ಬೆಳಗಾವಿಗೂ|….| ” ಶ್ರೀರಾಮ” ಜನ್ಮಭೂಮಿ ಅಯೋಧ್ಯೆಗೂ||….|| ಅವಿನಾಭಾವ ಸಂಬಂಧ..!!
ಬೆಳಗಾವಿ : ಅಗಸ್ಟ5 ರಂದು ನಡೆಯುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶೀಲಾನ್ಯಾಸದ ಕಾರ್ಯಕ್ರಮ ಸದ್ಯ ದೇಶದ ಲಕ್ಷಾಂತರ ಶ್ರೀರಾಮನ ಭಕ್ತರ ಪುಣ್ಯ ದಿನವಾಗಿದೆ. ಈ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ಕಾರ್ಯಕ್ರಮಕ್ಕೂ ಬೆಳಗಾವಿ ಗೂ ಅವಿನಾಭಾವ ಸಂಬಂಧ ಹೊಂದಿದೆ. ರಾಮಮಂದಿರ ಹೋರಾಟದಿಂದ ಹಿಡಿದು ಶುಭಮಂಗಳ ಕಾರ್ಯ ಮೂಹರ್ತ ಫಿಕ್ಸ ಮಾಡಿದ್ದೂ ಬೆಳಗಾವಿಗೆ ಲಿಂಗ್ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಶ್ರೀರಾಮನ ಕುರುಹು ಬೆಳಗಾವಿ ಜಿಲ್ಲೆಯಲ್ಲಿ ಇದೆ ಅನ್ನೊದ ಮತ್ತೊಂದು ಮಹತ್ವವಾಗಿದೆ. ಇದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..
ಬೆಳಗಾವಿಗೂ ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೂ ಅವಿನಾಭಾವ ಸಂಬಂಧ..
ಬೆಳಗಾವಿ To ಅಯೋಧ್ಯೆ ರಾಮಮಂದಿರ.
ಶ್ರೀರಾಮನ ಕುರುಹು ಬೆಳಗಾವಿ ಜಿಲ್ಲೆಯಲ್ಲಿ.
ಶ್ರೀರಾಮನ ಭಕ್ತೆ ಶಬರಿ ಶ್ರೀರಾಮನ ಸೇವೆ ಮಾಡಿದ್ದು ಇದೇ ಪುಣ್ಯಕ್ಷೇತ್ರದಲ್ಲಿ..
ಸುಕ್ಷೇತ್ರ ಶಬರಿಕೊಳ್ಳದಲ್ಲಿ ಶ್ರೀರಾಮ ಸ್ಮರಣೆ…
ಹೌದು… ಅಯೋಧ್ಯೆಯಲ್ಲಿ ನಡೆಯುವ ಪುಣ್ಯಕ್ಷೇತ್ರ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮ ಲಕ್ಷಾಂತರ ಹಿಂದುಗಳ ಪಾಲಿಗೆ ಅದು ಸೌಭಾಗ್ಯದಿನ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡಬೇಕಯ ಅಂತಾ ಶತಮಾನದ ಹೋರಾಟ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಆಸೆ ಕನಸು ಮನವರಿಕೆಯಾಗಿತ್ತು. ಶ್ರೀರಾಮನ ಭಕ್ತರ ಮಾಡುತ್ತಿರುವ ತಪಸ್ಸಿಗೆ ಶ್ರೀರಾಮನು ವರನೀಡಿದ್ದಾರೆ. ಹೌದು. ಬೆಳಗಾವಿಗೂ ಹಾಗೂ ಅಯೋಧ್ಯೆಕ್ಕೂ ಅವಿನಾಭಾವ ಸಂಬಂಧ ಇದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಹೋರಾಟಕ್ಕೆ ಬೆಳಗಾವಿಯಿಂದ.
