Breaking News

ಮಾಳಿ(ಮಾಲಗಾರ) ಮತ್ತು ಹಡಪದ ಸಮಾಜಗಳಿಗೆ ಅಭಯ ನೀಡಿರುವ ಶಾಸಕರಾದ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಪಿ ರಾಜೀವ್

Spread the love

ಮಾಳಿ(ಮಾಲಗಾರ) ಮತ್ತು ಹಡಪದ ಸಮಾಜಗಳಿಗೆ ಅಭಯ ನೀಡಿರುವ ಶಾಸಕರಾದ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಪಿ ರಾಜೀವ್

ನಿಮ್ಮ ಆಶಯಗಳಿಗೆ ಎಂದಿಗೂ ನಿರಾಸೆ ಮಾಡಲ್ಲ. ನೆಮ್ಮದಿಯಿಂದಿರಿ. ಪ್ರತ್ಯೇಕ ನಿಗಮ ರಚಿಸುವ ಜವಾಬ್ದಾರಿ ನಮ್ಮದು

ಯುವ ಭಾರತ ಸುದ್ದಿ ಬೆಂಗಳೂರು:
ಇನ್ನೂ ಸಪ್ಲಿಮೆಂಟರಿ ಬಜೆಟ್ ಮಂಡನೆ ಬಾಕಿ ಇರುವುದರಿಂದ ಮಾಳಿ (ಮಾಲಗಾರ) ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವ ನಿಟ್ಟಿನಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನಾನು ಮತ್ತು ಪಿ.ರಾಜೀವ್ ಕೂಡಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ.

ಕಳೆದ ಫೆ.೧೭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಡೀ ರಾಜ್ಯವೇ ಮೆಚ್ಚುವ ಜನಪರ ಬಜೆಟ್ ಮಂಡಿಸಿದ್ದಾರೆ. ಎಲ್ಲ ವರ್ಗಗಳ ಜನ ಸಾಮಾನ್ಯರಿಗೂ ಈ ಬಜೆಟ್ ಹತ್ತಿರವಾಗಿದೆ. ಸಣ್ಣ ಸಣ್ಣ ಸಮಾಜಗಳು ಆರ್ಥಿಕತೆಯಲ್ಲಿ ಮುಂದೆ ಬರಬೇಕು. ಅವಶ್ಯಕತೆಯುಳ್ಳ ಸಣ್ಣ ಸಮಾಜಗಳಿಗೆ ಅದರಲ್ಲೂ ಮಾಳಿ (ಮಾಲಗಾರ) ಸಮಾಜಕ್ಕೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು. ರಾಯಬಾಗ ತಾಲ್ಲೂಕಿನ ಮುಗಳಖೋಡ ಪಟ್ಟಣದಲ್ಲಿ ಡಿ.೨೬ ರಂದು ರಾಜ್ಯ ಮಟ್ಟದ ಮಾಳಿ (ಮಾಲಗಾರ) ಸಮಾಜದ ಸಮಾವೇಶದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದರು ಎಂದು ಆ ಸಮುದಾಯಗಳ ಮುಖಂಡರು ಸ್ಮರಿಸಿಕೊಂಡಿದ್ದಾರೆ.

ಆದರೆ, ಕಳೆದ ಶುಕ್ರವಾರದಂದು ನಡೆದ ಬಜೆಟ್ ನಲ್ಲಿ ಇದು ಕಾರ್ಯರೂಪಕ್ಕೆ ತಂದಿಲ್ಲ. ನಮ್ಮ ಸಮಾಜಕ್ಕೆ ಸರಕಾರ ಸುಳ್ಳು ಹೇಳಿಕೆಯನ್ನು ನೀಡಿ ಮರುಳು ಮಾಡುತ್ತಿದೆ ಎಂಬಿತ್ಯಾದಿ ಹೇಳಿಕೆಗಳನ್ನು ಸಮಾಜದ ಪದಾಧಿಕಾರಿಗಳು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇನ್ನೂ ಬಜೆಟ್‌ನ ಸಪ್ಲಿಮೆಂಟರಿ ಪ್ರತಿ ಹೊರಬರಬೇಕಾಗಿದೆ. ಸಮಯವೂ ಇದೆ. ಯಾವುದೇ ಕಾರಣಕ್ಕೂ ಮಾಳಿ ಸಮಾಜವಾಗಲೀ, ಹಡಪದ ಸಮಾಜವಾಗಲಿ ನಿರಾಸೆಗೊಳ್ಳಬೇಡಿ. ನಾವು ಮೂವರು ಸೇರಿಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿಗಮ ರಚನೆಯ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇವೆ. ಅಲ್ಲಿಯತನಕ ಶಾಂತ ಚಿತ್ತರಾಗಿರಿ. ಸಮಾಧಾನದಿಂದಿರಿ ಎಂದು ಅವರುಗಳು ಮನವಿ ಮಾಡಿದ್ದಾರೆ.

ಮಾಳಿ (ಮಾಲಗಾರ) ಸಮಾಜಗಳ ಅಭಿವೃದ್ಧಿಗಾಗಿ ಶೈಕ್ಷಣಿಕವಾಗಿ, ಯುವಕರಿಗೆ ಸ್ವಯಂ ಉದ್ಯೋಗ, ವಿದ್ಯಾರ್ಥಿ ವೇತನದ ಅನುಕೂಲ ಮಾಡಿಕೊಡಲು ನಿಗಮ ಮಂಡಳಿ ರಚಿಸಿಕೊಡುವ ಜವಾಬ್ದಾರಿ ನಮ್ಮದು. ಜತೆಗೆ ಹಡಪದ ಸಮಾಜದ ಮಕ್ಕಳಿಗೂ ಅನುಕೂಲವಾಗುವಂತೆ ನಿಗಮದಲ್ಲಿ ಪರಿಷ್ಕರಣೆ ಮಾಡಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತೇವೆ. ಈ ಮೂಲಕ ಸಮಾಜ ಬಾಂಧವರ ಬೇಡಿಕೆಗಳನ್ನು ಈಡೇರಿಸಲು ಅತ್ಯಂತ ಪ್ರಾಮಾಣಿಕವಾಗಿ ಪ್ರಯತ್ನಸುತ್ತೇವೆ. ನಮ್ಮ ಸರಕಾರದ ಮೇಲೆ ನಂಬಿಕೆಯನ್ನು ಇಟ್ಟುಕೊಳ್ಳಿ ಎಂದು ನಿರಾಸೆಯಲ್ಲಿರುವ ಮಾಳಿ ಮತ್ತು ಹಡಪದ ಸಮುದಾಯಕ್ಕೆ ಶಾಸಕರಾಗಿರುವ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ ಮತ್ತು ಪಿ.ರಾಜೀವ್ ಅವರುಗಳು ಭರವಸೆಯನ್ನು ನೀಡಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

two × three =