ನದಾಫ ಪಿಂಜಾರ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಸ್ವಾಗತ ಆದರೆ ನಮ್ಮ ಬೇಡಿಕೆ ಪ್ರತ್ಯೇಕ ನಿಗಮ ಮಂಡಳಿ-ಮೀರಾಸಾಬ ನದಾಫ.!
ಗೋಕಾಕ: ಸಿಎಮ್ ಬಸವರಾಜ ಬೊಮ್ಮಾಯಿಯವರು ಅಲ್ಪಸಂಖ್ಯಾತರಲ್ಲಿ ಅತೀ ಹಿಂದುಳಿದ ನದಾಫ ಪಿಂಜಾರ ಸಮಾಜಕ್ಕೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎಲ್ಲಾ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆ ಬಜೇಟನಲ್ಲಿ ನೀಡಿರುವದು ಸ್ವಾಗತಾರ್ಹವಾಗಿದೆ ಎಂದು ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದÀ ತಾಲೂಕ ಅಧ್ಯಕ್ಷ ಮೀರಾಸಾಬ ನದಾಫ ಹೇಳಿದರು.
ಅವರು, ನಗರದಲ್ಲಿ ಶನಿವಾರದಂದು ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ನದಾಪ್ ಹಾಗೂ ಪಿಂಜಾರ ಸಮುದಾಯದ ಜನ ಜೀವನ ತೀರಾ ಸಂಕಷ್ಟದಲ್ಲಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತುಂಬಾ ಹಿಂದುಳಿದ್ದಾರೆ. ಅಲೆಮಾರಿ ಎಂದು ಗುರುತಿಸಿರುವ ಈ ಸಮುದಾಯದವಾಗಿದೆ. ಮಾನ್ಯ ಸಿಎಮ್ ಬೊಮ್ಮಾಯಿಯವರು ರಾಜ್ಯದಲ್ಲಿ೪೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಜನಾಂಗಕ್ಕೆ ಬಜೇಟನಲ್ಲಿ ಪ್ರತ್ಯೇಕ ನಿಗಮ ಮಂಡಳಿ ಭರವಸೆ ನೀಡಿದ್ದರೂ ಘೋಷಿಸದಿರುವದು ನಮಗೆ ನೋವುಂಟು ಮಾಡಿದೆ ಎಂದರು.
ಸಿಎಮ್ ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದಲ್ಲೂ ನಮ್ಮ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ. ನದಾಫ ಪಿಂಜಾರ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆಯ ಆಶಾಭಾವನೆಯನ್ನು ಇಟ್ಟುಕೊಂಡಿದ್ದ ನಮಗೆ ಅನ್ಯಾಯವಾಗಿದೆ. ಚುನಾವಣೆಯ ಒಳಗಾಗಿ ನದಾಫ್ ಪಿಂಜಾರ ಸಮಾಜಕ್ಕೆ ಶುಭಸುದ್ದಿಯನ್ನು ಸರಕಾರ ನೀಡಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದÀ ಸಂಘಟನಾ ಕಾರ್ಯದರ್ಶಿ ಇಕ್ಬಾಲ ನದಾಫ, ಕಾರ್ಯದರ್ಶಿ ಮುಸ್ತಾಕ ನದಾಫ, ನಜೀರ ನದಾಫ, ಯುನುಸ್ ನದಾಫ್ ಇದ್ದರು.