Breaking News

ಸಮಾಜ ಸೇವೆಯಲ್ಲಿ ಸಿಗುವ ಸಂತೋಷ ಬೇರೆ ಕಾರ್ಯದಲ್ಲಿ ಸಿಗುವುದಿಲ್ಲ. ನಾವೆಲ್ಲಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ ಉತ್ತಮ ಸಮಾಜ ನಿರ್ಮಿಸೋಣ-ಮಹೇಶ ಜಾಧವ್!

Spread the love

ಸಮಾಜ ಸೇವೆಯಲ್ಲಿ ಸಿಗುವ ಸಂತೋಷ ಬೇರೆ ಕಾರ್ಯದಲ್ಲಿ ಸಿಗುವುದಿಲ್ಲ. ನಾವೆಲ್ಲಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ ಉತ್ತಮ ಸಮಾಜ ನಿರ್ಮಿಸೋಣ-ಮಹೇಶ ಜಾಧವ್!

 

ಯುವ ಭಾರತ ಸುದ್ದಿ ಗೋಕಾಕ: ಪಾಲಕರು ಮಕ್ಕಳಿಗೆ ಆಸ್ತಿ ಮಾಡದೆ ಅವರಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡುವಂತೆ ಬೆಳಗಾವಿಯ ಮಹೇಶ ಫೌಂಡೇಶನ್ ನ ಮುಖ್ಯಸ್ಥ ಮಹೇಶ ಜಾಧವ್ ಹೇಳಿದರು.

ಗೋಕಾಕ  ನಗರದ ಮಯೂರ ಸ್ಕೂಲ್ ನ ಸ್ನೇಹ ಸಮ್ಮೇಳನದಲ್ಲಿ ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಅವರು ಬಹುಮಾನ ವಿತರಿಸುತ್ತಿರುವುದು

ಶುಕ್ರವಾರದಂದು ನಗರದ ಮಯೂರ ಸ್ಕೂಲ್ ನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಉತ್ತಮ ಸಂಸ್ಕಾರದಿ0ದ ನೆಮ್ಮದಿ ಜೀವನ ಸಾಧ್ಯ. ಸಮಾಜ ಸೇವೆಯಲ್ಲಿ ಸಿಗುವ ಸಂತೋಷ ಬೇರೆ ಕಾರ್ಯದಲ್ಲಿ ಸಿಗುವುದಿಲ್ಲ. ನಾವೆಲ್ಲಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ ಉತ್ತಮ ಸಮಾಜ ನಿರ್ಮಿಸೋಣ ಎಂದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಸದಾನಂದ ಕಲಾಲ, ನಿರ್ದೇಶಕ ವಿನಾಯಕ ಚಿಪ್ಪಲಕಟ್ಟಿ, ಆಡಳಿತಾಧಿಕಾರಿ ಎಸ್.ಡಿ ಮುರಗೋಡ, ಪ್ರಾಚಾರ್ಯ ಸಿ.ಬಿ.ಪಾಗದ ಇದ್ದರು.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

three × five =