ಹಿರೇಬೂದನೂರ : ಭಕ್ತರ ಸನ್ಮಾನ

ಮುರಗೋಡ :
ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ ಜೀರ್ಣೋದ್ದಾರಕ್ಕೆ ಒಂದು ಲಕ್ಷ ಐವತ್ತು ಸಾವಿರ ರೂ. ಹಾಗೂಮೂರು ಕಿಲೋ ಬೆಳ್ಳಿ ಮೂರ್ತಿ ದೇಣಿಗೆ ನೀಡಿದ ವೀರಪ್ಪ ಉಣ್ಣಿಯವರನ್ನು ಹಾಗೂ ಸೇವೆ ಸಲ್ಲಿಸಿದ್ದ ಇನ್ನಿತರರನ್ನು ಬುಧವಾರ ಸನ್ಮಾನಿಸಲಾಯಿತು.
ಪ್ರಗತಿಪರ ರೈತ ಮುಖಂಡ ನಾಗರಾಜ ದೇಸಾಯಿ, ರಾಜು ಕೋಲಕಾರ, ಲೋಕೇಶ ಧರ್ಮಶಾಲಿ, ರಾಯಪ್ಪ ಹುಣಸಿಕಟ್ಟಿ, ಮಹಾದೇವಿ ಸೂರಣ್ಣವರ, ಮಂಜುಳಾ ನಾಯ್ಕರ, ಯಲ್ಲಪ್ಪ ನಾಯ್ಕರ, ಮೋಹನಗೌಡ ಪಾಟೀಲ, ಸೋಮಪ್ಪ ಮಳಗಲಿ, ಜಿ.ಎಂ. ಗಿರೆನ್ನವರ ಇದ್ದರು.
YuvaBharataha Latest Kannada News