Breaking News

ಪ್ಯಾನ್- ಆಧಾರ್‌ ಜೋಡಣೆಗೆ ಅವಧಿ ವಿಸ್ತರಣೆಯಾಗುತ್ತಾ? ಇಲ್ಲಿದೆ‌ ಮಹತ್ವದ ಮಾಹಿತಿ

Spread the love

ಪ್ಯಾನ್- ಆಧಾರ್‌ ಜೋಡಣೆಗೆ ಅವಧಿ ವಿಸ್ತರಣೆಯಾಗುತ್ತಾ? ಇಲ್ಲಿದೆ‌ ಮಹತ್ವದ ಮಾಹಿತಿ

ಯುವ ಭಾರತ ಸುದ್ದಿ ಮುಂಬಯಿ :
ಹಲವು ದಿನಗಳಿಂದ ಎಲ್ಲೆಡೆ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಜೋಡಿಸುವಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಗಡುವನ್ನು ನೀಡಲಾಗಿತ್ತು. ಇದೀಗ ಈ ಗಡುವು ಹತ್ತಿರ ಬರುತ್ತಿದ್ದಂತೆ ಈ ದಿನಾಂಕವನ್ನು ಇನ್ನೊಮ್ಮೆ ವಿಸ್ತರಿಸಬೇಕೆಂಬ ಬೇಡಿಕೆ ಹೆಚ್ಚಾಗ ತೊಡಗಿದೆ.
ಆದರೆ ಈ ವರ್ಷ ಈ ದಿನಾಂಕ ಇನ್ನೊಮ್ಮೆ ವಿಸ್ತರಿಸುವ ನಿರೀಕ್ಷೆ ಇಲ್ಲ. ಈಗಾಗಲೇ ಗಮನಿಸಿದರೆ PAN-Aadhaar ಜೋಡಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಹಲವು ಬಾರಿ ದಿನಾಂಕಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಇಲಾಖೆಯು ವಿಸ್ತರಿಸಿತ್ತು.
ಈ ಪ್ಯಾನ್-ಆಧಾರ್ ಲಿಂಕ್ ಇಲ್ಲಿಯವರೆಗೂ ಇನ್ನೂ ಲಿಂಕ್ ಮಾಡದೇ ಇರುವವರು ಅದನ್ನು ಈ ತಿಂಗಳು ಅಂದರೆ ಮಾರ್ಚ್ 31ರ ವರೆಗೂ ಮಾಡಬಹುದಾಗಿದೆ. ಈ ಅವಧಿಯೊಳಗೂ ಯಾರೇ ಆಗಲಿ ತಮ್ಮ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡದೆ ಹೋದಲ್ಲಿ ಅವರ ಪಾನ್ ಸಂಖ್ಯೆಯು ಬರುವ ಏಪ್ರಿಲ್ 1, 2023 ರಿಂದ ನಿಷ್ಕ್ರಿಯಯವಾಗಲಿದೆ.
ಪ್ಯಾನ್ ಸಂಖ್ಯೆ ಒಂದೊಮ್ಮೆ ನಿಷ್ಕ್ರಿಯಗೊಂಡರೆ ಆ ವ್ಯಕ್ತಿಗೆ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಈ ರೀತಿ ರಿಟರ್ನ್ ಸಲ್ಲಿಸದೆ ಇದ್ದಾಗ ಆ ವ್ಯಕ್ತಿಯ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆ ಸಕ್ರಿಯವಾಗುವುದೇ ಇಲ್ಲ. ಅಲ್ಲದೆ ಪ್ಯಾ ನ್ ಇಲ್ಲದೆ ಐಟಿಆರ್ ಸಲ್ಲಿಸಬಯಸುವವರು ಹೆಚ್ಚಿನ ದರ ತೆರಬೇಕಾಗುತ್ತದೆ.
ಪ್ಯಾನ್-ಆಧಾರ್ ಜೋಡಣೆ ಮಾಡಲು ಕೆಲವು ದಿನಗಳು ಅಂದರೆ ಮಾರ್ಚ್ 31 ರ ವರೆಗೆ ಕಾಲಾವಧಿಯಿದ್ದು ಅದನ್ನು ಈಗಲೇ ಮಾಡಿಬಿಡಿ ಹಾಗೂ ಮತ್ತೊಮ್ಮೆ ದಿನಾಂಕ ವಿಸ್ತರಣೆ ಆಗಬಹುದೆಂಬ ಮನಸ್ಥಿತಿಯಿಂದ ಹೊರಬನ್ನಿ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

fifteen + 11 =