ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ, ಸನ್ಮಾನ!

Spread the love

ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ, ಸನ್ಮಾನ!

ದೇವರಹಿಪ್ಪರಗಿ: ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ನಿ. ನೂತನ ಅಧ್ಯಕ್ಷರಾಗಿ ವಾಯ್ ಬಿ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಡಾ. ಮಂಜುನಾಥ ಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಲೀಲಾವತಿಗೌಡ ತಿಳಿಸಿದರು.
      ಪಟ್ಟಣದ ಪ್ರತಿಷ್ಠಿತ 25 ವಸಂತಗಳ ಸಂಭ್ರಮದಲ್ಲಿರುವ  ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕಿನ ಸತತ 23 ವರ್ಷಗಳ ಕಾಲ ಅಧ್ಯಕ್ಷರಾಗಿ ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದಿ. ಬಾಳಾಸಾಹೇಬಗೌಡ ಪಾಟೀಲ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಚಿರಂಜೀವಿ ಮಾಜಿ ಸಿಂಡಿಕೇಟ್ ಸದಸ್ಯರಾದ ವಾಯ್ ಬಿ ಪಾಟೀಲರನ್ನು ಎಲ್ಲಾ ನಿರ್ದೇಶಕ ಮಂಡಳಿಯ ಸರ್ವ ಸದಸ್ಯರಿಂದ ಅವಿರೋಧ ಆಯ್ಕೆ ಮಾಡಲಾಯಿತು.
ನಂತರ ಮಾತನಾಡಿದ ನೂತನ ಅಧ್ಯಕ್ಷರಾದ ವಾಯ್ ಬಿ ಪಾಟೀಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇದೇ ರೀತಿ ಸಹಕಾರ, ಉಪಯುಕ್ತ ಸಲಹೆ ನೀಡಬೇಕು ಮತ್ತು ಬ್ಯಾಂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡಬೇಕು ಎಂದು ಹೇಳಿದರು.
       ಈ ಸಂದರ್ಭದಲ್ಲಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹಾಗೂ ಅನೇಕ ಮುಖಂಡರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು.
ಬ್ಯಾಂಕಿನ ವ್ಯವಸ್ಥಾಪಕರಾದ ಕೆ ಎಸ್ ಪಾಟೀಲ ಸ್ವಾಗತಿಸಿ, ವಂದಿಸಿದರು.
     ಇದೇ ಸಂದರ್ಭದಲ್ಲಿ ನಿರ್ದೇಶಕ ಮಂಡಳಿಯ ಸದಸ್ಯರುಗಳಾದ ಬಾಬುಗೌಡ ಪಾಟೀಲ, ಶಾಂತ ಮಲ್ಲಿಕಾರ್ಜುನ ಪಾಟೀಲ, ಶ್ರೀಶೈಲ್ ದಾನಗೊಂಡ, ದಿಲೀಪ್ ಲಮಾಣಿ, ವಿಜಯಲಕ್ಷ್ಮಿ ಪಾಟೀಲ, ಇಂದ್ರಾಬಾಯಿ ಕುದರಿ, ಸಿದ್ದಪ್ಪ ಸಜ್ಜನ, ಪಾಂಡುರಂಗ ದೇಶಪಾಂಡೆ, ಚಂದ್ರಕಾಂತ ಮಸಳಿ, ಸಿದ್ದಪ್ಪ ಉತ್ನಾಳ, ಮುಖಂಡರುಗಳಾದ ಗಂಗಾಧರ ಬಬಲೇಶ್ವರ, ಮಲ್ಲು ಕೋರಿ, ಲಕ್ಷ್ಮಿಕಾಂತ್ ಕುಂಬಾರ, ಪ್ರಕಾಶ್ ಮಲ್ಹಾರಿ, ತಾಲೂಕ ರೈತ ಸಂಘದ ಅಧ್ಯಕ್ಷರಾದ ಅಜೀಜ ಯಲಗಾರ, ಚಿನ್ಮಯ ಕೋರಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಸದಸ್ಯರು, ಬ್ಯಾಂಕಿನ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.

Spread the love

About Yuva Bharatha

Check Also

೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ ಧುರೀಣ ಅಮರನಾಥ ಜಾರಕಿಹೊಳಿ.!

Spread the love೭ನೇ ಬಾರಿಗೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಸಹಕರಿಸಿದ ಗೋಕಾಕ ಮತಕ್ಷೇತ್ರದ ಜನತೆಗೆ ನಾವು ಕೃತಜ್ಞರಾಗಿದ್ದೇವೆ-ಯುವ …

Leave a Reply

Your email address will not be published. Required fields are marked *

fourteen + six =