Breaking News

ಅದಲು-ಬದಲು ? ಬೆಳಗಾವಿ ಗೆಲ್ಲಲು ಪಣತೊಟ್ಟ ಕಮಲ ಪಕ್ಷ !

Spread the love

ಅದಲು-ಬದಲು ? ಬೆಳಗಾವಿ ಗೆಲ್ಲಲು ಪಣತೊಟ್ಟ ಕಮಲ ಪಕ್ಷ !

ವರದಿ-ಹರ್ಷವರ್ಧನ 

ಯುವ ಭಾರತ ಸುದ್ದಿ ಬೆಳಗಾವಿ :ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯ ಮೂರು ಮತಕ್ಷೇತ್ರದಲ್ಲಿ ಗೆದ್ದೇ ತೀರಬೇಕು ಎಂಬ ಛಲದಲ್ಲಿ ಇದೀಗ ಬಿಜೆಪಿ ಭರದ ತಯಾರಿ ನಡೆಸಿದೆ.

ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಮತಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲೇಬೇಕು ಎಂಬ ಛಲತೊಟ್ಟಿರುವ ಪಕ್ಷದ ವರಿಷ್ಠರು ಇದಕ್ಕೆ ಬೇಕಾದ ಅಸ್ತ್ರಗಳನ್ನು ತಮ್ಮ ಬತ್ತಳಿಕೆಯಲ್ಲಿ ಸಜ್ಜಾಗಿರಿಸಿಕೊಂಡಿದ್ದಾರೆ. ಬೆಳಗಾವಿ ಉತ್ತರ ಮತ್ತು ದಕ್ಷಿಣದಲ್ಲಿ ಸದ್ಯ ಬಿಜೆಪಿ ಶಾಸಕರಿದ್ದಾರೆ. ಆದರೆ, ಗ್ರಾಮೀಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಮತಕ್ಷೇತ್ರದಲ್ಲೂ ಬಿಜೆಪಿ ಅರಳಿಸಲು ಪಣತೊಟ್ಟಿದ್ದು ಇದೀಗ ಅದಕ್ಕೆ ಬೇಕಾದ ರಣತಂತ್ರಗಳನ್ನು ಹೆಣೆಯುತ್ತಿದೆ. ಈ ನಿಟ್ಟಿನಲ್ಲಿ ಹಾಲಿ ಶಾಸಕರ ಕ್ಷೇತ್ರಗಳು ಅದಲು ಬದಲಾಗುವ ಸಾಧ್ಯತೆಯೂ ಇದೆ.

ಮರಾಠಾ ಸಮುದಾಯದ ಮತಗಳು ನಿರ್ಣಾಯಕ ಸಂಖ್ಯೆಯಲ್ಲಿರುವ ಬೆಳಗಾವಿ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಶಾಸಕ ಅನಿಲ ಬೆನಕೆ ಅವರನ್ನು ಬೆಳಗಾವಿ ದಕ್ಷಿಣಕ್ಕೆ ಕಳಿಸಬಹುದು. ಮರಾಠಾ ಮತಗಳ ಮೇಲೆ ಕಣ್ಣಿಟ್ಟು ಈ ಸಲ ಯುವ ನಾಯಕ ಕಿರಣ ಜಾಧವ ಇಲ್ಲಿ ತಮ್ಮ ಹಕ್ಕೋತಾಯ ಮಂಡಿಸಿದ್ದಾರೆ.

ಈ ಮೊದಲು ಅಸ್ತಿತ್ವದಲ್ಲಿದ್ದ ಹಿರೇಬಾಗೇವಾಡಿ ಮತಕ್ಷೇತ್ರದಲ್ಲಿದ್ದ ಬಹುತೇಕ ಹಳ್ಳಿಗಳು ಹಾಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿವೆ. ಹಿರೇಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿದ್ದ ಹಳ್ಳಿಗಳ ನಾಡಿಮಿಡಿತ ಅರಿತಿರುವ ಕಾರಣಕ್ಕೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಬೆಳಗಾವಿ ದಕ್ಷಿಣವನ್ನು ಸದ್ಯ ಪ್ರತಿನಿಧಿಸುತ್ತಿರುವ ಅಭಯ ಪಾಟೀಲ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಿದರೂ ಅಚ್ಚರಿಪಡಬೇಕಾಗಿಲ್ಲ. ಒಂದು ವೇಳೆ ಅನಿಲ್ ಬೆನಕೆ ಅವರಿಗೆ ಬೆಳಗಾವಿ ದಕ್ಷಿಣದಲ್ಲಿ ಟಿಕೆಟ್ ನೀಡಿದರೆ ಆ ಸ್ಥಾನಕ್ಕೆ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಆ ಸಮುದಾಯದವರೆ ಆಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಖ್ಯಾತ ನ್ಯಾಯವಾದಿ ಮುರುಗೇಂದ್ರ ಗೌಡ ಪಾಟೀಲ ಅವರು ಅಭ್ಯರ್ಥಿಯಾಗಬಹುದು.

ಒಟ್ಟಾರೆ, ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಈ ಬಾರಿ ಕಣಕ್ಕಿಳಿಯುವ ಅಭ್ಯರ್ಥಿಗಳು ಯಾರಾಗಬಹುದು ಎಂಬ ಚರ್ಚೆಯೂ ತುಸು ಜೋರಾಗಿ ನಡೆದಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

10 − 3 =