1.70ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಂದ ಚಾಲನೆ.!
ಗೋಕಾಕ: ಗೋಕಾಕ ಮತಕ್ಷೇತ್ರದ ಸಾವಳಗಿ, ನಂದಗಾವ, ಮುತ್ನಾಳ ಮತ್ತು ಖಾನಾಪುರ ಗ್ರಾಮಗಳಲ್ಲಿ 1.70ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಚಾಲನೆ ನೀಡಿದರು.
ಜೆಜೆಎಮ್ ಯೋಜನೆಯಡಿ 80ಲಕ್ಷ ರೂ ವೆಚ್ಚದ ಕುಡಿಯುವ ನೀರು ಸರಬರಾಜು ಕಾಮಗಾರಿ, ಖಾನಾಪೂರ ಗ್ರಾಮದ ಶ್ರೀ ಲಕ್ಷಿö್ಮÃದೇವಿ ಸಮುದಾಯ ಭವನ ನಿರ್ಮಾಣಕ್ಕೆ 10ಲಕ್ಷ, 25ಲಕ್ಷ ವೆಚ್ಚದಲ್ಲಿ ನಂದಗಾವ ಕುರಬೇಟ ತೋಟದ ರಸ್ತೆ ಡಾಂಬರೀಕರಣ, 25ಲಕ್ಷ ವೆಚ್ಚದಲ್ಲಿ ನಂದಗಾವ ಹೊಳೆಸಾಲು ರಸ್ತೆ, 10ಲಕ್ಷ ರೂ ವೆಚ್ಚದಲ್ಲಿ ನಂದಗಾವ ಗ್ರಾಮದ ಶಾಸಕರ ಮತಕ್ಷೇತ್ರ ಮಾದರಿ ಸರಕಾರಿ ಶಾಲೆಯ ಕೋಠಡಿ ನಿರ್ಮಾಣ ಮತ್ತು ಸಾವಳಗಿ ಗ್ರಾಮದಲ್ಲಿ ಜೆಜೆಎಮ್ ಯೋಜನೆಯಡಿ 26ಲಕ್ಷ ರೂ ವೆಚ್ಚದ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅವ್ವಕ್ಕಾ ನಾಯ್ಕ, ಮುಖಂಡರುಗಳಾದ ಧರೇಪ್ಪ ಮಗದುಮ, ಚಿದಾನಂದ ಶಿರಗಾವಿ, ಸತ್ಯಗೌಡ ಪಾಟೀಲ, ರಮೇಶ ಚಿಕ್ಕೋಡಿ, ಮಹ್ಮದ ಬಾಗೀರ, ಪ್ರಸಾದ ನಾಯ್ಕ, ಶಾನೂರ ಹತ್ತಿವಾಲೆ ಸೇರಿದಂತೆ ಸಾವಳಗಿ, ನಂದಗಾವ, ಮುತ್ನಾಳ ಮತ್ತು ಖಾನಾಪುರ ಗ್ರಾಮದ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.