ವಿವೇಕಾನಂದ ಜನ್ಮದಿನ : ವಿವೇಕಾನಂದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಯಶವಂತರಾಯಗೌಡ
ಯುವ ಭಾರತ ಸುದ್ದಿ ಇಂಡಿ:
ಪಟ್ಟಣದ ಸಿಂದಗಿ ರಸ್ತೆಯ ಮಿನಿ ವಿಧಾನಸೌಧ ಬಳಿ ಇರುವ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಮೂರ್ತಿ ಪ್ರತಿಷ್ಠಾಪನೆಗೆ ೭ ಲಕ್ಷ ರೂ.ಗಳನ್ನು ವಯಕ್ತಿಕವಾಗಿ ನೀಡಲಾಗುವುದು.ಬರುವ ಫೆ.೧೨ ರಂದು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಗುರುವಾರ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನದ ನಿಮಿತ್ಯ ಹಮ್ಮಿಕೊಂಡು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕಳೆದ ೨ ವರ್ಷದ ಹಿಂದಯೇ ೩ ಲಕ್ಷ ರೂ.ಗಳನ್ನು ನೀಡಲಾಗಿದೆ. ಇನ್ನೂಳಿದ ೪ ಲಕ್ಷ ರೂ.ಗಳನ್ನು ಇಂದು ನೀಡಲಾಗುತ್ತದೆ. ಫೆ.೧೨ ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಬೇಕು ಎಂದು ಸಂಘಟಿಕರಿಗೆ ಹೇಳಿದರು.
ಇಷ್ಟೊತ್ತಿಗೆ ಮೂರ್ತಿ ಪ್ರತಿಷ್ಠಾಪನೆ ಆಗಬೇಕಿತ್ತು.ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು,ಈಗಲಾದರೂ ಮೂರ್ತಿ ಪ್ರತಿಷ್ಠಾಪನೆಗೆ ವೇಗ ನೀಡಬೇಕು ಎಂದು ಹೇಳಿದರು.ಸ್ವಾಮಿ ವಿವೇಕಾನಂದರ ಅಭಿಮಾನಿಗಳು ಯಾರಾದರೂ ಮೂರ್ತಿ ಪ್ರತಿಷ್ಠಾಪನೆಗೆ ಕಾಣಿಕೆ ನೀಡುವವರು ಇದ್ದರೆ ಪಡೆದುಕೊಂಡು,ವೃತ್ತ ನವಿಕರಣ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು.ನಿರ್ಭಯತೆ,ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಸ್ವಾಮಿ ವಿವೇಕಾನಂದರು ಪರಿಗಣಿತರಾಗಿದ್ದಾರೆ.ಭಾರತದ ದೇಶದ ಸಂಸ್ಕೃತಿ, ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಹೇಳಿದರು.
ಅಮೇರಿಕಾದ ಚಿಕ್ಯಾಗೊದಲ್ಲಿ ನಡೆದ ವಿಶ್ವಸರ್ವಧರ್ಮ ಸಮ್ಮೇಳನದಲ್ಲಿ ಭಾರತ ಯುವ ಶಕ್ತಿ ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಹುಬ್ಬೆರಿಸುವಂತೆ ಮಾಡಿದೆ.ವಿಶ್ವದ ಇತರ ದೇಶಗಳು ಭಾರತ ಎಂದಾಕ್ಷಣ ಅಧ್ಯಾತ್ಮಿಕ ತವರು ಎಂದು ಗುರುತಿಸಿದ ಶ್ರೇಷ್ಠ ತತ್ವಜ್ಞಾನಿ ವಿವೇಕಾನಂದರು ಎಂದು ಹೇಳಿದರು.
ಅಪಾರ ಜ್ಞಾನ ಶಕ್ತಿಯನ್ನು ಹೊಂದಿರುವ ಸ್ವಾಮಿ ವಿವೇಕಾನಂದರು ಇಂದಿನ ಯುವ ಪಿಳಿಗೆಗೆ ಮಾರ್ಗದರ್ಶಿಯಾಗಿದ್ದಾರೆ.
ಅವರ ದೇಶಭಕ್ತಿ,ಚಿಂತನೆ,ಮಾನವೀಯ ಮೌಲ್ಯಗಳನ್ನು ಇಂದಿನ ಯುವ ಜನಾಂಗ ನಿತ್ಯ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಸರಳವಾದ ಬದುಕು, ಉತ್ಕೃಷ್ಠವಾದ ವಿಚಾರ ರೂಢಿಸಿಕೊಂಡು, ವಿಶ್ವಭ್ರಾತೃತ್ವ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ,ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಜಗದೀಶ ಕ್ಷತ್ರಿ,ಸಿದ್ದಲಿಂಗ ಹಂಜಗಿ,ವೆಂಕಟೇಶ ಕುಲಕರ್ಣಿ,ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದ ಗೌರವಾಧ್ಯಕ್ಷ ರಾಮಸಿಂಗ ಕನ್ನೋಳ್ಳಿ, ಅಧ್ಯಕ್ಷ ರಾಜಗುರು ದೇವರ,ಶ್ರೀಕಾಂತ ಕುಡಿಗನೂರ,ಬಾಳು ಮುಳಜಿ, ಎಸಿ ರಾಮಚಂದ್ರ ಗಡಾದೆ,ತಹಶೀಲ್ದಾರ ನಾಗಯ್ಯ ಹಿರೇಮಠ,ಸಿಪಿಐ ಮಹಾದೇವ ಶಿರಹಟ್ಟಿ, ಯಮುನಾಜಿ ಸಾಳುಂಕೆ,ಶ್ರೀಧರ ಕ್ಷತ್ರಿ, ಸತೀಶ ಕುಂಬಾರ,ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಅವಿನಾಶ ಬಗಲಿ,ಸೋಮು ನಿಂಬರಗಿಮಠ ,ಬುದ್ದುಗೌಡ ಪಾಟೀಲ, ಸಂಜು ದಶವಂತ , ಉಮೇಶ ದೇಗಿನಾಳ,ಮಹೇಶ ಕುಂಬಾರ,ಬಿಜೆಪಿ ಮುಖಂಡ ಶರಣಗೌಡ ಬಂಡಿ,ಭೀಮು ಪ್ರಚಂಡಿ,ಶ್ರೀಮಂತ ಮೊಗಲಾಯಿ,ಪ್ರತೀಕ ಬೇನೂರ,ಸಿದ್ದು ಗೊರನಾಳ,ಮುತ್ತು ಸಿಂದಗಿ,ಸ್ವರೂಪ ಸಿಂಧೆ,ಅನೀಲ ರಾಠೋಡ,ಕಿರಣ ಮಹೇಂದ್ರಕರ,ವಿಶ್ವನಾಥ ದೇಸಾಯಿ,ರತನ ಹಲವಾಯಿ,ಅಕ್ಷಯ ಪಾಟೀಲ,ಆಕಾಶ ಕಾಳೆ,ಅಂಬರೀಶ ಕುಂಬಾರ,ಸಂತೋಷ ಬಿರಾದಾರ,ವಿನೋದ ನಾವಿ,ಆನಂದ ದೇವರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.