ಎದುರು ೧೦೧ ಪೂಟಿನ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಕಂಚಿನ ಪುತ್ಥಳಿ ಸ್ಥಾಪಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಅವರ ಮೂಲಕ ರಾಜ್ಯ ಸರಕರಾಕ್ಕೆ ಮನವಿ ಮಾಡಲಾಗುವದು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಭವಾನಿ ದತ್ತ ಪೀಠದ ಶ್ರೀ ಮಂಜುನಾಥ ಭಾರತಿ ಮಹಾಸ್ವಾಮಿಗಳು, ಶ್ರೀ ಸದ್ಗುರು ಗುರುಪುತ್ರ ಮಹಾರಾಜರು ವಹಿಸಿಲಿದ್ದು, ಮುಖ್ಯಅತಿಥಿಗಳಾಗಿ ಶಾಸಕರುಗಳಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ, ಅನೀಲ ಬೆನಕೆ, ಅಂಜಲಿ ನಿಂಬಾಳಕರ, ಪ್ರಮುಖ ಭಾಷಣಕಾರರಾಗಿ ಪ್ರೋ.ಮಧುಕರ ಪಾಟೀಲ, ಕುಮಾರಿ ಪ್ರಜಾ ಮಿಲ್ಕೆ ಸೇರಿದಂತೆ ಜಿಲ್ಲೆಯ ಮರಾಠಾ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
ಇನ್ನೋರ್ವ ಮುಖಂಡ ಪ್ರಕಾಶ ಮುರಾರಿ, ಪರಶುರಾಮ ಭಗತ ಮಾತನಾಡಿ ರವಿವಾರ ನಡೆಯಲಿರುವ ಸಮಾವೇಶದಲ್ಲಿ ಸುಮಾರು ೧೫ಸಾವಿರ ಜನ ಸಮಾಜ ಬಾಂಧವರು ಸೇರಲಿದ್ದು ವೇದಿಕೆಯಲ್ಲಿ ನಮ್ಮ ಬೇಡಿಕೆಗಳನ್ನು ಜನಪ್ರತಿನಿಧಿಗಳಿಗೆ ಮಂಡಿಸುವದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ದಶರಥ ಗುಡ್ಡದಮನಿ, ಪರಶುರಾಮ ಭಗತ ವಿಜಯ ಜಾಧವ, ರಾಜು ಪವಾರ, ಜೀತೇಂದ್ರ ಮಾಂಗಳೇಕರ, ಶಿವಾಜಿ ಗಾಯಕವಾಡ, ವಸಚಿತ ತಹಶೀಲ್ದಾರ, ಭೀಮಶಿ ತಹಶೀಲದಾರ, ಕೃಷ್ಣಾ ಗುಡ್ಡದಮನಿ, ರಾಮಚಂದ್ರ ಕಾಕಡೆ, ಅನೀಲ ಮಿಲ್ಕೆ ಇದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

6 + 8 =