Breaking News

ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಅರಣ್ಯ ಪ್ರದೇಶ ಕಂಡು ಸಂತಸಪಟ್ಟ ಶ್ರೀ ಸಿದ್ದೇಶ್ವರ ಶ್ರೀಗಳು!

Spread the love

ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಅರಣ್ಯ ಪ್ರದೇಶ ಕಂಡು ಸಂತಸಪಟ್ಟ ಶ್ರೀ ಸಿದ್ದೇಶ್ವರ ಶ್ರೀಗಳು!

 

 

ಖಾಜು ಸಿಂಗೆಗೋಳ

ಯುವ ಭಾರತ ಸುದ್ದಿ ಇಂಡಿ:  ತಾಲೂಕಿನ ಸಾವಳಸಂಗ ಗ್ರಾಮದ ಗುಡ್ಡದ ಮೇಲೆ ಅರಣ್ಯ ಇಲಾಖೆಯಿಂದ ನಿರ್ಮಿಸಿದ ಅರಣ್ಯ ಪ್ರದೇಶವನ್ನು ಕಣ್ಣಾರೆ ಕಂಡು ಸಂತಸ ಪಟ್ಟು,ಸೃಷ್ಠಿ,ನಿಸರ್ಗದಲ್ಲಿ ದೇವರನ್ನು ಕಾಣಿ ಎಂದು ಉದೇಶ ಮಾಡಿದ ಸಂತ, ಜ್ಞಾನಜ್ಯೋತಿ ಸಿದ್ದೇಶ್ವರ ಶ್ರೀಗಳು.ವೃಕ್ಷವನ್ನು ಪ್ರೀತಿಸಿದರೆ ದೇಶವನ್ನು ಪ್ರೀತಿಸಿದಂತೆ.ಭೂಮAಡಲವನ್ನೇ ಸ್ವರ್ಗ ಮಾಡಬೇಕು ವಿನ,ಸ್ವರ್ಗಕ್ಕೆ ನಾವೆ ಹೋಗುವುದಲ್ಲ.ವೃಕ್ಷವನ್ನು ಪ್ರೀತಿಸುವುದು,ರಕ್ಷಿಸುವುದು ಅದುವೇ ಧರ್ಮ.ನಿಸರ್ಗವನ್ನು ಪ್ರೀತಿಸಿದರೆ ಜೀವನ ಪಾವನವಾಗುತ್ತದೆ,ದೇವರ ದರ್ಶನವಾಗುತ್ತದೆ ಎಂದು ಪ್ರಕೃತಿಯಲ್ಲಿ ದೇವರನ್ನು ತೊರಿಸಿದ ಸಾತ್ವಿಕತೆಯ ಸಂತರಾಗಿ ಬೆಳೆದು ಬಂದವರು ಸಿದ್ದೇಶ್ವರ ಶ್ರೀಗಳು. ಅರಣ್ಯ,ಗಿಡಮರಗಳಿಂದ ಸ್ವಚ್ಚವಾದ ಗಾಳಿ ಪಡೆಯುತ್ತಿದ್ದೇವೆ.ಜಗತ್ತಿನಲ್ಲಿ ಬೆಲೆಬಾಳುವ ವಸ್ತು ಗಾಳಿಯಾಗಿದೆ.ವಿದೇಶದಲ್ಲಿ ಹಣ,ಸಂಪತ್ತು ಎಲ್ಲವೂ ಇದೆ.ಆದರೆ ಸ್ವಚ್ಚ ನಿಸರ್ಗ ಕಾಣುವುದಿಲ್ಲ.ವೃಷಗಳ ಮಧ್ಯ ಪ್ರಪಂಚದಲ್ಲಿ ಯಾವುದಾದರೂ ದೇಶ ಕಾಣುವುದುದೆಂದರೆ ಅದು ಭಾರತ ದೇಶ ಎಂದು,ದೇಶದ ಪ್ರಕೃತಿಯನ್ನು ಎತ್ತಿತೊರಿಸಿದ ಮಹಾ ಪ್ರಕೃತಿ ಪ್ರೇಮಿಯಾಗಿದ್ದರು.

ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಅರಣ್ಯ ಪ್ರದೇಶ ಕಂಡು ಸಂತಸಪಟ್ಟ ಶ್ರೀ ಸಿದ್ದೇಶ್ವರ ಶ್ರೀಗಳು

ವಸ್ತುಗಳಿಗಿಂತ ಅನ್ನ,ನೀರು,ಗಾಳು ಮುಖ್ಯ.ಈ ಮೂರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ.ದೇವರು ಎಲ್ಲಿಯೂ ಇಲ್ಲ .ನಮ್ಮಲ್ಲಿಯೇ ಇದ್ದಾನೆ.ಗಾಳಿ,ಬೆಳಕು,ನೀರಿನಲ್ಲಿ ಇದ್ದಾನೆ.ದೇವರಿಗೆ ಬೆಳ್ಳಿ,ಬಂಗಾರಕ್ಕಿAತ ಒಂದು ಹೂ ಇಟ್ಟರೆ ಅದು ದೇವರಿಗೆ ಅರ್ಪಿತವಾಗುತ್ತದೆ.ಆ ಹೂವು ಸಿಗುವುದು ನಿಸರ್ಗದಲ್ಲಿ ಎನ್ನುವ ನಿಸರ್ಗ ಪ್ರೇಮವನ್ನು ತೊರಿಸಿದ ಮಹಾಸಂತ ಜೀವಿ. ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು,ಪೋಷಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯವನ್ನು ಪ್ರಶಂಸಿಸಿ ,ಹಸಿರು ನಾಡಿನಲ್ಲಿ ಹಸಿರುವು ಮಾಡುವುದು ಮುಖ್ಯವಲ್ಲ.ಬರದ ನಾಡಿನಲ್ಲಿ ಹಸಿರು ಮಾಡುವುದು ಮುಖ್ಯ.ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು,ಪೊಷಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯವನ್ನು ತಮ್ಮ ಶರಣ ಸಂದೇಶದಲ್ಲಿ ಶ್ಲಾಘನೀಯ ವ್ಯಕ್ತಪಡಿಸಿದ್ದು ನೆನಪಿಸುತ್ತಿದೆ.

ಇಂಡಿ ತಾಲೂಕಿಗೆ ಪ್ರಥಮ ಪಾದಸ್ಪರ್ಶ ಮಾಡಿದ ಸಾಲೋಟಗಿ ಗ್ರಾಮದಲ್ಲಿ ಅಧ್ಯಾತ್ಮ ಪ್ರವಚನ ನೀಡಿದ ಸಿದ್ದೇಶ್ವರ ಶ್ರೀಗಳು.

ರಾಜಕಾರಣಿಗಳಿಗೆ ಸಲಹೆ: ನಾಡಿನ ರಾಜಕಾರಣಿಗಳು ಶ್ರೀಗಳನ್ನು ಭೇಟಿಯಾಗಲು ಬಂದಾಗ ಅವರಿಗೆ ಸಿದ್ದೇಶ್ವರ ಶ್ರೀಗಳು ಆಶಿರ್ವಾದ ಮಾಡಿ,ಈ ನಾಡಿನ ರೈತರಿಗೆ ನೀವೇನು ಮಾಡಬೇಡಿ.ಅವರಿಗೆ ನೀರು ಕೊಡಿ,ಅವರು ಬಂಗಾರ ಬೆಳೆಯುತ್ತಾರೆ ಎಂದು ದೇಶದ ಕೃಷಿಯನ್ನು ಎತ್ತಿಹಿಡಿಯುವ ಕಾಯಕ ಮಾಡಿ ಎಂದು ಆಶೀರ್ವಾದದ ಸಲಹೆಯನ್ನು ಶ್ರೀಗಳದ್ದಾಗಿತ್ತು. ವಿಜಯಪುರ ಜಿಲ್ಲೆಯ ಪ್ರತಿ ಭೂಮಿಗೆ ನೀರು ಕೊಡಿ,ರೈತರು ಬಂಗಾರ ಬೆಳೆದ ಈ ನಾಡು ಬಂಗಾರದAತೆ ಬೆಳಗಿಸುತ್ತಾರೆ.ರೈತರಿಗೆ ನೀರು ಕೊಡಿ,ಈ ನಾಡು ಸಮಗ್ರ ನೀರಾವರಿ ಆಗಬೇಕು.ರೈತರು ಸಂತುಷ್ಠದಿAದ ಇರಬೇಕು.ನಾಡನ್ನು ರಕ್ಷಿಸುವ ಸೈನಿಕ,ನಾಡಿನ ಒಳಗಿರುವ ಜನರನ್ನು ರಕ್ಷಿಸುವ ರೈತರಿಗೆ ಎಂದು ಯಾವುದು ಕೊರತೆ ಮಾಡಬೇಡಿ ಎಂಬ ಅವರ ಸಲಹೆ ನಾವೆಲ್ಲ ಅಳವಡಿಸಿಕೊಂಡು ಅವರ ಮಾತು ಹುಸಿಗೊಳಿಸಬೇಕಾಗಿದೆ.

