Breaking News

ವಿಶ್ವ ಮಲಾಲಾ ದಿನ ಇಂದು

Spread the love

ವಿಶ್ವ ಮಲಾಲಾ ದಿನ ಇಂದು

ಒಬ್ಬ ಶಿಕ್ಷಕ ಒಂದು ಪುಸ್ತಕ ಒಂದು ಪೆನ್ನು ಇಡೀ ಜಗತ್ತನ್ನೇ ಬದಲಾಯಿಸಬಹುದು ಎಂಬ ಸಮಸ್ತ ವಿಶ್ವದ ಜಾಗೃತಿ ಬಗೆಗಿನ ಹೃದಯಸ್ಪರ್ಶಿ ಮಂತ್ರಗಳನ್ನು ವಿಶ್ವಸಂಸ್ಥೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಾನಕಿ ಮೂನ್ ಅವರ ಮುಂದೆ

ಭಾಷಣ ಮಾಡಿ ವಿಶ್ವದ ಗಮನ ಸೆಳೆದಿದ್ದು ಕೇವಲ 15 ವರ್ಷದ ಬಾಲಕಿ.
ಎಂದಿನಂತೆ 2002 ಅಕ್ಟೋಬರ್ 9 ರಂದು ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಶಾಲೆಗೆ ಹೋಗುತ್ತಿದ್ದಾಗ ತಾಲಿಬಾನ್ ಉಗ್ರರ ದಾಳಿಯಲ್ಲಿ ಸಿಲುಕಿಕೊಂಡ ಅವಳ ತಲೆಗೆ ಒಂದು ಗುಂಡು ಬಿದ್ದಿತ್ತು ದೇವರ ದಯೆಯಿಂದ ಬದುಕಿ ಬಂದ ಅವಳು ನೀಡಿದ ಒಂದು ಹೇಳಿಕೆ ಜಗತ್ತಿನ ತುಂಬೆಲ್ಲ ಪ್ರಚಾರ ಗೊಂಡಿತ್ತು ಆ ಬಾಲಕಿ ಹೇಳುತ್ತಾಳೆ ಬಂದೂಕಿನಿಂದ ಹೊರಬಂದ ಗುಂಡು ನನ್ನನ್ನು ಸುಮ್ಮನಿರಿಸಬಹುದೆಂದು ತಾಲಿಬಾನ್ ದುಷ್ಕರ್ಮಿಗಳು ನಂಬಿದ್ದರು ಆದರೆ ಅವರ ಯೋಚನೆ ಈಗ ವಿಫಲವಾಯಿತು ಎಂದ ಮಲಾಲಾ ಮುಂದುವರೆದು ನನ್ನ ಮೇಲೆ ಹಾರಿಸಿದ ಗುಂಡುಗಳು ನನ್ನಲ್ಲಿದ್ದ ದೌರ್ಬಲ್ಯ ಭಯ ಹಾಗೂ ನಿರಾಶೆಯನ್ನು ಕೊಂದು ಹಾಕಿವೆ ಎಂದಳು ಇವಳ ಧೈರ್ಯ ಸಾಹಸವನ್ನು ಮೆಚ್ಚಿದ ವಿಶ್ವಸಂಸ್ಥೆಯು ಅವಳ ಜನ್ಮದಿನವಾದ ಜುಲೈ 12ರಂದು ವಿಶ್ವ ಮಲಾಲಾ ದಿನ ಇಂದು ಆಚರಿಸಿ ಅಂದು ಯುವ ಸಾಹಸಿ ಪ್ರಶಸ್ತಿ ನೀಡಲು ತೀರ್ಮಾನಿಸಿತು ಈ ಸಾಹಸ ಯಶೋಗಾಥೆಗೆ ಮಹಾತ್ಮ ಗಾಂಧೀಜಿಯವರ ಶಾಂತಿ ತತ್ವ ಪಾಲನೆಯ ನನಗೆ ಮೂಲ ಪ್ರೇರಣೆ ಎನ್ನುತ್ತಾಳೆ ಮಲಾಲ ಯೂಸುಫ್
