Breaking News

ಗೋಕಾಕ : ಶರಣ ಸಂಸ್ಕೃತಿ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ

Spread the love

ಗೋಕಾಕ : ಶರಣ ಸಂಸ್ಕೃತಿ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ

ಯುವ ಭಾರತ ಸುದ್ದಿ ಗೋಕಾಕ :
ಶೂನ್ಯ ಸಂಪಾದನ ಮಠ ಆಚರಿಸಿಕೊಂಡು ಬರುತ್ತಿರುವ ಶರಣ ಸಂಸ್ಕೃತಿ ಉತ್ಸವ ಸಾಂಪ್ರದಾಯಿಕ ಆಚರಣೆಯಾಗಿರದೆ ವೈಚಾರಿಕತೆ ಬಿತ್ತುವ, ಸಮಾನತೆ ಸಾರುವ, ಸರ್ವರು ಪಾಲ್ಗೊಳ್ಳುವಿಕೆಯ ಮತ್ತು ಸರ್ವೋದಯ ಪ್ರೇರಣೆಯ ಹಬ್ಬವಾಗಿದೆ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಕಾರಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಬುಧವಾರದಂದು ಇಲ್ಲಿನ ಶೂನ್ಯ ಸಂಪಾದನ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಪೂರ್ಣಭಾವಿ ಸಭೆ ಮತ್ತು ಆಮಂತ್ರಣ ಪತ್ರಿಕೆ, ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ, ಮಾ .೧ ರಿಂದ ೪ರವರೆಗೆ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವತತ್ವ ಸಮಾವೇಶ, ವೈದ್ಯ ಸಮಾವೇಶ, ಮಹಿಳಾ ಸಮಾವೇಶ , ಕಾಯಕಶ್ರೀ ಪ್ರಶಸ್ತಿ ಪ್ರಧಾನ, ಯುವ ಸಮಾವೇಶ , ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಾಡಿನ ನಾನಾ ಮಠಾಧೀಶರು, ಚಿಂತಕರು, ವೈದ್ಯರು, ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶರಣ ಸಂಸ್ಕೃತಿ ಉತ್ಸವ ಒಂದು ಮಠಕ್ಕೆ , ಒಂದು ಸಮಾಜಕ್ಕೆ ಸಿಮೀತವಾಗದೆ ಗೋಕಾಕ ನಾಡಿನ ಹಬ್ಬವಾಗಬೇಕು ಆ ನಿಟ್ಟಿನಲ್ಲಿ ಕಳೆದ ೧೮ ವರ್ಷಗಳಿಂದ ಶ್ರಮವಹಿಸಿ ಈ ಕಾರ್ಯಕ್ರಮವನ್ನು ಸಂಘಟಿಸುತಾ ಬಂದಿದ್ದು, ಇಂದು ಈ ಕಾರ್ಯಕ್ರಮ ರಾಜ್ಯವ್ಯಾಪಿ ಪ್ರಚಾರ ಪಡೆದುಕೊಂಡಿದ. ಈ ಶ್ರೇಯಸ್ಸು ಶ್ರೀಮಠದ ಅಪಾರ ಭಕ್ತಾದಿಗಳಿಗೆ ಸಲ್ಲುತ್ತದೆ. ಇನ್ನು ಹೆಚ್ಚಿನ ಕಾರ್ಯವಹಿಸಿ ಈ ವರ್ಷದ ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೆ ಶ್ರಮಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಕಾಯಕಶ್ರೀ ಪ್ರಶಸ್ತಿ ಪುರಸ್ಕೃತರು: ಮಾರ್ಚ ೩ ರಂದು ನಡೆಯುವ ಮಹಿಳಾ ಸಮಾವೇಶದಲ್ಲಿ ಮಹಾರಾಷ್ಟ್ರ ಮುಂಬೈನ ಡಾ.ಕಲ್ಪನಾ ಸರೋಜ್ ಅವರು ಶ್ರೀಗಳ ಅಮೃತ ಹಸ್ತದಿಂದ ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಉತ್ಸವ ಸಮಿತಿ ಅಧ್ಯಕ್ಷ ಜಯಾನಂದ ಮುನ್ನವಳ್ಳಿ ಕಳೆದ ೧೮ ವರ್ಷದಿಂದ ಶ್ರೀಗಳು ಶರಣ ಸಂಸ್ಕೃತಿ ಉತ್ಸವ ಮಾಡುತಾ ಬಂದಿದ್ದಾರೆ. ಈ ಕಾರ್ಯಕ್ರಮದಿಂದ ಸಮಾಜ ಸುಧಾರಣೆ , ಬದಲಾವಣೆ ಆಗಬೇಕು ಎಂಬ ಮಹತ್ತರ ಉದ್ದೇಶದಿಂದ ಮಾಡಲಾಗುತ್ತಿದ್ದು, ಉತ್ಸವದಲ್ಲಿ ಭಾಗವಹಿಸಿ ವಿಚಾರಗಳನ್ನು ಮಂಡಿಸುವ ಚಿಂತಕರ ಚಿಂತನೆಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ಉತ್ಸವ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜು ಭೈರುಗೋಳ, ಸದಾಶಿವ ಗುದಗಗೋಳ, ವಿಜಯಲಕ್ಷ್ಮಿ ,ಜಯಾನಂದ ಹುಣ್ಣಚ್ಯಾಳಿ, ಡಾ.ಸಿ.ಕೆ ನಾವಲಗಿ ಉಪಸ್ಥಿತರಿದ್ದರು .


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four − 1 =