ಸೋಮವಾರವೇ ಕರ್ನಾಟಕಕ್ಕಿಂತ10 ಪಟ್ಟು ಹೆಚ್ಚು ಮಹಾ ಪರಿಣಾಮಕಾರಿ ಗಡಿ ಠರಾವ್
ಯುವ ಭಾರತ ಸುದ್ದಿ ನಾಗಪುರ : ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ಕುರಿತು ಮಹಾರಾಷ್ಟ್ರ ಇಷ್ಟರಲ್ಲೇ ವಿಸ್ತೃತ ನಿರ್ಣಯ ಅಂಗೀಕರಿಸಲಿದೆ. ಇದು ಕರ್ನಾಟಕ ನಿನ್ನೆ ಅಂಗೀಕರಿಸಿದ್ದಕ್ಕಿಂತ 10 ಪಟ್ಟು ಪರಿಣಾಮಕಾರಿ ಠರಾವ್ ಆಗಿರಲಿದೆ ಎಂದು ಮಹಾರಾಷ್ಟ್ರದ ಗಡಿ ಸಲಹಾ ಸಮಿತಿ ಸಚಿವ ಶಂಭುರಾಜ ದೇಸಾಯಿ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಹಾರಾಷ್ಟ್ರ- ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಸಭೆಯ ನಂತರವೂ ಬಸವರಾಜ ಬೊಮ್ಮಾಯಿ ಅವರು ಸಭೆಯಲ್ಲಿ ನಿರ್ಧರಿಸಿದ್ದನ್ನು ಗೌರವಿಸಲಿಲ್ಲ ಎಂದು ಹೇಳಲು ನಾನು ಬಯಸುತ್ತೇನೆ. ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಬಯಸುತ್ತಾರೆ. ನಾವು ಸೋಮವಾರ ಅಂಗೀಕರಿಸುವ ನಿರ್ಣಯ ಮಹಾರಾಷ್ಟ್ರದ ಪರ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ನಿರ್ಣಯ ಅಂಗೀಕರಿಸಿದ ಮೇಲೆ ಮಹಾರಾಷ್ಟ್ರ ನಾಯಕರನ್ನು ಕರ್ನಾಟಕಕ್ಕೆ ಪ್ರವೇಶಿಸದಂತೆ ತಡೆದಿರುವ ಬಗ್ಗೆ ನಮ್ಮ ಅಸಮಾಧಾನವನ್ನು ಕೇಂದ್ರ ಗ್ರಹ ಸಚಿವರಿಗೆ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.