ಗುಣಮಟ್ಟದ ಶಿಕ್ಷಣಕ್ಕೆ ಕಲಿಕಾ ಹಬ್ಬ ಸಹಕಾರಿ
ಯುವ ಭಾರತ ಸುದ್ದಿ ಬಸವನ ಬಾಗೇವಾಡಿ :
ಕೋವಿಡ್-19 ಸಾಂಕ್ರಾಮಿಕ ರೋಗ ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಹಿನ್ನಡೆಗೆ ಕಾರಣವಾಗಿದೆ ಹಾಗೂ ಅದರಿಂದ ದುಷ್ಪರಿಣಾಮಗಳನ್ನು ಬೀರಿದ್ದು ಕಲಿಕಾ ಚೇತರಿಕೆ ಕಾರ್ಯಕ್ರಮದ ಯೋಜನೆಯನ್ನು ಈ ಸಮಸ್ಯೆಯ ನಿವಾರಣೆಗಾಗಿಯೇ ಇಲಾಖೆಯು ಹಮ್ಮಿಕೊಳ್ಳಲಾಗಿದೆ. ಇದೇ ಕಾರ್ಯಕ್ರಮದ ಮಹತ್ವದ ಭಾಗವಾಗಿ ಕಲಿಕಾ ಹಬ್ಬ ಇದೀಗ ಪ್ರಸ್ತುತಗೊಂಡಿದೆ. ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಪಿ. ಯು. ರಾಠೋಡ ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿಯಲ್ಲಿ ನಡೆದ ಎರಡು ದಿನಗಳ ತಾಲೂಕು ಹಂತದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಲಿಕಾ ಹಬ್ಬ ಎಂಬುದು ಶೈಕ್ಷಣಿಕ ಅಂಶಗಳನ್ನೊಳಗೊಂಡಿದ್ದು ತರಗತಿಯೊಳಗಿನ ಕಲಿಕೆಗಿಂತ ಭಿನ್ನವಾಗಿ ಮಕ್ಕಳಲ್ಲಿ ಪ್ರಾಯೋಗಿಕ, ವೈಜ್ಞಾನಿಕ ಹಾಗೂ ಕ್ರಿಯಾತ್ಮಕ ಕಲಿಕೆಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ತಿಳಿಸಿದ್ದಾರೆ. ಕಲಿಯುವ ಹಬ್ಬ ಇದಾಗಿದ್ದು ಮಕ್ಕಳಲ್ಲಿನ ಕೌಶಲ್ಯವನ್ನು ಸುಧಾರಿಸಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ನೋಡಲ್ ಅಧಿಕಾರಿ ಪಿ.ಆರ್. ಮೆಂಚ್ ಮಾತನಾಡಿದರು. ಭಾರತಿ ಪಾಟೀಲ ಸ್ವಾಗತಿಸಿದರು. ಎ. ಎಸ್. ಜುಗತಿ ವಂದಿಸಿದರು. ಎಂ.ವಿ.ಗಬ್ಬೂರ ನಿರೂಪಿಸಿದರು.