ಇಂಡಿ ತಾಲೂಕಿನ ಬುಯ್ಯಾರ ಗ್ರಾಮದ ಭಕ್ತ ಹುಚ್ಚಪ್ಪ ತಳವಾರ ಮನೆಯಲ್ಲಿ ಪಾದಸ್ಪರ್ಶ ಮಾಡಿ ಆಶಿರ್ವದಿಸಿದ ಕ್ಷಣ.

ಇಂಡಿಯಲ್ಲಿ ಪ್ರವಚನ :ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ೨೦೦೨ ರಲ್ಲಿ ಪ್ರಥಮ ಬಾರಿಗೆ ಅಧ್ಯಾತ್ಮೀಕ ಪ್ರವಚನ ನೀಡಲು ತಮ್ಮ ಪಾದಸ್ಪರ್ಶವನ್ನು ತಾಲೂಕಿನಲ್ಲಿ ಮಾಡಿ,ತಾಲೂಕಿನ ಜನತೆಗೆ ೩೦ ದಿನಗಳ ವರೆಗೆ ಅಧ್ಯಾತ್ಮೀಕ ಆಗಾದ ಶಕ್ತಿಯನ್ನು ಉಣಬಡಿಸಿದ್ದರು.ನಂತರ ಇಂಡಿಯ ಜಿಆರ್‌ಜಿ ಕಾಲೇಜಿನಲ್ಲಿ,ನಂತರ ಹೊರ್ತಿಯಲ್ಲಿ ಅಧ್ಯಾತ್ಮೀಕ ಪ್ರವಚನ ನೀಡಿದ್ದಾರೆ.ಸ್ಪಂಧನಾ ಆಸ್ಪತ್ರೆ ಉದ್ಘಾಟನೆ,ಬುಯ್ಯಾರ ಗ್ರಾಮದ ಹುಚ್ಚಪ್ಪ ತಳವಾರ ಅವರ ಮನೆಗೆ ಪಾದಸ್ಪರ್ಶ ನೀಡಿ ಆಶೀರ್ವದಿಸಿದ್ದು ಸೇರಿದಂತೆ ತಾಲೂಕಿನಲ್ಲಿ ಅವರ ಜಂಗಮ ಸ್ವರೂಪಿಯಾಗಿ ಅಧ್ಯಾತ್ಮೀಕ ಅಕ್ಷರ ಮಾಲೆಯಿಂದ ಈ ಭಾಗವನ್ನು ಪಾವನ ಮಾಡಿದ ಶಾಂತಸ್ವರೂಪಿ ಸಿದ್ದೇಶ್ವರ ಶ್ರೀಗಳು.

“ವಿಜಯಪುರದ ಜ್ಞಾನ ಯೋಗಾಶ್ರಮದ ಪೀಠಾದೀಶರಾದ ಸಂತ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಅತೀವ ನೋವುಂಟು ಮಾಡಿದೆ.ಧಾರ್ಮಿಕ ಪ್ರವಚನದ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ದಾರ್ಶನಿಕ ಗುರುವಿನ ಅಗಲಿಕೆ ನಾಡಿಗೆ ಹಾಗೂ ವಯಕ್ತಿಕವಾಗಿ ತುಂಬಲಾರದ ನಷ್ಠವಾಗಿದೆ.ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ,ಅವರ ಅಗಲಿಕೆಯ ದುಖ ಭರಿಸುವ ಶಕ್ತಿಯನ್ನು ನಾಡಿನ ಭಕ್ತಸಮೂಹಕ್ಕೆ ಭಗವಂತ ನೀಡಲಿ” ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸಂತಾಪ ಸೂಚಿಸಿದರು.


