Breaking News

ಬಿಜೆಪಿ ವಿಶ್ವದಲ್ಲೇ ಅತಿಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ಪಕ್ಷವಾಗಿದೆ- ಅಮರನಾಥ ಜಾರಕಿಹೊಳಿ!

Spread the love

ಬಿಜೆಪಿ ವಿಶ್ವದಲ್ಲೇ ಅತಿಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ಪಕ್ಷವಾಗಿದೆ- ಅಮರನಾಥ ಜಾರಕಿಹೊಳಿ!

ಗೋಕಾಕ: ಬಿಜೆಪಿ ವಿಶ್ವದಲ್ಲೇ ಅತಿಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ಪಕ್ಷವಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸದಸ್ಯತ್ವವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಯುವನಾಯಕ ಅಮರನಾಥ ಜಾರಕಿಹೊಳಿ ಹೇಳಿದರು.


ಅವರು, ರವಿವಾರದಂದು ನಗರದ ಗುರುವಾರ ಪೇಠದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಹಿನ್ನಲೆ ಮನೆಗಳಿಗೆ ಮತ್ತು ವಾಹನಗಳಿಗೆ ಕರಪತ್ರ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗೋಕಾಕ ವಿಧಾನಸಭಾ ಕ್ಷೇತ್ರದ ಎಲ್ಲ ಬೂತ್‌ಗಳಲ್ಲಿ ಕನಿಷ್ಠ ೩೦೦ಕ್ಕೂ ಅಧಿಕ ಸದಸ್ಯತ್ವವನ್ನು ಮಾಡುವ ಮೂಲಕ ದಾಖಲೆ ನಿರ್ಮಿಸುವಂತೆ ಎಲ್ಲ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ವಿವಿಧ ವಾರ್ಡಗಳಲ್ಲಿ ಕಾರ್ಯಕರ್ತರಿಂದ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಸಾಧನೆಗಳನ್ನು ತಿಳಿಸಿ ಸದಸ್ಯತ್ವ ನೊಂದಣಿ ಮಾಡಲಾಯಿತು.
ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಪ್ರಭಾ ಶುರ‍್ಸ್ ಅಧ್ಯಕ್ಷ ಅಶೋಕ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಮಾನಂದ ಪೂಜೇರಿ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ನಗರಸಭೆ ಸದಸ್ಯರುಗಳಾದ ಬಸವರಾಜ ಆರೇನ್ನವರ, ಜಯಾನಂದ ಹುಣಚ್ಯಾಳ, ಬಾಬು ಮುಳಗುಂದ, ವಿಜಯ ಜತ್ತಿ, ಮುಖಂಡ ಬಸವರಾಜ ಹಿರೇಮಠ, ಬಾಳೇಶ ಗಿಡ್ಡನವರ, ಅನೀಲ ತುರಾಯಿದಾರ, ವಿರೇಂದ್ರ ಎಕ್ಕೇರಿಮಠ, ಅಡಿವೇಶ ಮಜ್ಜಗಿ, ಮಂಜುನಾಥ ಪ್ರಭುನಟ್ಟಿ, ಆನಂದ ಖಾನಪ್ಪನವರ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಹಾಪ್ರಸಾದಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ!

Spread the loveಮಹಾಪ್ರಸಾದಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ! ಗೋಕಾಕ: ನಗರದ ಗುರುವಾರ ಪೇಠ ಭೂತಿ ಕೂಟ ಗಣೇಶ ಉತ್ಸವ ಮಂಡಳಿಯವರು …

Leave a Reply

Your email address will not be published. Required fields are marked *

19 − 16 =