Breaking News

ಮೊಲವು ನುಡಿಯುತ್ತೆ ಭವಿಷ್ಯ !

Spread the love

ಮೊಲವು ನುಡಿಯುತ್ತೆ ಭವಿಷ್ಯ !

ಯುವ ಭಾರತ ಸುದ್ದಿ ತುಮಕೂರು : ತುಮಕೂರು ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಬಳಿಕ ಮೊಲದ ಮೂಲಕ ಭವಿಷ್ಯ ಅಂದಾಜಿಸುವ ಪದ್ಧತಿ ಚಾಲ್ತಿಯಲ್ಲಿದೆ.ಸಂಕ್ರಾಂತಿ ಬಳಿಕ ಕಾಡಿನಿಂದ ಹಿಡಿದು ತಂದ ಮೊಲದ ಕಿವಿಗೆ ಓಲೆ ಹಾಕಿ ಬಳಿಕ ಪೂಜೆ ಸಲ್ಲಿಸಿ ಮತ್ತೆ ಕಾಡಿಗೆ ಬಿಡುವ ಮೂಲಕ ಗ್ರಾಮಸ್ಥರು ರಾಜ್ಯದ ಮಳೆ- ಬೆಳೆ ಭವಿಷ್ಯ ಅಂದಾಜಿಸುವ ಪದ್ಧತಿ ಇದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಸೀಗೆಬಾಗಿ ಗ್ರಾಮಸ್ಥರು ಈ ಆಚರಣೆಯನ್ನು ಆಚರಿಸುತ್ತಿದ್ದಾರೆ. ವರ್ಷದ ಮೊದಲ ಹಬ್ಬವಾಗಿ ಆಚರಿಸುವ ಈ ಹಬ್ಬಕ್ಕೆ ಮೂರು ದಿನದ ಮೊದಲೇ ಗ್ರಾಮದ ಕೆಲವರು ಕಾಡಿಗೆ ಹೋಗಿ ಮೊಲವನ್ನು ಜೀವಂತವಾಗಿ ಹಿಡಿದು ತರುತ್ತಾರೆ. ಹೀಗೆ ಮೊಲದ ಕಿವಿಗೆ ಓಲೆ ಹಾಕುತ್ತಾರೆ. ಸಂಕ್ರಾಂತಿ ಹಬ್ಬದ ದಿನ ವಿಶೇಷವಾಗಿ ಪೂಜಿಸಿ , ಮೊಲವನ್ನು ಜೋಪಾನವಾಗಿ ಹಿಡಿದಿಟ್ಟಿರುತ್ತಾರೆ. ಹಬ್ಬದ ಮರುದಿನ ಸಂಜೆ ವರದರಾಜಸ್ವಾಮಿ ದೇಗುಲದ ಆವರಣದಿಂದ ವರದರಾಜಸ್ವಾಮಿ ಹಾಗೂ ವಿವಿಧ ದೇವರಿಗೆ ಪೂಜೆ ಸಲ್ಲಿಸಿ ನೂರಾರು ಜನರ ಸಮ್ಮುಖದಲ್ಲಿ ಮೊಲಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಿವಿಗೆ ಓಲೆ ಹಾಕಿರುವ ಮೊಲವನ್ನು ಪುನಃ ಕಾಡಿಗೆ ಬಿಡುತ್ತಾರೆ . ಅದು ಯಾವ ದಿಕ್ಕಿಗೆ ಓಡುತ್ತದೆಯೋ ಆ ದಿಕ್ಕಿನಲ್ಲಿ ಉತ್ತಮ ಬೆಳೆಯಾಗುತ್ತದೆ ಎಂಬ ಪ್ರತೀತಿ ಗ್ರಾಮಸ್ಥರಲ್ಲಿದೆ. ಇದೊಂದು ಪುಟ್ಟ ಜಾತ್ರೆಯ ರೀತಿ ನಡೆಯುತ್ತಿದ್ದು, ಅನಾದಿ ಕಾಲದಿಂದಲೂ ನಡೆದು ಬಂದಿದೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

4 × five =