Breaking News

 ಈವಾಗ ಹೀಗಾದರೆ ಮುಂದೆ ಹ್ಯಾಂಗೆ ? ಎಂದು ರೈತರು ಹೆಸ್ಕಾಂ ಅಧಿಕಾರಿಗಳ ಹಾಗೂ ಶಾಸಕದ್ವಯರ ವಿರುದ್ದ ಆಕ್ರೋಶ!

Spread the love

ಈವಾಗ ಹೀಗಾದರೆ ಮುಂದೆ ಹ್ಯಾಂಗೆ ? ಎಂದು ರೈತರು ಹೆಸ್ಕಾಂ ಅಧಿಕಾರಿಗಳ ಹಾಗೂ ಶಾಸಕದ್ವಯರ ವಿರುದ್ದ ಆಕ್ರೋಶ!

ವಿದ್ಯೂತ್  ಸಮಸ್ಯೆಯಿಂದ ಕಂಗಾಲಾದ ರೈತರು.ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ.
ವಿದ್ಯೂತ್ ಸಮಸ್ಯೆಯಿಂದ ಕಂಗಾಲಾದ ಅಥಣಿ, ಕಾಗವಾಡ ರೈತರು.ಲಕ್ಷಾಂತರ ರೂ ವೆಚ್ಚ ಮಾಡಿ ಬೆಳೆದ ದ್ರಾಕ್ಷಿಗೆ ಕರೆಂಟ್ ಶಾಕ್.
ಶಾಸಕದ್ವಯರಿಗೆ ರೈತರಿಂದ ಘೇರಾವ್ ಎರಡು ವರ್ಷಗಳಿಂದ ವಿದ್ಯೂತ್ ತೊಂದರೆ ಎರಡು-ಮುರು ಬಾರಿ ಕರೆಂಟ್ ಕಟ್ ರೈತರಿಗೆ ತೊಂದರೆ.
ವರದಿ ಸಿದ್ದಯ್ಯ ಹಿರೇಮಠ 
ಯುವ ಭಾರತ ಸುದ್ದಿ  ಕಾಗವಾಡ :  ಕಳೆದ ಎರಡು ತಿಂಗಳುಗಳಿಂದ ಕಾವಾಡ ಹಾಗೂ ಅಥಣಿ ತಾಲೂಕಿನಲ್ಲಿ ಸಮರ್ಪಕವಾಗಿ ವಿದ್ಯೂತ್ ವಿತರಣೆಯಾಗದೇ ಇರುವದರಿಂದ ರೈತರು ಕಂಗಾಲಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈವಾಗ ಹೀಗಾದರೆ ಬೇಸಿಗೆ ಕಾಲದಲ್ಲಿ ಹ್ಯಾಂಗೆ ? ಎಂದು ರೈತರು ಹೆಸ್ಕಾಂ ಅಧಿಕಾರಿಗಳು ಮತ್ತು ಶಾಸಕದ್ವಯರ ವಿರುದ್ದ ರೈತರು ಹರಿಹಾಯ್ದ ಪ್ರಸಂಗ ನಡೆಯಿತು.
 ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ವಿದ್ಯೂತ್ ವಿತರಣಾ ಕೇಂದ್ರದಲ್ಲಿ ಹೆಚ್ಚುವರಿಯಾಗಿ ನೂತನ ೫ ಕೆವಿ ವಿದ್ಯೂತ್ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಲು ಬಂದಾಗ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಈ ಘಟನೆ ಜರುಗಿದೆ.
