ಲಂಕಾ ಎದುರು ಕೊಹ್ಲಿ ಹಾಫ್ ಸೆಂಚುರಿ : ಶುಭ ಮನ್ ಗಿಲ್ ಸೆಂಚುರಿ

ಯುವ ಭಾರತ ಸುದ್ದಿ ತಿರುವನಂತಪುರ :
ಕೊನೆಯ ಏಕದಿನ ಪಂದ್ಯಾವಳಿಯಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಭರ್ಜರಿ ಬ್ಯಾಟಿಂಗ್ ನಡೆಸಿದೆ. ಭಾರತೀಯ ಬ್ಯಾಟ್ಸ್ಮನ್ ಗಳು ಲಂಕಾ ಬೌಲರ್ ಗಳನ್ನು ಇಂದು ಚೆಂಡಾಡಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ ಮನ್
ಶುಭಮನ್ ಗಿಲ್ ಅಜೇಯ ಶತಕ ಗಳಿಸಿದ್ದಾರೆ. 13 ಬೌಂಡರಿ, ಎರಡು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 50 ರನ್ ಗಳಿಸಿ ಆಡುತ್ತಿದ್ದಾರೆ.
ಭಾರತ ಕ್ರಿಕೆಟ್ ತಂಡ ರೋಹಿತ್ ಶರ್ಮ ಅವರ ವಿಕೆಟ್ ಕಳೆದುಕೊಂಡಿದ್ದು ಒಂದು ವಿಕೆಟ್ ನಷ್ಟಕ್ಕೆ 31 ಓವರ್‌ಗಳಲ್ಲಿ 201ರನ್ ಗಳಿಸಿದೆ.
YuvaBharataha Latest Kannada News