ನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.!
ಯುವಭಾರತ ಸುದ್ದಿ
ಬೆಳಗಾವಿ: ನಾನು ನಿನ್ನೆ ಹಿಂಡಲಗಾದಲ್ಲಿ ಮಾಡಿದ ಭಾಷಣದಲ್ಲಿ ಹೆಬ್ಬಾಳಕರ್ ಅವರಿಗೆ ನಿಜವಾಗಿಯೂ ಹಿಂದುತ್ವದ ಬಗ್ಗೆ ಕಾಳಜಿ ಇದ್ದಲ್ಲಿ, ಅವರು ಗೋ ಹತ್ಯೆ ನಿಷೇಧ ಕಾನೂನು, ಮತಾಂದರ ಕಾಯ್ದೆಗೆ ಸಪೋರ್ಟ್ ಮಾಡಲಿ ಎಂದು ಮಾತಾಡಿದ್ದೇನೆ.
ಅವರ ಬಗ್ಗೆ ಹಗುರವಾಗಿ ಮಾತಾಡಿಲ್ಲ. ಒಂದು ಪೆಗ್ ಬಗ್ಗೆ ಮಾತಾಡಿದ್ದೇನೆ. ಎಲ್ಲಿಯೂ ಅವರ ಹೆಸರು ಉಲ್ಲೇಖ ಮಾಡಿಲ್ಲ, ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಶೆರೆ ಅಂತಾ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದ್ದಾರೆ.
ನನಗೂ ತಾಯಿ ಇದ್ದಾಳೆ, ಮಗಳಿದ್ದಾಳೆ ಮಹಿಳೆಯರ ಬಗ್ಗೆ ನನಗೂ ಗೌರವ ಇದೆ. ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ನಾನು ಕೆಟ್ಟ ಮಾತಾಡಿಲ್ಲ. ಮಹಿಳೆಯರಿಗೆ ಅವಮಾನ ಆಗಿದೆ ಅಂತಾ ಲಕ್ಷ್ಮೀ ಹೆಬ್ಬಾಳಕರ್ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡೆಸಿಕೊಂಡು ನನ್ನ ಮನೆಗೆ ನೂರಾರು ಮಹಿಳೆಯರನ್ನು ನನ್ನ ಮನೆಗೆ ಕಳುಹಿಸಿದ್ದಾರೆ. ನನ್ನ ತಾಯಿಗೆ ೯೦ ವರ್ಷ ವಯಸ್ಸು, ನಾನೂ ಹಾರ್ಟ್ ಪೇಶಂಟ್ ಮಹಿಳೆಯರು ನನ್ನ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸುವದು ಸರಿಯೇ ಎಂದು ಸಂಜಯ ಪಾಟೀಲ ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಅವಮಾನ ಆಗಿದೆ ಅಂತಾ ಚಿಕ್ಕೋಡಿ ಕ್ಯಾಂಡಿಡೇಟ್ ಹೇಳ್ತಾ ಇಲ್ಲಖಾನಾಪೂರ ಕ್ಯಾಂಡಿಡೇಟ್ ಹೇಳ್ತಾ ಇಲ್ಲ. ಲಕ್ಷ್ಮೀ ಹೆಬ್ಬಾಳಕರ್ ಒಬ್ರೇ ಅವಮಾನ ಆಗಿದೆ
ಅಂತಾ ಹೇಳ್ತಾ ಇದ್ದಾರೆ. ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತಾಡ್ತಾರೆ. ಇದು ಇಲೆಕ್ಷನ್ ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ಸಂಜಯ ಪಾಟೀಲ ಹೇಳಿದರು.