ಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.!

ಗೋಕಾಕ: ಲೋಕಸಭಾ ಚುನಾವಣೆ ಇನ್ನು ಮರ‍್ನಾಲ್ಕು ದಿನಗಳು ಬಾಕಿ ಇದ್ದು ಕಾಂಗ್ರೇಸ್ ಅಭ್ಯರ್ಥಿಪರ ವೋಟಿಗೆ ನೋಟು ನೀಡುವದು ಭರ್ಜರಿಯಾಗಿ ನಡೆದಿದೆ.
ಚುನಾವಣಾ ಇಲಾಖೆ ಚುನಾವಣಾ ಅಕ್ರಮಗಳು ಜರುಗದಂತೆ ಹದ್ದಿನ ಕಣ್ಣಿಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹೇಳುತ್ತ ಬಂದಿದ್ದು ಇತ್ತ ಕಾಂಗ್ರೇಸ್ ಅಭ್ಯರ್ಥಿ ಪರ ಮತಕ್ಕೆ ಹಣ ನೀಡುವುದು ಜೋರಾಗಿಯೇ ನಡೆದಿದೆ.
ಕಾಂಗ್ರೇಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಕಾಂಗ್ರೆಸ್ ನಾಯಕರು ಪ್ರತಿ ಮನೆ ಮನೆಗಳಿಗೆ ತೆರಳಿ ಕಾಂಗ್ರೇಸ್ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಹಸ್ತಾಕ್ಷರ ಹೊಂದಿರುವ ಗ್ಯಾರಂಟಿ ಕಾರ್ಡನ ಜೊತೆಗೆ ಪ್ರತಿ ಮನೆಗೆ 1000 ರೂಪಾಯಿ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಮತದಾರರಿಗೆ ಪ್ರತಿಯೊಬ್ಬರಿಗೆ 5೦೦ ರೂಪಾಯಿ ನೀಡಲಾಗುತ್ತಿದೆ. ಗೋಕಾಕ ಮತಕ್ಷೇತ್ರದ ಎಲ್ಲ ಕಡೆಗಳಲ್ಲೂ ಶುಕ್ರವಾರ ಈ ಚುನಾವಣಾ ಅಕ್ರಮ(ಮತದಾರರಿಗೆ ಹಣದ ಆಮಿಷ) ನಡೆಯುತ್ತಿದ್ದರು ಚುನಾವಣಾ ಇಲಾಖೆ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ರಾಜ್ಯ ಸರಕಾರದ ಸಚಿವೆಯಾಗಿರುವ ಕಾಂಗ್ರೇಸ್ ಅಭ್ಯರ್ಥಿಯವರ ಮಾತೋಶ್ರೀ ಲಕ್ಷಿö್ಮÃ ಹೆಬ್ಬಾಳಕರ ಅವರು ತಮ್ಮ ಅಧಿಕಾರದ ದೂರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಕಾಂಗ್ರೇಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪತ್ನಿಯ ತಂದೆ ಹಾಗೂ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ ಅಳಿಯನ ಗೆಲುವಿಗಾಗಿ ತಮ್ಮ ಭದ್ರಾವತಿಯಿಂದ ಜನರನ್ನು ಕರೆ ತಂದಿದ್ದು ಅವರನ್ನು ಮತದಾರರಿಗೆ ಹಣ ಹಂಚಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಭದ್ರಾವತಿಯಿಂದ ಬಂದಿರುವ ಶಾಸಕ ಬಿ ಕೆ ಸಂಗಮೇಶ ಅವರ ಬೆಂಬಲಿಗರು ಗೋಕಾಕ ನಗರದಲ್ಲಿ ನೆಲೆಯೂರಿದ್ದು ಚುನಾವಣೆಯ ಝಣಝಣ ಕಾಂಚಾಣ ಸದ್ದು ಜೋರಾಗಿದೆ.
ಇನ್ನಾದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ(ಮತದಾರರಿಗೆ ಹಣದ ಆಮಿಷ) ನಡೆಯದಂತೆ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವಂತಹ ಮಾನ್ಯ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕಿದೆ.
YuvaBharataha Latest Kannada News