ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ.- ಶಾಸಕ ರಮೇಶ ಜಾರಕಿಹೊಳಿ.
ಗೋಕಾಕ: ಗ್ರಾಮ ಮಟ್ಟದಲ್ಲಿ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಆಡಳಿತ ಮಂಡಳಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು ಸರಕಾರ ನೀಡಿರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ತಾಲೂಕಿನ ಅಂಕಲಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಅಂಕಲಗಿ ಇದರ ಚುನಾವಣೆಯಲ್ಲಿ ಎಲ್ಲ ಆಡಳಿತ ಮಂಡಳಿ ಸದಸ್ಯರು ಅವಿರೋಧ ಆಯ್ಕೆಗೆ ಶ್ರಮಿಸಿದ ಹಿನ್ನಲೆ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಮತ್ತು ಅವರ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮೂಲ ಉದ್ದೆಶ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಡಳಿತ ಮಂಡಳಿ ರೈತರ, ಕೃಷಿಕರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರ ಸಹಾಯಕ ಭೀಮಗೌಡ ಪೋಲಿಸಗೌಡರ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮುಖಂಡರುಗಳಾದ ರುದ್ರಗೌಡ ಮುದಗೌಡ್ರ, ಬಸವರಾಜ ಪಟ್ಟಣಶೆಟ್ಟಿ, ಬಸನಗೌಡ ನಿರ್ವಾಣಿ, ಶಂಕರ ಬೂಸನ್ನವರ, ಲಕ್ಕಪ್ಪ ಪೂಜೇರಿ, ಶಿವಾನಂದ ಮಲಕನ್ನವರ, ನಾಗಪ್ಪ ಕಿಲ್ಯಾಗೋಳ, ಸಿದ್ದಪ್ಪ ನಾಗರಾಳ, ಬಸವಣ್ಣಿ ಪಾಟೀಲ, ಅಡಿವೆಪ್ಪ ನೇಸರಗಿ, ರುದ್ರಗೌಡ ಪಾಟೀಲ, ಚಂದ್ರು ಗಸ್ತಿ, ಅಡಿವೆಪ್ಪ ಮಳಗಲಿ, ದುಂಡಪ್ಪ ಮಳಗಲಿ, ನೂತನ ಆಡಳಿತ ಮಂಡಳಿ ಸದಸ್ಯರುಗಳಾದ ಹುಸೇನಖಾನ ದೇಸಾಯಿ, ಮಲ್ಲಪ್ಪ ನಭಾಪೂರೆ, ಅಡಿವೆಪ್ಪ ಪಾಶ್ಚಾಪೂರೆ, ವೀರಗೌಡ ಪಾಟೀಲ, ಅಬ್ದುಲರೇಹಮಾನ ಹವಾಲ್ದಾರ, ಬಸನಗೌಡ ಪಾಟೀಲ, ಸುಕುಮಾರ ಹೊಲೇರ, ಮಲ್ಲಿಕಾರ್ಜುನ ಕೂಲಿನವರ, ಅಡಿವೇಪ್ಪ ಚಾವಡಿ, ಸುಮಿತ್ರಾ ತಿಳಗಂಜಿ, ಅಕ್ಷತಾ ಕಾಗತೀಕರ ಇದ್ದರು.