 ಕಳೆದ ಎರಡು ತಿಂಗಳುಗಳಿಂದ ವಿದ್ಯೂತ್ ಸಮಸ್ಯೆ ವಿಪರಿತವಾಗಿದ್ದು, ಕಾಗವಾಡ ಹಾಗೂ ಅಥಣಿ ತಾಲೂಕಿನ ಹಲವಾರು ಗ್ರಾಮಗಳ ರೈತರಿಗೆ ಸರಿಯಾದ ವಿದ್ಯೂತ್ ವಿತರಣೆಯಾಗದೆ ಬೆಳೆದ ಬೆಳೆಗಳು ನಾಶ್ಯವಾಗುತ್ತಿವೆ.ಡಿಶೆಂಬರ ತಿಂಗಳಲ್ಲೇ ಹೀಗಾದರೆ ಮುಂದೆ ಎಪ್ರೀಲ್ ಮೇ ತಿಂಗಳಲ್ಲಿ ಹೇಗೆ? ಎಂದ ಪ್ರಶ್ನೆ ರೈತರನ್ನು ಕಾಡುತ್ತಿದ್ದೆ.
        ರೈತರು ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ ತಮ್ಮ ಜಮೀನುಗಳನ್ನು ಬ್ಯಾಂಕುಗಳಿಗೆ ಅಡುವಿಟ್ಟು ಸುಮಾರು ೧೦ ರಿಂದ ೧೫  ಕಿಲೋ ಮೀಟರ್  ದೂರದ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಹೆಸ್ಕಾಂ ಇಲಾಖೆ ದಿನದ ೨೪ ಗಂಟೆಗಳಲ್ಲಿ ಕೇವಲ ೩ ಗಂಟೆ ಥ್ರೀಪೇಸ್ ವಿದ್ಯೂತ್ ಕೊಡುತ್ತಿದ್ದಾರೆ. ಒಂದು ದಿನ ಬಿಟ್ಟು ಒಂದು ದಿನ ೬ ಗಂಟೆ ವಿದ್ಯೂತ್ ಕೊಡುತ್ತಾರೆ ಅದರಲ್ಲಿ ಮರ‍್ನಾಲ್ಕು ಬಾರಿ ಟ್ರಿಪ್ ಆಗುತ್ತಿದೆ. ೧೦ ರಿಂದ ೧೫ ಕಿಲೋ ಮೀಟರ ದೂರದ ಕೃಷ್ಣಾ ನದಿಯಿಂದ ರೈತರ ಜಮೀನುಗಳಿಗೆ ನೀರು ಬರುವುದರೊಳಗಾಗಿ ವಿದ್ಯೂತ್ ಹೋಗಿ ಬಿಡುತ್ತದೆ. ಹೀಗಾದರೆ ಕೃಷಿ ಮಾಡುವುದಾದರೂ ಹೇಗೆ ಎಂದು ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು  ರೈತರು ಘೇರಾವ್ ಹಾಕಿ ಪ್ರಶ್ನಿಸಿದರು.
ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆ ರೈತರ ಕಣ್ಣು ಕೆಂಪು:  ಸರ್ ಮೇಲಿಂದ ಎಷ್ಟು ವಿದ್ಯೂತ್ ಸಪ್ಲೆöÊ ಆಗುತ್ತದೆಯೋ ಅಷ್ಟು ವಿದ್ಯೂತ್ ನೀಡುತ್ತಿದ್ದೇವೆ. ಹಿರಿಯ ಅಧಿಕಾರಿಗಳಿಗೆ ನಾವು ಕೂಡ ರೈತರ ಸಮಸ್ಯೆ ಹೇಳಿದ್ದೇವೆ. ಅವರು ಹೆಚ್ಚಿಗೆ ನೀಡಿದರೆ ಖಂಡಿತವಾಗಿ ಉತ್ತಮ ಗುಣಮಟ್ಟದ ವಿದ್ಯೂತ್ ನೀಡುತ್ತೇವೆ. ಇಲ್ಲವಾದರೆ ಇಲ್ಲ ಎಂದು ಉಡಾ ಫೆಯಾಗಿ  ಹೇಳುವ ಮೂಲಕ ಅಧಿಕಾರಿಗಳು ತಮ್ಮ ಅಸಾಯಕತೆ ತೋರಿದರು.ಅಧಿಕಾರಿಗಳ ಈ ಉಡಾಫೆ ಮಾತಿಗೆ ಶಾಸಕದ್ವಯರು ಆಕ್ರೋಶ ವ್ಯಕ್ತ ಪಡಿಸಿದರು.
