Breaking News

ಜ್ಞಾನದ ಸಂಕೇತ ಡಾ. ಬಾಬಾಸಾಹೇಬ ಅಂಬೇಡ್ಕರ – ಅಶೋಕ ಲಗಮಪ್ಪಗೋಳ!

Spread the love

ಜ್ಞಾನದ ಸಂಕೇತ ಡಾ. ಬಾಬಾಸಾಹೇಬ ಅಂಬೇಡ್ಕರ – ಅಶೋಕ ಲಗಮಪ್ಪಗೋಳ!

ಗೋಕಾಕ:    ಅಂಬೇಡ್ಕರ ಈ ದೇಶ ಕಂಡ ರ‍್ವ ಧೀಮಂತ ಅಪ್ರತಿಮ ವ್ಯಕ್ತಿ. ಜಾತಿ ಕಟ್ಟಪಾಡುಗಳನ್ನು ಮೀರಿ ಸ್ವಂತ ಬಲದ ಮೇಲೆ ಮಹಾ ಸಾಧನೆಗೈದ ಮಹಾನಾಯಕ ಅವರ ಸ್ಮರಣೆ ಸರ‍್ಯ ಚಂದ್ರ ಇರುವರಿಗೂ ಅಜರಾಮರ ಎಂದು ಅಶೋಕ ಲಗಮಪ್ಪಗೋಳ ಅಭಿಪ್ರಾಯ ಪಟ್ಟರು.
ಬಹುಜನ ಹಿತ ರಕ್ಷಣಾವೇದಿಕೆ (ರೀ) ರ‍್ನಾಟಕ ಹಾಗೂ ಬಸವಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ.ಬಿ ಆರ್ ಅಂಬೇಡ್ಕರ ಅವರ ೬೬ನೇ ಮಹಾಪರಿನರ‍್ವಾಣದ ಪ್ರಯುಕ್ತ ಆಯೋಜಿಸಲಾದ ಸ್ಮರಣೋತ್ಸವ ಕರ‍್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಜಾತಿ ಕಟ್ಟಪಾಡು ರಾಜಕೀಯ, ಸಾಮಾಜಿಕ, ರ‍್ಥಿಕ, ಸಮಾನತೆ ಇಲ್ಲದೆ ಎಲ್ಲವನ್ನು ಸಾಧಿಸಿ ಶಿಕ್ಷಣ ಸಂಘಟನೆ ಹೋರಾಟದ ಮೂಲಕ ರ‍್ವಾಂಗೀಣ ವ್ಯಕ್ತಿತ್ವ ಹಾಗೂ ಎಲ್ಲ ಕ್ಷೇತ್ರದಲ್ಲಿಯು ಸಾಧನೆಗೈದ ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ. ಬುದ್ಧ, ಬಸವ, ಅಂಬೇಡ್ಕರ ಹಾಗೂ ಮಹಾನಾಯಕರ ತತ್ವ ಆರ‍್ಶಗಳನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವ ಹಾಗೂ ಸಮಾಜವನ್ನು ಉನ್ನತೀಕರಿಸುವಂತೆ ಕರೆ ನೀಡಿದರು.
ಮುಖ್ಯ ಅಧಿತಿಗಳಾಗಿ ಆಗಮಿಸಿದ ಅಬುಲ್ ಕಲಾಂ ಆಜಾದ ಪಿ ಯು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಸ ಎಮ್ ಪೀರಜಾದೆ ಅವರು ಸಂವಿಧಾನ ಶಿಲ್ಪಿಯ ಜೀವನ ಹೋರಾಟದ ಯಶೋಗಾಥೆಯ ಕುರಿತು ವಿವರಿಸಿದರು.
ಅತಿಥಿಗಳಾಗಿ ಆಗಮಿಸಿದ ಶುಭಾಸ ಸಣ್ಣತಿಮ್ಮಪ್ಪಗೋಳ, ಸಮಾರಂಭದ ಅಧ್ಯಕ್ಷರಾದ ಪರಶುರಾಮ ಗೊಲ್ಲರ ಮಾತನಾಡಿದರು.
ವಿಠ್ಠಲ ತಹಶೀಲ್ದಾರ, ಕೆಂಪಣ್ಣ ಶಿಂಗಳಾಪುರ, ಐ ಟಿ ಐ ನ ಪ್ರಾಚರ‍್ಯರರಾದ ಎಲ್ ಎಸ್ ಜಾಧವ ಬಹುಜನ ಹಿತ ರಕ್ಷಣಾವೇದಿಕೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು. ಮನೋಜ ಬಸ್ತವಾಡ್ಕರ ಕರ‍್ಯಕ್ರಮವನ್ನು ನಿರೂಪಿಸಿ ವಂದನೆಗೈದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

20 − 11 =