ಗೋಕಾಕ: ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಶನಿವಾರ ವಾಡಿಕೆಯಂತೆ ಹಳೆಯ ಧ್ವಜಸ್ಥಂಬದಲ್ಲಿ ವಕೀಲರ ಸಂಘದ ಪರವಾಗಿ ಹಾಗೂ ಹೊಸ ಧ್ವಜಸ್ಥಂಬದಲ್ಲಿ ನ್ಯಾಯಾಧೀಶರು ೭೪ನೇ ಸ್ವಾತಂತ್ರೊö್ಯÃತ್ಸವ ಆಚರಣೆ ಅಂಗವಾಗಿ ತ್ರೀವರ್ಣ ಧ್ವಜವನ್ನು ನೆರವೇರಿಸಿದರು.
ಮೊದಲು ಹಳೆಯ ಧ್ವಜಸ್ಥಂಬದಲ್ಲಿ ವಕೀಲರ ಸಂಘದ ಅಧ್ಯಕ್ಷ ಉದಯಕುಮಾರ ಬಿ. ಶಿಂಪಿ ಹಾಗೂ ಹೊಸ ಧ್ವಜಸ್ಥಂಬದಲ್ಲಿ ೧೨ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕೆಲವು ಸದಸ್ಯರು ಮತ್ತು ಪದಾಧಿಕಾರಿಗಳು, ನ್ಯಾಯಾಧೀಶರು ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
![](https://yuvabharatha.com/wp-content/uploads/2020/08/15-GKK-3-660x330.jpg)