ಛೇ..ಕೈ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ !?
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎನ್ನುತ್ತಾರೆ ಕ್ಷೇತ್ರದ ಮತದಾರರು.
ಇದೀಗ ಎಲ್ಲೆಡೆ ಚುನಾವಣಾ ಪ್ರಚಾರ ಜೋರಾಗಿ ನಡೆದಿದೆ.
ಆದರೆ ಗ್ರಾಮೀಣ ಅಭ್ಯರ್ಥಿಗೆ ಈಗ ಮತದಾರರ ಒಲವು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಹಾರ-ತುರಾಯಿಗಳಿಗೆ ತಾವೇ ಹಣ ಕೊಟ್ಟು ಸಣ್ಣ ಸತ್ಕಾರ ಮಾಡಿಸಿಕೊಳ್ಳುವ ದುಸ್ಥಿತಿ ಎದುರಾಗಿದೆ.
ಸಣ್ಣ ಊರುಗಳಾದರೆ
₹ 30,000, ದೊಡ್ಡ ಊರುಗಳಾದರೆ
₹ 50,000 ಕೊಟ್ಟು ಹಾರ-ತುರಾಯಿಗಳಿಗೆ
ಮುಂಗಡ ಹಣ ಕೊಟ್ಟು
ಸತ್ಕಾರ ಮಾಡಿಸಿಕೊಳ್ಳುತ್ತಿದ್ದಾರೆ.
ತಮ್ಮ ಬೆಂಬಲಿಗರಿಗೆ ಅಗತ್ಯ ಪ್ರಮಾಣದ ಹಣಕಾಸು ನೆರವನ್ನು ನೀಡಿ ತಮ್ಮ ಹಣದಲ್ಲಿಯೇ ಸತ್ಕಾರ ಸ್ವೀಕರಿಸುವ
ಸ್ವಯಂಘೋಷಿತ ನಾಯಕಿಯ
ಮಾಸ್ಟರ್ ಪ್ಲಾನ್ ಈಗ ನಗೆಪಾಟಲಿಗೆ ಗುರಿಯಾಗಿದೆ.
ಎಲ್ಲಾ ಗ್ರಾಮಗಳ ಜನತೆಗೆ ನಾಯಕಿಯ ಈ ಕಪಟನಾಟಕ ಗೊತ್ತಾಗಿದೆ.
ತಾವೊಬ್ಬರೆ ರಾಜ್ಯ ನಾಯಕರು, ಕ್ಷೇತ್ರದ ಮನೆ ಮಗಳು, ಅಭಿವೃದ್ಧಿಯ ಹರಿಕಾರರು ಎನ್ನುವ ಈ ನಾಯಕಿ ತಮ್ಮ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೆ ಈಗ ತಮ್ಮ ಕೈಯಾರೆ ಹಣ ತೆತ್ತು ಸತ್ಕಾರ ಪಡೆಯುವ ಸ್ಥಿತಿ ಬರುತ್ತಿರಲಿಲ್ಲ. ಇಂತಹ ಪರಿಸ್ಥಿತಿ ಬಂದಿರುವುದಕ್ಕೆ
ಕ್ಷೇತ್ರದ ಜನತೆ ಈಗ ನಿಜಕ್ಕೂ ಮರುಕಪಡುವಂತಾಗಿದೆ.