ಇಟಗಿ : ಆರೋಗ್ಯ ಅಮೃತ ಅಭಿಯಾನ

ಯುವ ಭಾರತ ಸುದ್ದಿ ಇಟಗಿ : ಇಟಗಿ ಗ್ರಾಮದ ಗ್ರಾಪಂ ಸಭಾಭವನದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ ಹಾಗೂ ಜಿಪಂ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದ “ಅನೀಮಿಯ ಮುಕ್ತತೆ” “ಮುಟ್ಟಿನ ನೈರ್ಮಲ್ಯತೆ”ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ ಅಧ್ಯಕ್ಷೆ ಶಾಂತವ್ವ ಸುಣಗಾರ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದ “ಅನೀಮಿಯ ಮುಕ್ತತೆ” “ಮುಟ್ಟಿನ ನೈರ್ಮಲ್ಯತೆ” ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ವಿಜಯಲಕ್ಷ್ಮೀ ಮೂರನಾಳ ಮಾತನಾಡಿ, ರಕ್ತಹೀನತೆ ಗುಣಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದರು.
ಪಿಡಿಓ ವಿರೇಶ ಸಜ್ಜನ ಬಾಲ್ಯವಿವಾಹದಿಂದ ಆಗುವ ತೊಂದರೆಗಳು, ಅದನ್ನು ತಡೆಯಲು ಎಲ್ಲರೂ ಮುಂದಾಗಬೇಕೆಂದರು.
ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನದ ತಾಲೂಕು ಸಂಯೋಜಕ ರಾಮನಗೌಡ ಪಾಟೀಲ ಮಾತನಾಡಿ, ಕ್ಷಯರೋಗ, ರಕ್ತಹೀನತೆ, ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ ಯೋಜನೆ ಬಗ್ಗೆ ವಿವರಿಸಿದರು.
ಗ್ರಾಪಂ ಸದಸ್ಯ ವಿಠ್ಠಲ ಕಿಳೋಜಿ, ಕಾರ್ಯದರ್ಶಿ ಲಲಿತಾ ಪತ್ತಾರ ಹಾಗೂ ಇತರರು ಉಪಸ್ಥಿತರಿದ್ದರು.
YuvaBharataha Latest Kannada News