Breaking News

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the love

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!


ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ ಕೇಂದ್ರಗಳ ಆಸ್ತಿಯನ್ನು ಹಾಗೂ ರೈತರ ಜಮೀನುಗಳನ್ನು ಅಕ್ರಮವಾಗಿ ಕಾಂಗ್ರೇಸ್ ನೇತ್ರತ್ವದ ಸಿದ್ಧರಾಮಯ್ಯ ಸರಕಾರ ವಕ್ಫ ಬೋರ್ಡ ಆಸ್ತಿಯೆಂದು ಅಧಿಕಾರಿಗಳ ಮೂಲಕ ವರ್ಗಾಯಿಸಲು ಪಿತುರಿ ನಡೆಸುತ್ತಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.
ಅವರು ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿAದ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ, ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನೆಯ ಮೂಲಕ ತಹಶೀಲದಾರ ಕಚೇರಿಗೆ ಆಗಮಿಸಿ ತಹಶೀಲದಾರ ಡಾ.ಮೋಹನ ಭಸ್ಮೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಶಾಂತಿ, ಸಾಮರಸ್ಯದ ನಾಡಾದ ಕರುನಾಡಿನಲ್ಲಿ ರಾಜ್ಯದ ಸಿದ್ಧರಾಮಯ್ಯನವರ ಸರಕಾರ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತ ಆತಂಕದ ವಾತಾವರಣ ಸೃಷ್ಟಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯ ಹಿತದೃಷ್ಟಿಯಿಂದ ಮತ್ತು ವಕ್ಫಬೋರ್ಡನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಗಮನಿಸಿ ವಕ್ಫಕಾಯ್ದೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿದೆ. ಇದು ಜಂಟಿ ಪಾರ್ಲಿಮೆಂಟರಿ ಬೋರ್ಡನ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ ಬೋರ್ಡ ತನ್ನ ಕರಾಳ ಕೈಚಳಕವನ್ನು ಮಾಡುವ ಮೂಲಕ ವಿಜಯಪುರ ಜಿಲ್ಲೆಯ ಹೊನ್ನಾವಡದ ೧.೫೦೦ ಎಕರೆ ರೈತರ ಜಮೀನು ವಕ್ಫ ಆಸ್ತಿಯೆಂದು ಘೋಷಿಸಿ ತಹಶೀಲ್ದಾರರಿಂದ ಪುಷ್ಠಿಕರಿಸಿ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ವಿಧಾನ ಸೌಧವು ಸೇರಿದಂತೆ ಹಲವಾರು ಪ್ರಮುಖ ಆಸ್ತಿಗಳು ವಕ್ಫಗೆ ಸೇರಿದ್ದು ಎಂದು ಮುಸ್ಲಿಂ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಧಾರ್ಮಿಕ ಕೇಂದ್ರಗಳ ಆಸ್ತಿಯನ್ನು ವಕ್ಫ ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದೆ ಇದಕ್ಕೆ ಸಿಎಮ್ ಸಿದ್ಧರಾಮಯ್ಯ ಹಾಗೂ ಸಚಿವ ಬಿ ಝಡ್ ಜಮೀರಹ್ಮದ ಕಾರಣ ಎಂದು ದೂರಿದರು. ಸಿದ್ಧರಾಮಯ್ಯನವರು ಬಾಯಿಮಾತಲ್ಲಿ ನೋಟಿಸ್ ಹಿಂಪಡೆಯಲು ಹೇಳಿದರೆ ಸಾಲದು ಪತ್ರರೂಪದಲ್ಲಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡರಾದ ಪ್ರಮೋದ ಜೋಶಿ, ಸುರೇಶ ಸನದಿ, ಶಶಿಧರ ದೇಮಶೆಟ್ಟಿ, ಶಕೀಲ ಧಾರವಾಡಕರ, ಬಸವರಾಜ ಹಿರೇಮಠ, ಜಯಾನಂದ ಹುಣಚ್ಯಾಳ, ಶ್ರೀರಂಗ ನಾಯ್ಕ, ಪುಂಡಲೀಕ ವಣ್ಣೂರ, ಬಸವರಾಜ ಆರೇನ್ನವರ, ವಿಶ್ವನಾಥ ಬಿಳ್ಳೂರ, ಹರೀಶ ಬೂದಿಹಾಳ, ಲಕ್ಕಪ್ಪ ಬಂಡಿ, ಯಲ್ಲಪ್ಪ ಹಳ್ಳೂರ, ಹನಮಂತ ಯಡ್ರಾಂವಿ, ಸದರಜೋಶಿ, ಭೀಮಶಿ ಕೊಳವಿ, ಯಲ್ಲಪ್ಪ ಬಂಗೆನ್ನವರ, ವಿರೇಂದ್ರ ಎಕ್ಕೇರಿಮಠ, ಶಿವಾನಂದ ಪಾಟೀಲ, ಹನಮಂತ ನಿಲಜಗಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ಯುವಮೋರ್ಚಾ ಅಧ್ಯಕ್ಷ ಮಂಜು ಪ್ರಭುನಟ್ಟಿ, ರೈತ ಮೋರ್ಚಾ ಅಧ್ಯಕ್ಷ ಸುರೇಶ ಪತ್ತಾರ, ಎಸ್‌ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಮಾವರಕರ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರು ಇದ್ದರು.


Spread the love

About Yuva Bharatha

Check Also

ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ.- ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ.!

Spread the loveರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ.- ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ …

Leave a Reply

Your email address will not be published. Required fields are marked *

three × one =