ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಐತಿಹಾಸಿಕ ಬಜೇಟ್ ಮಂಡಿಸಿದ್ದಾರೆ- ಜ್ಯೋತಿ ಕೋಲ್ಹಾರ
ಗೋಕಾಕ: ಮಧ್ಯಮ ಹಾಗೂ ದುಡಿಯುವ ವರ್ಗ, ರೈತರ ಮತ್ತು ಮಹಿಳೆರ ಹಿತ ಚಿಂತನೆಯೊ0ದಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಶಿಕ್ಷಣ ಕ್ಷೇತ್ರಕ್ಕೆ ೩೮ಸಾವಿರ ಕೋಟಿ ಅನುಆನ ಹಚಿಚಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಐತಿಹಾಸಿಕ ಬಜೇಟ್ ಮಂಡಿಸಿದ್ದಾರೆ ಎಂದು ಬಿಜೆಪಿ ಬೆಳಗಾವಿ ಗ್ರಾಮಾಂತರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲ್ಹಾರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರುವ ಅವರು, ರೈತರಿಗೆ ೩ಲಕ್ಷದಿಂದ ೫ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಯುವ ಸ್ನೇಹಿ ಎಂಬ ಯೋಜನೆಯಡಿ ತಲಾ ೨ಸಾವಿರ ನಿರುದ್ಯೋಗಿ ಯುವಜನತೆಗೆ ಆರ್ಥಿಕ ಧನ ಸಹಾಯ, ಮಹಿಳಾ ಸಬಲೀಕರಣಕ್ಕೆ ೪೬ಸಾವಿರ ಕೋಟಿ ೫೬ ಸಣ್ಣರೈತರಿಗೆ ೧೮೦ ಕೋಟಿಯಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ, ಆರೋಗ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬೃಹತ್ ಪ್ರಮಾಣದಲ್ಲಿ ಅನುದಾನ ನೀಡಿದ್ದು ಇದೊಂದು ಇತಿಹಾಸ ಪುಟದಲ್ಲಿ ದಾಖಲಾದ ಬಜೇಟ್ ಎಂದು ಬಣ್ಣಿಸಿದ್ದಾರೆ.