ಬಿಜೆಪಿ ಅಧಿಕೃತ ಅಭ್ಯರ್ಥಿಯಾದ ಜಗದೀಶ ಶೆಟ್ಟರಗೆ ಬೆಳಗಾವಿ ಜಿಲ್ಲಾ ಕುರುಬ ಸಮಾಜ ಬೆಂಬಲ- ಅಧ್ಯಕ್ಷ ಮಡ್ಡೆಪ್ಪ ತೋಳಿನವರ.!
ಗೋಕಾಕ: ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾದ ಜಗದೀಶ ಶೆಟ್ಟರ ಅವರಿಗೆ ಜಿಲ್ಲೆಯ ಎಲ್ಲ ಕುರುಬ ಸಮಾಜ ಬಾಂಧವರು ಮತದಾನ ಮಾಡುವ ಮೂಲಕ ಬಿಜೆಪಿಗೆ ಅತಿ ಹೆಚ್ಚಿನ ಲೀಡ್ ನೀಡುವಂತೆ ಬೆಳಗಾವಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮಡ್ಡೆಪ್ಪ ತೋಳಿನವರ ತಿಳಿಸಿದ್ದಾರೆ.
ಶನಿವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈತ್ತಿಚೇಗೆ ಬೆಳಗಾವಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕುರುಬ ಸಮಾಜದ ಅಭಿವೃದ್ಧಿಗಾಗಿ ಕೆಲವು ವಿಷಯಗಳನ್ನು ಚರ್ಚೆಯಿಸಿದಾಗ ಪ್ರಧಾನಿಯವರು ಸಹ ಕುರುಬ ಸಮಾಜದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದು, ಸಮಾಜದ ಅಭಿವೃದ್ಧಿಗೆ ಸಹಕರಿಸುವದಾಗಿ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಎಲ್ಲ ಕುರುಬ ಸಮಾಜ ಬಾಂಧವರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಅಗತ್ಯವಿದೆ. ಹೀಗಾಗಿ ಬರುವ ದಿ.೭ ರಂದು ಪ್ರಧಾನಿಯವರ ಪ್ರತಿನಿಧಿಯಾಗಿರುವ ಬಿಜೆಪಿ ಅಭ್ಯರ್ಥಿಗೆ ನಮ್ಮೆಲ್ಲರ ಮತಗಳನ್ನು ನೀಡುವ ಮೂಲಕ ಪ್ರಚಂಡ ಬಹುಮತಗಳಿಂದ ಆಯ್ಕೆ ಮಾಡೋಣ ಎಂದು ಕೋರಿದ್ದಾರೆ.