“ಪ್ರಕೃತಿ ಪ್ರೀತಿಯ,ಅಧ್ಯಾತ್ಮೀಕ ಜ್ಯೋತಿ ಶ್ರೀ ಸಿದ್ದೇಶ್ವರ ಶ್ರೀಗಳ ಅಗಲಿಕೆ ಈ ನಾಡಿನ ಅಧ್ಯಾತ್ಮೀಕ ಕೊಂಡಿ ಕಳಚಿದಂತಾಗಿದೆ.ಅವರೊಬ್ಬ ದೈವಿ ಪುರುಷರಾಗಿ,ದೇಶ,ವಿದೇಶಗಳಲ್ಲಿ ಅಧ್ಯಾತ್ಮೀಕತೆಯನ್ನು ಉಣಬಡಿಸಿದ್ದು,ಅವರ ಅಗಲಿಕೆಯಿಂದ ನಾಡಿನ ಭಕ್ತಕೋಟಿಗೆ ಅತೀವ ದುಖವಾಗಿದ್ದು,ಅವರ ಅಗಲಿಕೆಯ ದುಖ ಭರಿಸುವ ಶಕ್ತಿ ಭಕ್ತಸಮೂಹಕ್ಕೆ ಭಗವಂತ ನೀಡಲಿ” ಎಂದು ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಸಂತಾಪ ಸೂಚಿಸಿದರು.


“ನಡೆದಾಡುವ ದೇವರ ಶ್ರೀ ಸಿದ್ದೇಶ್ವರ ಶ್ರೀಗಳು ಅಘಾದ ಅಧ್ಯಾತ್ಮೀಕ ಶಕ್ತಿಯಿಂದ ನಾಡಿನಲ್ಲಿ ಇತಿಹಾಸ ಆಗಿ ಬಿಟ್ಟಿದ್ದಾರೆ.ಪ್ರತ್ಯಕ್ಷವಾಗಿ ಅವರ ಅಮೃತವಾಣಿ ಕೇಳಿದ ನಾವೆಲ್ಲ ಪುಣ್ಯವಂತರು.ಜಗತ್ತಿಗೆ ಒಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ ಶ್ರೀ ಸಿದ್ದೇಶ್ವರ ಶ್ರೀಗಳ ಅಗಲಿಕೆ ನಮಗೆಲ್ಲ ನೋವು ತಂದಿದೆ.ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಭಗವಂತ ನಾಡಿನ ಭಕ್ತಸಮೂಹಕ್ಕೆ ನೀಡಲು” ಎಂದು ಬಿಜೆಪಿ ಒಬಿಸಿ ಮೊರ್ಚಾ ರಾಜ್ಯ ಕರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಸಂತಾಪ ಸೂಚಿಸಿದರು.

“ಜ್ಞಾನ ಸಿದ್ದಾಂತದ ಶೃಂಗವಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಒಂದು ಆಂದೋಲನಕ್ಕೆ ಬೇಕಾಗುವಷ್ಟು ಜ್ಞಾನವನ್ನು ಪ್ರವಚನಗಳ ರೂಪದಲ್ಲಿ ,ಪುಸ್ತಕಗಳ ರೂಪದಲ್ಲಿ ಮತ್ತು ಸಂವಾದಗಳ ರೂಪದಲ್ಲಿ ಬಿಟ್ಟು ಹೋಗಿದ್ದಾರೆ.ಈ ಆಗಾಧ ಜ್ಞಾನವಾಹಿನಿಯು ಜಗವಿರುವವರೆಗೆ ವಯಕ್ತಿಕ ಮತ್ತು ವೈಶ್ವಿಕ ಪಲ್ಲಟಕ್ಕಾಗಿ ಪ್ರವಹಿಸುತ್ತವೆ” ಗೀತಯೊಗಿ,ಸಾಹಿತಿಗಳು,ಸಾಲೋಟಗಿ.

 


Spread the love

About Yuva Bharatha

Check Also

ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ-ಶಾಸಕ ರಮೇಶ ಜಾರಕಿಹೊಳಿ.!

Spread the loveಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ-ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ದೇಶಕ್ಕೆ …

Leave a Reply

Your email address will not be published. Required fields are marked *

eleven − nine =