Breaking News

‘ಜನ್ಮದಾತರ ನಿರೀಕ್ಷೆ ಹುಸಿಗೊಳಿಸದಿರಿ-ಶಿಕ್ಷಕ ಜನ್ಮಟ್ಟಿ’

Spread the love

‘ಜನ್ಮದಾತರ ನಿರೀಕ್ಷೆ ಹುಸಿಗೊಳಿಸದಿರಿ-ಶಿಕ್ಷಕ ಜನ್ಮಟ್ಟಿ’

ಯುವ ಭಾರತ ಸುದ್ದಿ ಮಮದಾಪೂರ :
ಗೋಕಾಕ ತಾಲೂಕಿನ ಮಮದಾಪೂರದ ಶ್ರೀ ಮಾರುತಿ ದೇವಸ್ಥಾನ ಆವರಣದಲ್ಲಿ (ಓಕಳಿ ಕೊಂಡದ ಹತ್ತಿರ) ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 25ನೇ ಮಾಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸ್ಥಳೀಯ ಗ್ರಾಮದ ಹಿರಿಯರು, ಗಣ್ಯ ವ್ಯಾಪಾರಸ್ಥರು ಮತ್ತು ಸ್ಥಳೀಯ ಗ್ರಾ. ವಿ. ವಿ. ಸಂಘದ ಆಡಳಿತ ಮಂಡಳಿ ಸದ್ಯಸ್ಯರೂ ಆದ ಶಂಕರ ಖನಗಾಂವಿಯವರು ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋಕಾಕದ ಆದರ್ಶ ಶಿಕ್ಷಣ ಸಂಸ್ಥೆ ಶ್ರೀ ಶಂಕರಲಿಂಗ ಪ್ರೌಢ ಶಾಲೆಯ ಆಂಗ್ಲ ವಿಷಯ ಬೋಧಕರಾದ ಈಶ್ವರ ಎಸ್ ಜನ್ಮಟ್ಟಿ ಪರೀಕ್ಷೆಗಳು ಒಂದು ಸಮಸ್ಯೆಯಾಗಿ ಗೋಚರಿಸದೆ, ಸವಾಲಾಗಿ ಸ್ವೀಕರಿಸುವ, ಸಂತೋಷದಿಂದ ಸ್ವಾಗತಿಸಿ ಎದುರಿಸುವ ಮನೋಪ್ರವೃತ್ತಿಯನ್ನು ಸೃಷ್ಟಿಸಿಕೊಳ್ಳಿ. ಓದಬೇಕಾದ ವಿಷಯಕ್ಕೆ ಕಾಲಾವಕಾಶ ಕಡಿಮೆ ಆದಾಗ, ಪರೀಕ್ಷೆಗಳನ್ನು ಎದುರಿಸುವ ತಯಾರಿ ಅಪೂರ್ಣವಾದಾಗ, ಆತ್ಮವಿಶ್ವಾಸದ ಕೊರತೆಯುಂಟಾದಾಗ, ನಕಾರಾತ್ಮಕ ಯೋಚನೆಗಳು ತಲೆಯೊಳಗೆ ನುಸುಳಿದಾಗ, ಆರೋಗ್ಯ ಕೆಟ್ಟುಹೋದಾಗ, ಕಲಿತದ್ದು ಬೇಗನೆ ಮರೆತು ಹೋದಾಗಲೂ ಆ ಭಯ ಕಾಡಬಹುದು. ಪೋಷಕರ ನಿರೀಕ್ಷೆಯೂ ಇರಲಿ ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಮಕ್ಕಳು ಅಧ್ಯಯನ ಮಾಡಲು ನಿರ್ದಿಷ್ಟ ವೇಳೆ, ಸ್ಥಳ ನಿಗದಿ ಮಾಡಿಕೊಂಡು, ಓದಿದ ವಿಷಯವನ್ನು ಪುನರಾವರ್ತನೆ, ಸ್ಮರಣೆ, ಮನನ, ಚಿಂತನ, ಮಂಥನಗಳು ಮಾಡಿಕೊಳ್ಳುತ್ತಿರಿ. ಪೌಷ್ಠಿಕಾಂಶಗಳನ್ನೊಳಗೊಂಡ ಆಹಾರ, ನಿಯಮಿತ ವ್ಯಾಯಾಮ ಹಾಗೂ ಭಂಗವಿಲ್ಲದ 6 ಗಂಟೆ ಸುಖ ನಿದ್ರೆ ಮಾಡಿ. ಸಕಾರಾತ್ಮಕ ಯೋಚನೆಗಳನ್ನೇ ಬೆಳೆಸಿಕೊಳ್ಳಿ, ಚೆನ್ನಾಗಿ ಇಷ್ಟದಿಂದ ಓದಿ. ಹೀಗಾದರೆ. ಎಲ್ಲಿಯ ಪರೀಕ್ಷಾ ಭಯ? ಜಯ ನಿಮ್ಮದೇ. ಎಂದು ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದರು.

ಆರಂಭದಲ್ಲಿ ಆಫ್ರೀನ್ ಬಾಗವಾನ ಮತ್ತು ಸಫೇರಾ ಬಾಗವಾನ ವಿಜ್ಞಾನ ಗೀತೆಯನ್ನು ಹಾಡಿದರು. ಲಕ್ಷ್ಮೀ ಹೂಗಾರ ಸರ್ವರನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯ ಚಿಂತಕರ ಚಾವಡಿ ಸಂಚಾಲಕ ರ. ವೀ ದೇಮಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಗೌರವ ಸಮರ್ಪಿಸಿ ವಂದಿಸಿದರು. ಯಾಸ್ಮೀನ್ ನದಾಫ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮಿಸಬಾ ನರಸಾಪೂರ ಶರಣೆ ಅಕ್ಕಮಹಾದೇವಿಯವರು ವಚನವನ್ನು ವಾಚಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four × two =