Breaking News

ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಮಹಾಶಿವರಾತ್ರಿ ಅಮಾವಾಸ್ಯೆ ನಿಮಿತ್ತ ಮಾಸಿಕ ಶಿವಾನುಭವ ಗೋಷ್ಠಿ

Spread the love

ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಮಹಾಶಿವರಾತ್ರಿ ಅಮಾವಾಸ್ಯೆ ನಿಮಿತ್ತ ಮಾಸಿಕ ಶಿವಾನುಭವ ಗೋಷ್ಠಿ

ಯುವ ಭಾರತ ಸುದ್ದಿ ಇಂಡಿ:
೧೨ ನೇ ಶತಮಾನದಲ್ಲಿ ಶರಣರು ನಿಜವಾದ ವ್ಯಕ್ತಿತ್ವ ವಿಕಸನವನ್ನು ತಮ್ಮ ವಚನಗಳ ಮೂಲಕ ತೋರಿಸಿದ್ದಾರೆ.ಬಸವಣ್ಣನವರು ಕಳಬೇಡ,ಕೊಲಬೇಡ ಎಂಬ ಏಳು ಅನುಶಾಸನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ವಿಜಯಪುರದ ಗೆಜ್ಜಿ ಕರಿಯರ ಅಕಾಡೆಮಿ ಮುಖ್ಯಸ್ಥ ಸುರೇಶ ಗೆಜ್ಜಿ ಹೇಳಿದರು.
ಅವರು ಸೋಮವಾರ ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಪುಂಡಲಿAಗ ಮಹಾಶಿವಯೋಗಿಗಳ ಮಠದಲ್ಲಿ ಮಹಾಶಿವರಾತ್ರಿ ಅಮವಾಸ್ಯೆ ನಿಮಿತ್ಯ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಡೆ ನುಡಿ ಒಂದಾಗಬೇಕು.ಸತ್ಯ ನುಡಿಯುವುದೇ ದೇವಲೋಕ.ಸತ್ಯವೇ ಶ್ರೇಷ್ಠ ಎಂಬ ವಿಚಾರವನ್ನು ಅಕ್ಕಮಹಾದೇವಿಯವರ ವಚನದಲ್ಲಿ ಕಾಣಬಹುದು.ಬಸವಣ್ಣನವರ ವಚನದಲ್ಲಿ ಸಾವಿರ ಸಜ್ಜನರ ಸಂಗ ಲೇಸು ಎನ್ನುವಂತ ವಿಚಾರ,ಮುಕ್ತಾಯಕ್ಕನ ವಚನದಲ್ಲಿ ತನ್ನ ತಾನು ಅರಿವುದೇ ಜೀವನ ಎಂಬAತಹ ಶರಣರ ವಚನಗಳಲ್ಲಿ ಸಾರ್ವತ್ರಿಕ ಮೌಲ್ಯಗಳಿದ್ದು ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಸನವಾಗಲು ನಿರಂತರವಾಗಿ ಶರಣರ ವಚನಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಅರಿವು,ಅಕ್ಷರ,ಅನುಸಂಧಾನದ ಮೂಲಕ ಅನುಭವ ಮಂಟಪ ಕಟ್ಟಿದ್ದರು. ಅನುಭವ ಮಂಟಪ ಕೇವಲ ಕಲ್ಲಿನ ಕಟ್ಟಡವಾಗಿರಲಿಲ್ಲ.ಅರಿವಿನ ಅನುಸಂಧಾನವಾಗಿತ್ತು. ಸಮಾಜ ವಿಕಾಸನವಾಗಬೇಕಾದರೆ ವ್ಯಕ್ತಿ ವಿಕಾಸನವಾಗಬೇಕು ಎಂಬುದನ್ನು ಅಲ್ಲಮ,ಅಣ್ಣ,ಅಕ್ಕ ಮತ್ತಿತರ ಶರಣರು ತಮ್ಮ ವಚನ ಮತ್ತು ವ್ಯಕ್ತಿತ್ವದ ಮೂಲಕ ನಿರೂಪಿಸಿದ್ದಾರೆ.ಶರಣರು ಅನುಭವ ಮಂಟಪದ ಮೂಲಕ ಬದುಕಿನ ಸಾಮಾಜಿಕ,ಧಾರ್ಮಿಕ,ಆರ್ಥಿಕ ಮತ್ತು ಮನೋವೈಜ್ಞಾನಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಚರ್ಚೆಮಾಡಿ,ಚರ್ಚೆಯ ಪ್ರತಿಫಲವನ್ನು ವಚನಗಳ ಮೂಲಕ ದಾಖಲಿಸಿ ಹೋಗಿರುವುದು ಕನ್ನಡದ ಬಹುದೊಡ್ಡ ಇತಿಹಾಸ ಎಂದು ಹೇಳಿದ ಅವರು,ಅಧ್ಯಾತ್ಮೀಕ ಕೇವಲ ಸನ್ಯಾಸಿಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಶರಣರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.ಸಂಸಾರ ದಿಂದಲೂ ಸದ್ಗತಿ ಸಾಧ್ಯ ಎಂಬುದನ್ನು ಗೋಳಸಾರದ ಸದ್ಗುರು ಪುಂಡಲಿಂಗ ಮಹಾಶಿವಯೋಗಿಗಳು ಜಗತ್ತಿಗೆ ತೊರಿಸಿಕೊಟ್ಟಿದ್ದಾರೆ.ವಚನಕಾರರ ಮೌಲ್ಯಗಳನ್ನು ಇಟ್ಟುಕೊಂಡು ಆರೋಗ್ಯಕರ ಸಮಾಜ ಮತ್ತು ಚಾರಿತ್ರಿಕ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಶ್ರೀ ಮಠದ ಪೀಠಾಧಿಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ಮಾತೋಶ್ರೀ ಗುರುದೇವಿ ಅಮ್ಮನವರು,ಅಂಬಣ್ಣ ಸಲಗರ,ಗುರುನಾಥ ಕೋಳಿ,ರವೀಂದ್ರ ಆಳೂರ,ಶಿವಲಿಂಗಪ್ಪ ನಾಗಠಾಣ,ಆಲಿಂಗರಾಯ ಕುಮಸಗಿ,ದತ್ತಾತ್ರೇಯ ಮಠಪತಿ,ಜಟ್ಟೆಪ್ಪ ಡೊಂಬಳಿ ಸೇರಿದಂತೆ ಭಕ್ತರು ಕಾರ್ಯಕ್ರಮದಲ್ಲಿ ಇದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × 4 =