Breaking News
????????????????????????????????????

ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ!

Spread the love

ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ!

ಯುವ ಭಾರತ ಸುದ್ದಿ   ಝಳಕಿ: ಹಿಂದೂಳಿದ ಬಡ ತಳವಾರ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಶೈಕ್ಷಣಿಕವಾಗಿ, ಹಿಂದೂಳಿದ ತಳವಾರ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತೆದೆ, ಆರ್ಥಿಕವಾಗಿ ಹಿಂದೂಳಿದ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಎಲ್ಲ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇವರಿಗೆ ಸಹಾಯವಾಗುತ್ತದೆ, ಅದಕ್ಕಾಗಿ ಈಗೀನ ಬಿಜೆಪಿ ಸರಕಾರದ ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಈ ಸಮುದಾಯದ ಪರವಾಗಿ ನಾನು ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತೆನೆ, ನಾನು ಸರಕಾರದ ಪ್ರತಿನಿಧಿಯಾಗಿ ಇದ್ದು, ಈ ಭಾಗದ ತಳವಾರ ಸಮುದಾಯವರ ಏಳಿಗೆಗಾಗಿ ನಾನು ಕೂಡಾ ಬದ್ದನಾಗಿರುತ್ತೆನೆ ಎಂದು ಹೇಳಿದರು.ಝಳಕಿ ಸ್ಥಳೀಯ ಪ್ರವಾಸಿ ಮಂದಿರ ಆವರಣದಲ್ಲಿ ನಡೆದ ತಳವಾರ ಸಮುದಾಯದವರಿಗೆ ಎಸ್ ಟಿ ಪ್ರಮಾಣ ಪತ್ರ ದೊರಕಿಸಿ ಕೊಡಲು ಪಕ್ಷಾತೀತವಾಗಿ ಶ್ರಮಿಸಿದ ಇಂಡಿ ಶಾಸಕ ಯಶ್ವಂತಗೌಡ ಪಾಟೀಲ ರವರು ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದರು.ಭಾರತ ದೇಶದಲ್ಲಿ ಹಿಂದೂಳಿದ ವರ್ಗದವರಿಗೆ ಡಿ. ದೇವರಾಜ ಅರಸು ರವರು ಮುಖ್ಯ ಮಂತ್ರಿ ಇದ್ದಾಗ ಪ್ರತಿ ಸಮುದಾಯದವರಿಗೆ ಸರಕಾರದ ಸೌಲಭ್ಯಗಳನ್ನು ಅನಕೂಲ ಮಾಡಿದ್ದಾರೆ, ಭಾರತ ಸರಕಾರ ಎಲ್ಲ ಸಮುದಾಯದವರಿಗೆ ಒಂದೇ ನ್ಯಾಯ ಒದಗಿಸಬೇಕು, ಇನ್ನೂ ಕೆಲ ಸಮುದಾಯದ ಬೇಡಕೆಗಳು ಇವೆ, ಇನ್ಮುಂದೆ ಯಾವದೇ ಸರಕಾರಗಳು ಬರಲಿ ಎಲ್ಲಾ ಸಮುದಾಯಗಳಿಗೆ ಯೋಗ್ಯವಾದ ನ್ಯಾಯ ಒದಗಿಸಬೇಕು ಎಂದರು.

ಗ್ರಾ ಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಮಾತನಾಡಿ, ನಮ್ಮ ಇಂಡಿ ತಾಲೂಕಿನ ತಹಶಿಲದ್ದಾರ ಗ್ರೇಡ್೨ ರವರು ತಳವಾರ ಸಮುದಾಯದ ಎಸ್ ಟಿ ಪ್ರಮಾಣ ಪತ್ರ ಕೊಡುವಲ್ಲಿ ಬಹಳ ಸತ್ತಾಯಿಸುತ್ತಿದ್ದರು ಅದನ್ನು ನಮ್ಮ ಸಮಾಜದವರು ಶಾಸಕರಿಗೆ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಗಮನಕ್ಕೆ ತಂದಾಗ ಅವರಿ ಕರೆ ಮಾಡಿ ತಹಶಿಲ್ದಾರಿಗೆ ಸರಕಾರದ ನಿಯಮ ಪ್ರಕಾರ ಅವರಿಗೆ ಎಸ್ ಟಿ ಪ್ರಮಾಣಪತ್ರ ನೀಡಿ ಎಂದು ದೂರವಾಣಿ ಮೂಲಕ ಹೇಳಿದರು. ಇವಾಗ ನಮ್ಮಗೆ ಎಸ್ ಟಿ ಪ್ರಮಾಣ ಪತ್ರ ದೊರಕುತ್ತಿವೆ ಎಂದರು.ಈ ಸಂದರ್ಭದಲ್ಲಿ ಮರಗೂರ ಸಕ್ಕರೆ ಕಾರ್ಖಾನೆ ನಿರ್ದೇಶಕರು ಎಮ್ ಆರ್ ಪಾಟೀಲ, ತಳವಾರ ಸಮಾಜದ ಮುಖಂಡ ಭೀಮಣ್ಣ ಕೌಲಗಿ, ಸುರೇಶಗೌಡ ಪಾಟೀಲ, ಶ್ರೀಮಂತ ಝಳಕಿ, ಧರ್ಮಣ್ಣ ತಳವಾರ, ಅಣ್ಣಪ್ಪ ತಳವಾರ ರವಿ ವಗ್ಗಿ ಹಣಮಂತ ಖಡೇಖಡೇ, ಶಿವಾನಂದ ಬಿರಾದಾರ, ಚಂದ್ರಕಾAತ ಕೋಳಿ, ಸಾಹೇಬಗೌಡ ಬಿರಾದಾರ, ಕೋಳಿ ಡಾಕ್ಟರ, ವಾಲಿಕಾರ ವಕೀಲರು, ಹುಚ್ಚಪ್ಪ ತಳವಾರ, ರಾಯಪ್ಪ ಹರಳಯ್ಯ, ಸಂದೀಪ ಬೆಳ್ಳಿ, ಧನರಾಜ ಮುಜಗೊಂಡ, ಬಸಗೊಂಡ ಪಾಟೀಲ, ಶಂಕರ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಹಣಮಂತ ಕೋಳಿ, ರಮೇಶಗೌಡ ಬಿರಾದಾರ, ರಾಜು ಗೋಟ್ಯಾಳ, ಹಣಮಂತ ದ್ಯಾಮಗೊಳ, ತಮ್ಮಣ್ಣ ವಾಲಿಕಾರ, ಈರಣ್ಣ ವಾಲಿಕಾರ, ಬಸು ವಾಲಿಕಾರ, ರಾಜು ಧರೆಪ್ಪ ವಾಲಿಕಾರ, ಶೇಕಪ್ಪ ಜೇವೂರ, ರೇವಣ್ಣ ತಳವಾರ, ಪರಶುರಾಮ ತಳವಾರ, ಮುದಕಣ್ಣ ತಳವಾರ, ಸಂಜಯ ಕೋಳಿ, ಅಪ್ಪಾಸಾ ತಳವಾರ, ಶಿವಪುತ್ರ ತಳವಾರ, ಗಜಾನಂದ ತಳವಾರ ಇದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

2 × 3 =