ಬೆಳಗಾವಿ ಹಿಂಡಲಗಾ ಜೈಲಲ್ಲಿ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಹಾಕಿದ್ದ ಪೂಜಾರಿಗೆ ಪಾತಕಿ ದಾವೂದ್ ಇಬ್ರಾಹಿಂ ಲಿಂಕ್
ನಾಗಪುರ :
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಫೋನ್ ನಲ್ಲಿ ಬೆದರಿಕೆ ಹಾಕಿದ್ದ ಕೈದಿ ಜಯೇಶ್ ಪೂಜಾರಿ ಅಲಿಯಸ್ ಕಾಂತಾಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಲಷ್ಕರ್ ಎ ತೊಯ್ಬಾ ಹಾಗೂ ನಿಷೇಧಿತ ಪಿಎಫ್ಐ ಜತೆ ಸಂಪರ್ಕ ಇದೆ ಎಂದು ನಾಗಪುರ ಪೊಲೀಸ್ ಆಯುಕ್ತ ಅಮಿತೇಶ್ ತಿಳಿಸಿದ್ದಾರೆ.
ಜಯೇಶನ ಬ್ರೇನ್ ವಾಶ್ ಆಗಿದೆ. ತೀವ್ರವಾದಿ ಆಗಿದ್ದಾನೆ. ಜೈಲಿನಲ್ಲಿ ಇತರ ಡಿ-ಗ್ಯಾಂಗ್ ಜೊತೆ ಸೇರಿ ಸಂಚು ರೂಪಿಸುತ್ತಿದ್ದಾನೆ ಎಂದು ತಿಳಿಸಿದ್ದ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪೊಲೀಸರು ರಾತ್ರೋರಾತ್ರಿ ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿ ಜಯೇಶನನ್ನು ವಶಕ್ಕೆ ಪಡೆದುಕೊಂಡಿದ್ದರು.