ಗೋಕಾಕ ಮತಕ್ಷೇತ್ರದಲ್ಲಿ ಅಭಿವೃದ್ಧಿ ಮತದಾರರ ಕಣ್ಣು ಮುಂದೆ ಕಾಣಸೀಗುತ್ತದೆ.- ಮಹಾರಾಷ್ಟ್ರದ ಎಮ್‌ಎಲ್‌ಸಿ ಗೋಪಿಚಂದ ಪಡಲ್ಕರ.!
ಗೋಕಾಕ: ಗೋಕಾಕ ಮತಕ್ಷೇತ್ರದಲ್ಲಿ ಅಭಿವೃದ್ಧಿ ಮತದಾರರ ಕಣ್ಣು ಮುಂದೆ ಕಾಣಸೀಗುತ್ತದೆ. ಈ ಭಾಗದ ಪವರ್‌ಪುಲ್ ನಾಯಕ ರಮೇಶ ಜಾರಕಿಹೊಳಿ ಈ ಕ್ಷೇತ್ರದ ಅಭಿವೃದ್ಧಿಯ ಹರಿಕಾರರರಾಗಿದ್ದು ಈ ಚುನಾವಣೆಯಲ್ಲಿ ಮತ್ತೋಮ್ಮೆ ಅವರಿಗೆ ನಿಮ್ಮ ಮತಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ತರೋಣವೆಂದು ಮಹಾರಾಷ್ಟçದ ಎಮ್‌ಎಲ್‌ಸಿ ಗೋಪಿಚಂದ ಪಡಲ್ಕರ ಹೇಳಿದರು.
ಅವರು, ಶುಕ್ರವಾರದಂದು ಸಂಜೆ ನಗರದ ಮರಾಠಾ ಗಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರ ಮತಯಾಚನೆ ನಡೆಸಿ ಮಾತನಾಡಿ, ಬಿಜೆಪಿ ವಿರುದ್ಧ ಸುಳ್ಳು ಅಪಾಧನೆ ಮಾಡುವ ಕಾಂಗ್ರೇಸ್ ಸರಕಾರ ಭ್ರಷ್ಟಾಚಾರದ ಬಗ್ಗೆ ದಾಖಲೆ ನೀಡಲಿ. ಅಧಿಕಾರದ ದಾಹಕ್ಕಾಗಿ ಕಾಂಗ್ರೇಸ್ ಸುಳ್ಳು ಆರೋಪಗಳನ್ನು ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮಾತ್ರ ಜೀವಂತವಾಗಿದ್ದು ಈ ಬಾರಿ ಮೇ೧೩ರ ನಂತರ ಧುಳಿಪಟವಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್ ಯುದ್ಧ ಸಂದರ್ಭದಲ್ಲಿ ನಮ್ಮ ದೇಶದ ಜನರ ರಕ್ಷಣೆಗೆ ಮಧ್ಯಸ್ಥಿಕೆ ವಹಿಸಿ ಯುದ್ಧವಿರಾಮ ಘೋಷಣೆ ಮಾಡಿಸಿ ದೇಶವಾಸಿಗಳ ರಕ್ಷಣೆ ಮಾಡಿದ್ದಾರೆ. ದೇಶದ ವಿದ್ಯಾರ್ಥಿಗಳು ಹೊರದೇಶಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳದಂತೆ ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿಸಿ ಅವರ ವಿದ್ಯಾಬ್ಯಾಸಕ್ಕೆ ನೆರವಾಗಿದ್ದಾರೆ. ಜನರ ರಕ್ಷಣೆಗೆ ಸುಭದ್ರ ಬಿಜೆಪಿ ಸರಕಾರ ಬೇಕು ಎಲ್ಲರೂ ಬಿಜೆಪಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವಂತೆ ಕರೆ ನೀಡಿದರು.
ಕಾಂಗ್ರೇಸ್ ತನ್ನ ಆಡಳಿತವಧಿಯಲ್ಲಿ ಎಷ್ಟು ಭ್ರಷ್ಟಾಚಾರ ಎಸಗೀದೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಧಾನಿ ಮೋದಿ ನೇತ್ರತ್ವದ ಕೇಂದ್ರ ಸರಕಾರ ಯಾವುದೇ ಭ್ರಷ್ಟಾಚಾರ ಆರೋಪ ಹೊಂದಿಲ್ಲ. ಬದಲಾಗಿ ದೇಶ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿದೆ. ಬಿಜೆಪಿ ಸರಕಾರ ಯಾವ ಜಾತಿ, ಬೇಧ ಮಾಡದೇ ಎಲ್ಲ ಸಮಾಜಗಳ ಅಭಿವೃದ್ಧಿ ಶ್ರಮಿಸುತ್ತಿದೆ. ಎಲ್ಲ ಸಮಾಜಗಳ ರೈತರ ಖಾತೆಗೆ ನೇರವಾಗಿ ಸಹಾಯಧನ ಜಮೆ ಮಾಡಲಾಗುತ್ತಿದೆ. ಅದೇ ಈ ಹಿಂದಿನ ರಾಜ್ಯದ ಕಾಂಗ್ರೇಸ್ ಸರಕಾರ ಒಂದು ಕೋಮಿನ ಜರ ಒಲೈಕೆಗೆ ಭಾಗ್ಯಗಳನ್ನು ನೀಡಿದ್ದರು ಎಂದು ಹರಿಹಾಯ್ದರು.
ದಲಿತ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿಯಲ್ಲೂ ಬಿಜೆಪಿ ಪಾತ್ರ ಮಹತ್ವದ್ದಾಗಿದೆ. ಬಜರಂಗ ದಳ ನಿಷೇಧ ಮಾಡುತ್ತೆನೆಂದು ಹೇಳುವ ಕಾಂಗ್ರೆಸ್ ಧಮ್ಮಿದ್ದರೇ ಮಾಡಿ ತೋರಿಸಲಿ. ವಿರೋಧಿಗಳ ಆರೋಪಕ್ಕೆ ಕಿವಿಗೊಡಬೇಡಿ. ಎಲ್ಲರೂ ಬಿಜೆಪಿ ಬೆಂಬಲಿಸಿ ಮೇ.೧೩ ರಂದು ಬಿಜೆಪಿ ಸರಕಾರ ಮತ್ತೊಮ್ಮೆ ಅಧಿಕಾರ ತರಬೇಕು ಕಂಕಣಬದ್ಧರಾಗೋಣ ಎಂದರು.
ತವಗ, ಬೆಣಚಿನಮರ್ಡಿ, ಮಾಲದಿನ್ನಿ ಹಾಗೂ ನಗರದ ಮರಾಠಾ ಗಲ್ಲಿ, ಹಾಳಭಾಗ ಗಲ್ಲಿ ಸೇರಿದಂತೆ ವಿವಿಧೆಡೆ ಬಿಜೆಪಿ ಅಭ್ಯರ್ಥಿಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮಡ್ಡೆಪ್ಪ ತೋಳಿನವರ, ಪ್ರಮೋದ ಜೋಶಿ, ಲಕ್ಕಪ್ಪ ಮಾಳಗಿ, ರಾಜೇಶ್ವರಿ ಒಡೆಯರ, ಪ್ರಕಾಶ ಮುರಾರಿ, ಸುರೇಶ ಪತ್ತಾರ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಇದ್ದರು.