 ಹೆಸ್ಕಾಂ ಎಂಡಿ ಜೊತೆ ಮಾತುಕತೆ: ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹುಬ್ಬಳ್ಳಿಯ ಹೆಸ್ಕಾಂ ಎಂಡಿಯವರ ಜೊತೆ  ಅರ್ದ ಗಂಟೆಗಳ ಕಾಲ ಉಭಯ ಶಾಸಕರು ಮೊಬೈಲ ಮೂಲಕ ಮಾತುಕತೆ ನಡೆಸಿದರು. ನೀವು ಎನು ಬೇಕಾದರೂ ಮಾಡಿ ರೈತರಿಗೆ ಅನುಕೂಲವಾಗುವಂತೆ ಪ್ರತಿದಿನ ಕನಿಷ್ಟ ೭ ಗಂಟೆ ವಿದ್ಯೂತ್ ನೀಡಯವಂತೆ ಮೋಬೈಲ ಮೂಲಕ ಸೂಚನೆ ನೀಡಿದರು.
ಸಭೆ ನೀರಿನಲ್ಲಿ ಹೋಮ ಮಾಡಿದಂತಾಯಿತು;
ಉಭಯ ಶಾಸಕರು ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದರು ಸಮಸ್ಯೆಗೆ ಪರಿಹಾರ   ಸಿಗದೇ ಇರೋದರಿಂದ ರೈತರ ಆಕ್ರೋಶಕ್ಕೆ ಕಾರಣವಾಯಿತು.  ಒಂದು ವಾರದಲ್ಲಿ ವಿದ್ಯೂತ್ ಸಮಸ್ಯೆ ಸರಿ ಆಗದಿದ್ದರೆ ಹೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.
ಸಮಸ್ಯೆಗೆ ಸ್ಪಂದಿಸದ ಲೈನಮನ್‌ಗಳು; ಪ್ರತಿದಿನ ಕೆಲ ಲೈನಮನ್‌ಗಳು ಸರಾಯಿ ಕುಡಿದು ಬರುತ್ತಾರೆ. ರೈತರು ವಿದ್ಯೂತ್ ಸಮಸ್ಯೆಯ ಬಗ್ಗೆ ಕೇಳಲು ಫೋನ ಮಾಡಿದರೆ  ಅನುಚಿತವಾಗಿ ವರ್ತಿಸುತ್ತಾರೆ. ಅಂಥವರನ್ನು ಮೊದಲು ವರ್ಗಾವಣೆ ಮಾಡಿ ಎಂದು ರೈತನೋರ್ವ ಶಾಸಕರಿಗೆ ಮನವಿ ಮಾಡಿದರು.
ಪರೋಕ್ಷವಾಗಿ ಕುಡಿತಕ್ಕೆ ಬೆಂಬಲ ನೀಡಿದರಾ ಅಥಣಿ ಶಾಸಕರು:
ಡ್ಯೂಟಿ ಮೇಲೆ ಇದ್ದಾಗ ಯಾರಾದರು ಲೈನ್‌ಮನ್‌ಗಳು ಕುಡಿದು ಬಂದದ್ದು ಕಂಡು ಬಂದರೆ ನೇರವಾಗಿ ಅಂಥವನ್ನು ಮೆಡಿಕಲ್ ಮಾಡಿಸಿ, ಡ್ಯೂಟಿ ಮುಗಿದ ಮೇಲೆ ಕುಡಿದರೆ ತೊಂದರೆ ಇಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಡಿತಕ್ಕೆ ಬೆಂಬಲ ನೀಡಿದರಾ ಅಥಣಿ ಶಾಸಕರು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.

Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

19 − 8 =