ಮುತ್ನಾಳದಲ್ಲಿ 13 ರಿಂದ ಮಸ್ತಕಾಭಿಷೇಕ, ಪಂಚಕಲ್ಯಾಣ ಮಹೋತ್ಸವ
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಕ್ಷೇತ್ರ ಕಾಂಚನಶೃತಿ ವಿದ್ಯಾಸಂಸ್ಥೆ ಅಹಿಂಸಾ ಕ್ಷೇತ್ರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಭಗವಾನ್ ಬಾಹುಬಲಿ ಪ್ರತಿಮೆಗೆ ಮಹಾ ಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವ ಮಾ.13 ರಿಂದ ಮಾ.17 ರವರೆಗೆ ನಡೆಯಲಿವೆ.
ಬೆಂಗಳೂರಿನ ಬಿ.ಎಸ್.ನೇಮೇಶ ಮತ್ತು ಅವರ ಪತ್ನಿ ಜಿ,.ಎನ್.ಮೀನ ಅವರ ಸುಪತ್ರಿ ಕುಮಾರಿ ನಿಶ್ಮಿತ ಬಿ.ಎನ್. ಅಕಾಲಿಕ ದೈವಾಧೀನರಾದ ಹಿನ್ನಲೆಯಲ್ಲಿ ಪುತ್ರಿಯ ಸ್ಮರಣೆಗಾಗಿ ಭಗವಾನ್ ಬಾಹುಬಲಿ ಪ್ರತಿಮೆಯನ್ನು ಬೆಳಗಾವಿ ತಾಲೂಕಿನ ಮುತ್ನಾಳ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದೆ. ನೂತನವಾಗಿ ಪ್ರತಿಷ್ಠಾಪಿಸಲಾದ ಪ್ರತಿಮೆಯ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರ ಮಾ.13 ರಂದು ಧ್ವಜಾರೋಹಣ, ಗರ್ಭಕಲ್ಯಾಣ, ಮಾ.14 ರಂದು ಜನ್ಮಕಲ್ಯಾಣ ರಾಜ್ಯಾಭಿಷೇಕ, ದೀಕ್ಷಾಕಲ್ಯಾಣ, ಮಾ.15 ರಂದು ಕೇವಲಜ್ಞಾನ ಮೋಕ್ಷಕಲ್ಯಾಣ, ಮಾ. 16 ಮತ್ತು 17 ರಂದು ಕಲ್ಪಧ್ರುವ ಪೂಜೆ ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ .
ಈ ಕಾರ್ಯಕ್ರಮಕ್ಕೆ ನಾಡಿನ ಅನೇಕ ಹಿರಿಯ ಸಮಾಜ ಮುಖಂಡ, ಶಾಸಕ ಅಭಯ ಪಾಟೀಲ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ, ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಹಿಂಸಾ ಕ್ಷೇತ್ರದ ಅಧಿಷ್ಠಾತ ಪಾರೀಶ ಹುಕ್ಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.