ಬೆಳಗಾವಿ – ಸಿಕಂದರಾಬಾದ್ ನಡುವೆ ನಿತ್ಯ ರೈಲು ಸೇವೆ ಆರಂಭ
ಯುವ ಭಾರತ ಸುದ್ದಿ ನವದೆಹಲಿ :
ಬೆಳಗಾವಿ ಹಾಗೂ ಸಿಕಂದರಾಬಾದ್ ಮಾರ್ಗದಲ್ಲಿ ನಿತ್ಯ ರೈಲು ಸೇವೆ ಜನವರಿ 17ರಿಂದ ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಬೆಳಗಾವಿಯಿಂದ ಹೊರಡುವ ಈ ರೈಲು ಖಾನಪುರ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಕೊಪ್ಪಳ, ಬಳ್ಳಾರಿ, ಗುಂತಕಲ್ಲ, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಚಿತ್ತಾಪುರ, ಮಳಖೇಡ ರೋಡ್, ವಿಕಾರಬಾದ್, ಬೇಗಂಪೇಟ ಮಾರ್ಗದ ಮೂಲಕ ಸಿಕಂದರಾಬಾದ್ ತಲುಪಲಿದೆ.
ಈ ರೈಲು ಸೇವೆ ಆರಂಭಕ್ಕೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಾದ ಆಶ್ವಿನಿ ವೈಷ್ಣವ ಅವರಿಗೆ ಸಚಿವ ಜೋಶಿ ಧನ್ಯವಾದ ತಿಳಿಸಿದ್ದಾರೆ.