ಕಳೆದ ಆರು ವರ್ಷಗಳಿಂದ ರಾಜಾಪುರ ಗ್ರಾಮಸ್ಥರ
ರಕ್ತ ಹಿರುತ್ತಿರುವ ಜಿಗಣೆ ಈ ಲೇಕ್ಕಾಧಿಕಾರಿ!!
ಯುವ ಭಾರತ ವಿಶೇಷ ವರದಿ
ಗೋಕಾಕ: ಗ್ರಾಮದ ಪ್ರತಿಯೊಂದು ಕಾಗದು ಪತ್ರಗಳ ವ್ಯವಹಾರಕ್ಕಾಗಿ ಗ್ರಾಮ ಲೇಕ್ಕಾಧಿಕಾರಿಯನ್ನೇ ಅವಲಂಭಿಸಬೇಕಾದ ಜನರು ಲೇಕ್ಕಾಧಿಕಾರಿಯ ಲಂಚದ ದಾಹಕ್ಕೆ ಗ್ರಾಮಸ್ಥರು ಸೋತು ಸುಣ್ಣವಾಗಿದ್ದಾರೆ.
ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭ್ರಷ್ಟ ಗ್ರಾಮ ಲೇಕ್ಕಾಧಿಕಾರಿ ಸಂತೋಷ ಪಾಶ್ಚಾಪೂರಗೆ ಪ್ರತಿಯೊಂದಕ್ಕೂ ಲಂಚ ನೀಡಲೇಬೇಕಾದ ಪರಿಸ್ಥಿತಿ ಗ್ರಾಮಸ್ಥರಿಗೆ ಬಂದೊದಗಿದೆ. ಅಧಿಕಾರಿಯ ಬ್ರಹ್ಮಾದ ಭ್ರಷ್ಟಾಚಾರಕ್ಕೆ ರಾಜಾಪುರ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.
ಜಾತಿ ಆದಾಯ ಪ್ರಮಾಣ ಪತ್ರಕ್ಕೆ 1೦೦, ರಹವಾಸಿ ಪ್ರಮಾಣ ಪತ್ರಕ್ಕೆ 1೦೦, ಮಾಸಿಕ ಪಿಂಚಣಿ ಪ್ರಮಾಣ ಪತ್ರಕ್ಕೆ 1ಸಾವಿರದಿಂದ ೨ಸಾವಿರದ ವರೆಗೆ, ವಾರಸಾ ಪ್ರಮಾಣ ಪತ್ರಕ್ಕೆ ಕನಿಷ್ಟ 5೦ಸಾವಿರದಿಂದ 1ಲಕ್ಷದ ವರೆಗೆ, ಜಮೀನು ಡೈರಿಗೆ 1೦ಸಾವಿರ ಹೀಗೆ ಪ್ರತಿಯೊಮದು ಕಾರ್ಯಕ್ಕು ಭ್ರಷ್ಟ ಗ್ರಾಮ ಲೇಕ್ಕಾಧಿಕಾರಿ ಸಂತೋಷ ಪಾಶ್ಚಾಪೂರಗೆ ಹಣ ನೀಡಲೇಬೇಕು. ಹಣ ನೀಡದೆ ಇದ್ದಲ್ಲಿ ಅವರ ಕೆಲಸ ವಿಳಂಭ ಮಾಡುತ್ತ ಆ ಸಮಸ್ಯೆ ಇದೆ. ಈ ಸಮಸ್ಯೆ ಇದೆ ಎಂದು ಕಾಲಹರಣ ಮಾಡುತ್ತ ಬರುತ್ತಾರೆ. ಹೀಗಾಗಿ ಜನರು ಸರಿಯಾದ ಸಮಯಕ್ಕೆ ತಮ್ಮ ಕೆಲಸವಾಗನೇಕು ಎಂದು ಹಣ ನೀಡಿ ತಮ್ಮ ಕಾಗದು ಪತ್ರಗಳನ್ನು ಪಡೆಯಬೇಕಾದ ದುಸ್ಥಿತಿ ಒದಗಿದೆ.
ಕಳೆದ ಆರು ವರ್ಷಗಳಿಂದ ಯಾವುದೇ ಗ್ರಾಮಕ್ಕೆ ವರ್ಗಾವಣೆಯಾಗದ ಈ ಅಧಿಕಾರಿಯೂ ಗ್ರಾಮದ ಸ್ಥಳೀಯ ಕೆಲ ಜನಪ್ರತಿನಿಧಿಗಳÀ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆ ಆತನ ವರ್ಗಾವಣೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಕಳೆದ ಪ್ರವಾಹ ಸಂದರ್ಭದಲ್ಲಿಯೂ ಸಹ ಸರಕಾರ ನೀಡಿದ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸದ ಈ ಅಧಿಕಾರಿ ಗ್ರಾಮದ ಸಿರಿವಂತರನ್ನು ಫಲಾನುಭವಿಗಳನ್ನಾಗಿಸಿದ್ದಾನೆ. ಪ್ರತಿ ಮನೆಗೆ ಈತನಿಗೆ 5೦ಸಾವಿರ ನೀಡಿದರೆ ಸಾಕು ಅವರಿಗೆ ಮನೆ ಹಾಕಿ ಕೊಡುತ್ತಾನೆ. ಹೀಗಾಗಿ ರಾಜಾಪುರ ಗ್ರಾಮದಲ್ಲಿ ಈತ ಮಾಡಿದ್ದೇ ಕಾರು ಬಾರು ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನಾದರೂ ಮೇಲಾಧಿಕಾರಿಗಳು ಈ ಗ್ರಾಮ ಲೇಕ್ಕಾಧಿಕಾರಿಯತ್ತ ಗಮನ ಹರಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಪ್ರಜ್ಞಾವಂತ ನಾಗರಿಕರ ಆಗ್ರವಾಗಿದೆ.