ಅವಳಲ್ಲಿ ಮೂಡಿ ಬಂದ ಪರಮ ಜ್ಞಾನವು ಕೇವಲ ಬುದ್ಧಿ ಅಥವಾ ಯೋಚನೆ ಶಕ್ತಿಗಳಿಂದ ಬರುವಂತದ್ದಲ್ಲಾ ಅದು ಸ್ವತಃ ಸಿದ್ಧ ಅಂತರ ದೃಷ್ಟಿಗೆ ಮಾತ್ರ ಗೋಚರಿಸುವಂತ್ತದ್ದು ಅಂತಹ ಜ್ಞಾನವು ಸ್ವತಃ ಆತ್ಮವೂ ನಿರ್ಧರಿಸಿದಾಗ ಮಾತ್ರ ಲಭಿಸುತ್ತದೆ ಅಹಂಕಾರದ ವಿಚಾರಗಳಿಲ್ಲದ ಜಗತ್ ಕಲ್ಯಾಣದ ಮನಸ್ಥಿತಿ ಇರುವ ಪರಿಶುದ್ಧ ವ್ಯಕ್ತಿಗಳಲ್ಲಿ ಮಾತ್ರ ಪ್ರಕಟವಾಗುತ್ತದೆ. ಅವಳ ಪ್ರಕಾರ ಶಿಕ್ಷಣವು ಅಸಮರ್ಪಕವಾಗಿದೆ ಮತ್ತು ಸೀಮಿತ ಜನಸಂಖ್ಯೆಯನ್ನು ಒಳಗೊಂಡಿದೆ ಆದ್ದರಿಂದಲೇ
ಇಂತಹ ತಪ್ಪುಗಳು ನಡೆಯುತ್ತವೆ. ತಪ್ಪಿತಸ್ಥರು ಅಜಾಗರೂಕತೆಯಿಂದ ಮಾಡಿದ ತಪ್ಪನ್ನು ಒಪ್ಪಿಕೊಳ್ಳರು ಅಂಥವರಿಗೆ ಜ್ಞಾನದ ಕನ್ನಡಿ ಹಿಡಿಯಬೇಕು
ಮಾನವತೆಯ ಉಳಿವಿಗಾಗಿ ಶಿಕ್ಷಣವನ್ನು ಮೂಲಭೂತ ಧೋರಣೆಯನ್ನಾಗಿ ಸ್ವೀಕರಿಸಿ ಅನುಷ್ಠಾನಗೊಳಿಸಬೇಕು ಶಿಕ್ಷಣವು ಜಗತ್ತನ್ನು ಪೀಡಿಸುವ ಬಾಧಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಇರುವ ಏಕೈಕ ಮಾರ್ಗ ಈ ದೆಸೆಯಲ್ಲಿ ಬಹು ಪರಿಣಾಮಕಾರಿ ಪ್ರಾರಂಭವೆಂದರೆ ಶಿಕ್ಷಣದಲ್ಲಿ ಬದಲಾವಣೆ
ಜಗತ್ತು ಯಾವುದೇ ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿಲ್ಲ ಬದಲಿಗೆ ಮನುಷ್ಯ ಮನುಷ್ಯನ ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಿದೆ ಆದ್ದರಿಂದ ಜಗತ್ತು ಇವತ್ತು ಕೋಮುವಾದಿಗಳ ಉಗ್ರಗಾಮಿಗಳ ಕುಲವಾದಿಗಳ ವರ್ಣವಾದಿಗಳ ಹಿಡಿತದಲ್ಲಿ ಸಿಕ್ಕಿದೆ . ಇದಕ್ಕೆ ಹೇಳುವುದು ಎಲ್ಲ ದೇಶದವರಿಗೂ ಎಲ್ಲ ಭಾಷೆಯವರಿಗೂ ಎಲ್ಲ
ಜನಾಂಗದವರಿಗೂ ಎಲ್ಲ ಧರ್ಮದವರಿಗೂ ಶಿಕ್ಷಣ ಅವಶ್ಯಕತೆ ಇದೆ. ನಮಗೆ ಜಗತ್ತಿನ ದಿನ ನಿತ್ಯದ ಚಟುವಟಿಕೆಗಳು ತಿಳಿಯುವುದು ಸುದ್ದಿ ಮಾಧ್ಯಮಗಳಿಂದ ಅದರ ಆಧಾರದ ಮೇಲೆ ಹೇಳುವುದಾದರೆ ಜಗತ್ತಿನ ಬಹುತೇಕ ಜನರು ಬಳಲುತ್ತಿದ್ದಾರೆ
ಅಪರಾಧ, ಅಪಘಾತ, ಅನಾರೋಗ್ಯಗಳು ಕಿತ್ತು ತಿನ್ನುತ್ತಿವೆ.
ತಾಂತ್ರಿಕ ಮಟ್ಟದಲ್ಲಿ ಒಂದಷ್ಟು ಸುಧಾರಣೆಯಾಗಿದ್ದರು
