ಕಳೆಗಟ್ಟಿದ ಉತ್ಸಾಹ : ಯರಗಟ್ಟಿ ಗ್ರಾಮದೇವತೆ ಜಾತ್ರೆ ಮಂಗಳವಾರದಿಂದ ಆರಂಭ
ಯುವ ಭಾರತ ಸುದ್ದಿ ಯರಗಟ್ಟಿ :
ಗ್ರಾಮದೇವಿ ಜಾತ್ರಾ ಮಹೋತ್ಸವ ಜೂನ್ 27 ರಿಂದ 5 ದಿನಗಳ ಕಾಲ ನಡೆಯಲಿದೆ. ಜೂನ್ 27 ರಂದು ಬೆಳಗ್ಗೆ 9 ಗಂಟೆಗೆ ಭವ್ಯ ಮೆರವಣಿಗೆ ಮೂಲಕ ದೇವಿಯನ್ನು ಸೀಮೆಯಿಂದ ಪುರ ಪ್ರವೇಶ ಮಾಡಿಕೊಳ್ಳಲಾಗುತ್ತದೆ.
ಜೂ.28 ರಂದು ಬೆಳಗ್ಗೆ ಹೋಮ, ಮಹಾಪೂಜೆ, ರಾತ್ರಿ 7 ಕ್ಕೆ ಶಾಸಕ ವಿಶ್ವಾಸ ವೈದ್ಯ ಅವರ ಸನ್ಮಾನ ಕಾರ್ಯಕ್ರಮ, ನಂತರ ಜಾನಪದ ಕಲಾವಿದ ಶಬ್ಬೀರ್ ಡಾಂಗೆ ತಂಡದವರಿಂದ ರಸಮಂಜರಿ ಜರಗಲಿದೆ.
ಜೂನ್ 29 ರಂದು ಬೆಳಗ್ಗೆ ಉಡಿ ತುಂಬುವುದು, ರಾತ್ರಿ 9 ಕ್ಕೆ ಚೌಡಕಿ ಪದಗಳು, ಜೂನ್ 30 ರಂದು ದೇವಿಗೆ ವಿಶೇಷ ಪೂಜೆ, ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 8 ಕ್ಕೆ ದೇವಿಯರ ಹೊನ್ನಾಟ ಪ್ರಾರಂಭವಾಗಿ ರಾತ್ರಿ ಇಡೀ ನಡೆಯಲಿದೆ. ವಾದ್ಯ ಮೇಳ ಸಾಥ್ ನೀಡಲಿದೆ.
ಜುಲೈ 1 ರಂದು ಹೊನ್ನಾಟದ ಮೂಲಕ ಪಾದಗಟ್ಟಿ ತಲುಪುವುದು. ನಂತರ ದೇವಿಯನ್ನು ಸೀಮೆಗೆ ಕಳಿಸಲಾಗುವುದು. ಜೂನ್ 29 ಮತ್ತು 30 ರಂದು ಎತ್ತಿನಗಾಡಿ ಹಾಗೂ ಕುದುರೆ ಗಾಡಿ ಶರ್ಯತ್ತು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.