Breaking News

ಗೋಳಸಾರ : ಸದ್ಗುರು ಪುಂಡಲಿಂಗೇಶ್ವರ ಗರ್ಭಗುಡಿ ಉಪಪೀಠದ ಪೂಜಾ ಕೈಂಕರ್ಯ, ಆನೆಕಲ್ಲು ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮ, ದೀಪೋತ್ಸವ ಉದ್ಘಾಟನೆ

Spread the love

ಗೋಳಸಾರ : ಸದ್ಗುರು ಪುಂಡಲಿಂಗೇಶ್ವರ ಗರ್ಭಗುಡಿ ಉಪಪೀಠದ ಪೂಜಾ ಕೈಂಕರ್ಯ, ಆನೆಕಲ್ಲು ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮ, ದೀಪೋತ್ಸವ ಉದ್ಘಾಟನೆ

ಯುವ ಭಾರತ ಸುದ್ದಿ ಇಂಡಿ :
ಸರ್ಕಾರಕ್ಕೆ ಮಾಡಲಾಗದ ಸಮಾಜಿಮುಖಿ ಕಾರ್ಯಗಳನ್ನು ನಾಡಿನ ಮಠ,ಮಾನ್ಯಗಳು ಮಾಡುತ್ತಿವೆ.ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳು ಲಿಂಗೈಕ್ಯರಾಗಿ ೨೯ ವರ್ಷ ಕಳೆದರೂ ಅವರು ಇಂದು ಎಲ್ಲ ಭಕ್ತರ ಮನೆ,ಮನದಲ್ಲಿ ಬೆಳಕಾಗಿದ್ದಾರೆ.ಎಲ್ಲರನ್ನು ಪ್ರೀತಿಸಿ,ಜೊತೆಯಾಗಿ ಕರೆದುಕೊಂಡು ಹೋಗುವ ಮಠ ಗೋಳಸಾರ ಮಠವಾಗಿದೆ.ಮೌನ ಕ್ರಾಂತಿಯ ಮೂಲಕ ಧಾರ್ಮಿಕ ಇತಿಹಾಸ ಮೂಡಿಸುತ್ತಿರುವ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಡಾ.ವೃಷಭಲಿಂಗ ಮಹಾಶಿವಯೋಗಿಗಳು ಹೇಳಿದರು.
ಅವರು ಭಾನುವಾರ ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಸದ್ಗುರು ಪುಂಡಲಿಂಗೇಶ್ವರ ಗರ್ಭಗುಡಿಯ ಉಪಪೀಠದ ಪೂಜಾ ಕೈಂಕರ್ಯ ಆನೆಕಲ್ಲು ಅನಾವರಣ,ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಬಡವರಿಗೆ ಆಶ್ರಯ ನೀಡಿ,ಬಡಮಕ್ಕಳಿಗೆ ಶಿಕ್ಷಣ ನೀಡುತ್ತ,ಅನ್ನ ದಾಸೋಹ,ಜ್ಞಾನ ದಾಸೋಹ ನೀಡುತ್ತಿರುವ ಗೋಳಸಾರ ಮಠ ಅಭಿನವ ಶ್ರೀಶೈಲವಾಗಿದೆ ಎಂದು ಹೇಳಿದರು.
ಕಾಯಕ,ದಾಸೋಹಕ್ಕೆ ಮಹತ್ವ ನೀಡಿದ ಶರಣ ಧರ್ಮ ಶ್ರೇಷ್ಠವಾದುದ್ದು.ಮನದ ಮಲಿನತೆ ಹೋಗಲಾಡಿಸಿ ಸುಸಂಸ್ಕೃತ ವ್ಯಕ್ತಿತ್ವಕ್ಕೆ ಕಾರಣವಾಗುವ ಶರಣರ ವಚನಗಳನ್ನು ನಡೆಯುತ್ತಿರುವ ಗೊಳಸಾರದ ಪುಂಡಲಿಂಗೇಶ್ವರ ಮಠ ಎಂದು ಹೇಳಿದರು.ನುಡಿದಂತೆ ನಡೆದ ಶರಣರ ವಚನಗಳನ್ನು ನಾವು ಪ್ರತಿನಿತ್ಯ ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಸಂಸ್ಕಾರವಂತರಾಗಲು ಪ್ರಯತ್ನಿಸಬೇಕು.ತ್ರೀಧರೇಶ್ವರರು ಶರಣರ ಹಾದಿಯಲ್ಲಿ ನಡೆದು ಗೊಳಸಾರ ಕ್ಷೇತ್ರವನ್ನು ಪಾವನ ಮಾಡಿದ್ದಾರೆ.ಈ ಕ್ಷೇತ್ರವನ್ನು ಸ್ಪರ್ಶಿಸುವುದರಿಂದ ಮೌಲ್ಯಯುತ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿದರು.
ಅಭಿನವ ಪುಂಡಲಿಂಕ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ಅಭಿನವ ಶಿವಯೋಗಿಶ್ವರ ಶ್ರೀಗಳು ನೇತ್ರತ್ವ ವಹಿಸಿದ್ದರು.ಅಭಿನವ ಪ್ರಭುಲಿಂಗೇಶ್ವರ ಶ್ರೀಗಳು,ಆಲಮೇಲ ಅರ್ಬನ ಬ್ಯಾಂಕ ಅಧ್ಯಕ್ಷ ಶಿವಕುಮಾರ ಗುಂದಗಿ,ಶ್ರೀಶೈಲ ಧೂಮಗೊಂಡ,ರವಿಕುಮಾರ ಕೆರುಟಗಿ,ರವಿ ಆಳೂರ,ಶಿವಲಿಂಗಪ್ಪ ನಾಗಠಾಣ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

18 + 5 =