ಅದು ಎಲ್ಲರಿಗೂ ಸಿಗದೇ ಮಾನಸಿಕ ಪ್ರಬುದ್ಧತೆ ದೈಹಿಕ ಕ್ಷಮತೆ ಕ್ಷೀಣಿಸುತ್ತಿದೆ. ಮೇಲ್ಮಟ್ಟದಲ್ಲಿ ವಿದ್ಯಾವಂತರ ಪ್ರಗತಿ ಕಾಣುತ್ತಿದ್ದರು ಮೌಲ್ಯಗಳ ಕುಸಿತ ಪ್ರತಿಯೊಬ್ಬರ ಗಮನಕ್ಕೂ ಬರುತ್ತಿದೆ. ಅವರ ಬಗ್ಗೆ ವ್ಯಾಪಕ ನೋವು ಎಲ್ಲರ ಮನಸ್ಸುಗಳನ್ನು ಕೊರೆಯುತ್ತಿದೆ. ವಿಶ್ವದ ಬಹುದೊಡ್ಡ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯು ಆತಂಕದಲ್ಲಿದೆ .
ಮೇಲ್ನೋಟಕ್ಕೆ ಉತ್ತಮವಾಗಿ ಕಾಣುವ ಅಥವಾ ಕೆಲವರಿಂದ ಹಾಗೆ ಭಾವಿಸುವ ನಮ್ಮ ಸಾಮಾಜಿಕ ವ್ಯವಸ್ಥೆಯು ಅಂತರ್ಯದಲ್ಲಿ ಶೀತಲವಾಗಿದೆ ಈ ಕ್ಷಣಕ್ಕೆ ಯಾವುದೇ ಅಪಾಯ ಇಲ್ಲದಿದ್ದರೂ ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಅಪಾಯಕಾರಿ ಹಂತ ತಲುಪುವ ಸಾಧ್ಯತೆ ಇದೆ ಈ ಸಮಸ್ಯೆಯು ಶತಮಾನಗಳಿಂದಲೂ ಇದ್ದೆ ಇದೆ ಮುಂದೆ ಈ ವ್ಯವಸ್ಥೆಯೇ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುತ್ತದೆ ಎಂಬ ಭಾವನೆ ಬಹಳ ಜನರಲ್ಲಿದೆ. ಆದರೆ ಅಲ್ಲಿಯವರೆಗೂ ಅನಾಗರಿಕತೆಯಿಂದ ಜರಗುವ ತಪ್ಪುಗಳು ಮುಂದುವರೆದರೆ ನಾಗರಿಕತೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಅದಕ್ಕೆ ಬದಲಾಗಿ ನಾವು ನಮ್ಮ ಅನುಭವದ ಪ್ರಾಯೋಗಿಕ ನಡೆಗಳಿಂದ ನಮ್ಮನ್ನು ನಾವು ನಿಯಂತ್ರಿಸಿಕೊಂಡರೆ ನಾಗರಿಕ ಪ್ರಜ್ಞೆಗೆ ನಮ್ಮನ್ನು ನಾವು ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗಾದರೂ ಒಳ್ಳೆಯ ವ್ಯವಸ್ಥೆಯನ್ನು ಬಿಟ್ಟು ಹೋಗಬಹುದು .ಇಲ್ಲದಿದ್ದರೆ ಈ ಕ್ಷಣದ ಅನಾರೋಗ್ಯಕರ ವಾತಾವರಣ ಅವರನ್ನು ಇನ್ನಷ್ಟು ಭೀಕರತೆಗೆ ತಳ್ಳಬಹುದು ಇಲ್ಲವಾದಲ್ಲಿ ಮಲಾಲಾಳಂತಹ ಜ್ಞಾನಿಗಳ, ಶರಣರ ,ವಿಚಾರವಾದಿಗಳ ಆಶಯಗಳು ಮಣ್ಣು ಪಾಲಾಗಬಹುದು. ಆದುದರಿಂದ ಈಗಲೇ ಎಚ್ಚೆತ್ತುಕೊಳ್ಳೋಣ ಇಂದಿನಿಂದಲೇ ಬದಲಾಗೋಣ…..

ಮಾಂತೇಶ ಗು ಅಕ್ಕೂರ
ಹವ್ಯಾಸಿ ಬರಹಗಾರ


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × one =