Breaking News

ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳ ನೆನೆದ ಬಾಲಚಂದ್ರ ಜಾರಕಿಹೊಳಿ

Spread the love

ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳ ನೆನೆದ ಬಾಲಚಂದ್ರ ಜಾರಕಿಹೊಳಿ

ಯುವ ಭಾರತ ಸುದ್ದಿ ಮೂಡಲಗಿ:
ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು ನಮ್ಮೆಲ್ಲರ ಪುಣ್ಯವಾಗಿದೆ. ಆದರೆ ಕೆಲವೇ ಕೆಲವು ಜನರು ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಕಳೆದ ಭಾನುವಾರದಂದು ಸಿದ್ಧೇಶ್ವರ ಸ್ವಾಮಿಜಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ಧೇಶ್ವರ ಸ್ವಾಮಿಜಿಗಳು ನಡೆದಾಡುವ ದೇವರು ಎಂದು ಬಣ್ಣಿಸಿದರು.
ಸರಳತೆಗೆ ಹೆಸರಾಗಿ, ಭಕ್ತರಿಗೆ ಪ್ರೀಯರಾಗಿ, ಜೀವನುದ್ದಕ್ಕೂ ಅತ್ಯಂತ ಸಜ್ಜನಿಕೆಯ ಗುಣಗಳನ್ನು ಮೈಗೂಡಿಸಿಕೊಂಡು ಬದುಕಿದ ಸ್ವಾಮಿಜಿಗಳು ನಿಜ ಅರ್ಥದಲ್ಲಿ ಹೇಳಬೇಕಾದರೆ ಅವರು ಭಗವಂತನಾಗಿ ಈ ಭೂಮಿಯಿಂದ ನಿರ್ಗಮಿಸಿದರು. ಕೋಟ್ಯಾಂತರ ಭಕ್ತರನ್ನು ಅನಾಥರನ್ನಾಗಿ ಮಾಡಿ ಪರಮಾತ್ಮನ ಸಂಕಲ್ಪದಂತೆ ಶಿವನಪಾದ ಸೇರಿದರು ಎಂದು ಹೇಳಿದರು.
ದಿ. ಸಿದ್ಧೇಶ್ವರ ಸ್ವಾಮಿಜಿಗಳನ್ನು ಒಂದು ಬಾರಿ ಭೇಟಿ ಮಾಡುವ ಅವಕಾಶ ಒದಗಿಬಂದಿತ್ತು. ಇದು ನನ್ನ ಪಾಲಿಗೆ ಅದೃಷ್ಟವೆಂದು ಹೇಳಬಹುದು. ಅವರೊಂದಿಗೆ ಕಳೆದ ಕ್ಷಣಗಳನ್ನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರೈತರ ಸೇವೆ ಮಾಡುವ ಸದುದ್ಧೇಶದಿಂದ ಸಚಿವ ಸ್ಥಾನವನ್ನು ನಿರಾಕರಿಸಿ ಕೆಎಮ್‌ಎಫ್ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಸೇವೆಯಿಂದ ನನಗೆ ತೃಪ್ತಿಯಾಗಿದೆ. ಉತ್ತರ ಕರ್ನಾಟಕದಲ್ಲಿ ರೈತರು ಕೇವಲ ಕಬ್ಬು ಬೆಳೆಯನ್ನೇ ಅವಲಂಭಿಸಿದ್ದಾರೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತ ಡೈರಿಗಳಿಗೆ ಹಾಲನ್ನು ಹಾಕುವ ಮೂಲಕ ಹೈನುಗಾರಿಕೆಗೆ ಅಲ್ಲಿನ ಸ್ವತಃ ಮಹಿಳೆಯರೇ ಮುಂದೆ ಬಂದು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವದು ಗಮನಾರ್ಹವಾಗಿದೆ. ಅಲ್ಲಿನ ಮಾದರಿಯನ್ನು ನಮ್ಮಲ್ಲಿನ ರೈತ ಸಮುದಾಯ ಅಳವಡಿಸಿಕೊಂಡರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಬೆಳೆಯುತ್ತದೆ ಎಂದು ಹೇಳಿದರು.
ನಿರುದ್ಯೋಗ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ೪೮೭ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಕೇವಲ ಒಂದೇ ಜಿಲ್ಲೆಗೆ ಸೀಮಿತಗೊಂಡ ಈ ಹಾಲು ಮಹಾಮಂಡಳದಲ್ಲಿ ನಮ್ಮ ಉತ್ತರ ಕರ್ನಾಟಕ ಸೇರಿದಂತೆ ಈಡೀ ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನುಕೂಲವಾಗಲು ಅತ್ಯಂತ ಪ್ರಾಮಾಣಿಕವಾಗಿ ಸಂದರ್ಶನಗಳನ್ನು ನಡೆಸಲಾಗಿದೆ. ಆದರೆ ಕೆಲವರು ಉದ್ಧೇಶಪೂರ್ವಕವಾಗಿ ಕೋರ್ಟ ಮೆಟ್ಟಿಲೇರಿದ್ದಾರೆ. ಅಭ್ಯರ್ಥಿಗಳ ಹಿತಕ್ಕಾಗಿ ಅವರಿಗೆ ನ್ಯಾಯ ಒದಗಿಸಕೊಡಲು ನಾವು ಕೂಡ ತಡೆಯಾಜ್ಞೆ ತೆರವುಗೊಳಿಸಲು ಹೋರಾಟ ಮಾಡುತ್ತೇವೆ ಎಂದು ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸ್ಥಳೀಯ ಗುರುಪ್ರಸಾದ ಮಹಾಸ್ವಾಮಿಗಳು, ಇಳಕಲ್ ಮತ್ತು ವಿಜಯಪುರದ ಮಹಾಸ್ವಾಮಿಗಳು ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಅಡಿವೆಪ್ಪ ಹಾದಿಮನಿ, ಸಿ ಎಸ್ ಮೊಟೇಪ್ಪಗೋಳ, ವಿಠ್ಠಲ ಗಿಡೋಜಿ, ರಬ್ಬೋಜಿ ಮಳಿವಡ್ಡರ, ಗೋಪಾಲ ಬೀರಣಗಡ್ಡಿ, ನಾರಾಯಣ ತೋಟಗಿ, ನಾಗಪ್ಪ ಪಾಟೀಲ, ಶಂಕರ ಧರ್ಮಟ್ಟಿ, ಗೋಪಾಲ ಕುದರಿ, ಶಿವಪ್ಪ ಗಿಡೋಜಿ, ಲಗಮೇಶ ಬೀರಣಗಡ್ಡಿ, ಬನಪ್ಪ ವಡೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

five × 2 =