ಮನುಷ್ಯ ನಾನು ಅಂಬುವ ಅಂಹಕಾರ ತೊರೆದು ಬದುಕಬೇಕು:ಡಾ.ಮಾತೆ ಗಂಗಾದೇವಿ!
ಯುವ ಭಾರತ ಸುದ್ದಿ (ಗೋಕಾಕ) ಬೆಟಗೇರಿ: ಅಂಗ ಎಂಬ ಶರೀರ ಹೊತ್ತ ಮನುಷ್ಯ ಅಂಹಕಾರ ಎಂಬ ಅ ಅಕ್ಷರದ ಅಡ್ಡ ಗೇರೆ ಅಳಿಸಿದರೆ ಲಿಂಗವಾಗುತ್ತೆದೆ. ಹಾಗೇ ಮನುಷ್ಯ ನಾನು ಅಂಬುವದು ತೊರೆದು ಬದುಕಬೇಕು. ಶಿವ ನಾಮಸ್ಮರಣೆ ಮಾಡುವುದರಿಂದ ಪರಮಾತ್ಮನ ಕೃಪೆಗೆ ಪಾತ್ರರಾಗುತ್ತೀರಿ ಎಂದು ಕೂಡಲಸಂಗಮ ಬಸವಧರ್ಮಪೀಠದ ಮಹಾಜಗದ್ಗುರು ಡಾ.ಮಾತೆ ಗಂಗಾದೇವಿ ಹೇಳಿದರು.
ಕೂಡಲಸಂಗಮ ಬಸವಧರ್ಮಪೀಠದ ಮಹಾಜಗದ್ಗುರು ಡಾ.ಮಾತೆ ಗಂಗಾದೇವಿ ಅವರು ಮಾತನಾಡುತ್ತಿರುವದು.
ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಫೆ.5 ರಂದು ನಡೆದ ೩೦೦ನೇ ಬಸವ ಸ್ಮೃತಿ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿಮಾತನಾಡಿದ ಅವರು, ಸ್ಥಳೀಯ ಶ್ರೀ ಮಠದಲ್ಲಿ ಪ್ರತಿ ತಿಂಗಳು ಹುಣ್ಣಿಮೆ ದಿನದಂದು ಬಸವ ಸ್ಮೃತಿ ಮಾಸಿಕ ಶಿವಾನುಭವ ಕಾರ್ಯಕ್ರಮದ ಹಮ್ಮಿಕೊಂಡು ಸಂತ-ಶರಣರ, ಮಹಾಸ್ವಾಮಿಜಿಗಳ ದರ್ಶನ ಮತ್ತು ಪ್ರವಚನ ಕೇಳುವ ಭಾಗ್ಯ ತಮಗೆಲ್ಲಾ ಕಲ್ಪಿಸುತ್ತಿರುವÀ ಮೌನಮಲ್ಲಿಕಾರ್ಜುನ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮಿಜಿ ದಿವ್ಯ ಸಾನಿಧ್ಯ, ಇಲ್ಲಿಯ ಮೌನ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾರ್ಜುನ ಮಹಾಶಿವಯೋಗಿಗಳು ಅಧ್ಯಕ್ಷತೆ, ಕೂಡಲಸಂಗಮದ ಮಾತೋಶ್ರೀ ಬಸವರತ್ನಾದೇವಿ ಮಾತಾಜಿ ಕಾರ್ಯಕ್ರಮದ ಸಮ್ಮುಖ ವಹಿಸಿ ಪ್ರವಚನ ನೀಡಿದರು. ಮೂಡಲಗಿಯ ಸದಾಶಿವ ತಬಲಟ್ಟಿ ಉಪನ್ಯಾಸ ನೀಡಿದರು. ಆಗಮಿತ ನಾಡಿನ ಸಕಲ ಹರ-ಗುರು, ಚರಮೂರ್ತಿಗಳು, ಗಣ್ಯರನ್ನು ಹಾಗೂ ಕೂಡಲಸಂಗಮ ಬಸವಧರ್ಮಪೀಠದ ಮಹಾಜಗದ್ಗುರು ಡಾ.ಮಾತೆ ಗಂಗಾದೇವಿ ಅವರನ್ನು ಸ್ಥಳೀಯ ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು.
ಕೂಡಲಸಂಗಮ ಬಸವಧರ್ಮಪೀಠದ ಮಹಾಜಗದ್ಗುರು ಡಾ.ಮಾತೆ ಗಂಗಾದೇವಿ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸುತ್ತಿರುವದು.
ಗೋಕಾಕದ ಶರಣರಾದ ಬಸವರಾಜ ಬಿಜಲಿ, ಬಸವರಾಜ ಯರಗಟ್ಟಿ, ಗೋಕಾಕ ರಾಷ್ಟಿçÃಯ ಬಸವದಳದ ಅಧ್ಯಕ್ಷ ಉಳ್ಳಾಗಡ್ಡಿ ಸೇರಿದಂತೆ ಬಸವದಳದ ಹಲವಾರು ಜನ ಶರಣರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಂತ-ಶರಣರು, ಆಧ್ಯಾತ್ಮ ಪ್ರವೀಣರು, ಗಣ್ಯರು, ಶ್ರೀಮಠದ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಇದ್ದರು. ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಕಾರ್ಯಕ್ರಮ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ, ಕೊನೆಗೆ ವಂದಿಸಿದರು.