16 ಜನರು ಹೋಗಿದ್ದರು.ಬಾಬ್ರಿ ಮಸೀದಿ ಧ್ವಂಸದ ಪ್ರಕರಣದಲ್ಲಿ ಭಾಗಿಯಾಗಿದ್ದರು. ಶ್ರೀರಾಮ ಭಕ್ತರು ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಭಾಗಿಯಾಗಿದ್ದರು. ಇನ್ನು ರಾಮಮಂದಿರ ನಿರ್ಮಾಣ ಶೀಲಾನ್ಯಾಸಕ್ಕೆ ಮುಹೂರ್ತ ಇಟ್ಟಿದ್ದು ಕೂಡ ಬೆಳಗಾವಿ ವಿದ್ವಾಂಸರೇ. ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ, ರಾಘವೇಂದ್ರ ಸ್ವಾಮಿ ನವ ವೃಂದಾವನದ ಮಠದ ವಿದ್ವಾಂಸ ಎನ್ ಆರ್ ವಿಜಯೇಂದ್ರ ಶರ್ಮಾ ಅವರು ಮಂದಿರ ನಿರ್ಮಾಣಕ್ಕೆ ಮುಹೂರ್ತ ಇಟ್ಟಿದ್ದು ಬೆಳಗಾವಿಗೆ ಹೆಮ್ಮೆಯ ಕಿರೀಟವಾಗಿದೆ..
ಇನ್ನೂ ಮಹತ್ವದ ವಿಷಯ ಅಂದ್ರೆ ಬೆಳಗಾವಿ ಜಿಲ್ಲೆಯಲ್ಲಿ ಅಯೋಧ್ಯೆಯ ಶ್ರೀರಾಮನ ಕುರುಹುಗಳು ಸಿಕ್ಕಿದೆ.
ಬೆಳಗಾವಿ ಜಿಲ್ಲೆಯಲ್ಲಿ ಶ್ರೀರಾಮನು ಭಕ್ತೆ ಸೇವೆ ಪಡೆದ ಇತಿಹಾಸ ಇದೆ. ಹೌದು ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಿಂದ ಮೂರು ಕಿಮೀ ದೂರದಲ್ಲಿರುವ ಶಬರಿಕೊಳ್ಳದಲ್ಲಿ ರಾಮನ ಕುರುಹು ಸಿಕ್ಕಿದೆ. ಶ್ರೀರಾಮನ ಭಕ್ತೆ ಶಬರಿ, ಶ್ರೀರಾಮನ ಬರುವಿಕೆಗಾಗಿ
ಬೋರೆಹಣ್ಣಿನೊಂದಿದೆ ಶಬರಿ ಕಾದುದ್ದು ಇದೇ ಶಬರಿಕೊಳ್ಳದಲ್ಲಿ. ಶಬರಿಯ ಭಕ್ತಿಗೆ ಮೆಚ್ಚಿ ಶ್ರೀರಾಮನು ದರ್ಶನ ನೀಡಿದ್ದು ಇದೇ ಶಬರಿಕೊಳ್ಳದಲ್ಲಿ. ಇನ್ನು ರಾಮನ ಭಕ್ತೆ ಶಬರಿ ಕೂಡ ಇದೇ ಕೊಳ್ಳದಲ್ಲಿ ರಾಮನ ಸೇವೆ ಮಾಡಿದ್ದಾರೆ. ಶ್ರೀರಾಮನು ಶಬರಿಗೆ ಆಶೀರ್ವಾದ ಮಾಡಿದ್ದಾರಿಂದ ಇದನ್ನ ಶಬರಿಕೊಳ್ಳ ಎಂದೇ ಇತಿಹಾಸದ ಪುಟಗಳಲ್ಲಿ ಇದೆ. ಇಂದಿಗೂ ಶಬರಿಕೊಳ್ಳದಲ್ಲಿ ಶ್ರೀರಾಮ ಮಂದಿ , ಶಬರಿ ದೇವಸ್ಥಾನ ಹಾಗೂ ಶಬರಿಕೊಳ್ಳದ ಕಾಣಸಿಗುತ್ತದೆ. ಇನ್ನು ಶಬರಿಕೊಳ್ಳದಲ್ಲಿ ಶ್ರೀರಾಮ ಹಾಗೂ ಭಕ್ತೆ ಶಬರಿ ಪೂಜೆ ನಡೆಯುತ್ತಿದ್ದು ಪುಣ್ಯಕ್ಷೇತ್ರವಾಗಿದೆ. ಹೀಗಾಗಿ ಬೆಳಗಾಬಿ ಜಿಲ್ಲೆಗೂ ಅಯೋಧ್ಯೆ ರಾಮನ ಮಂದಿರಕ್ಕೂ ಅವಿನಾಭಾವ ಸಂಬಂಧ ಇದೆ. ಇನ್ನು ಶಬರಿಕೊಳ್ಳದ ಬಗ್ಗೆ ರಾಮನ ಭಕ್ತರು ಹೇಳಿದ್ದ ಹೀಗೆ…
* ಒಟ್ಟಿನಲ್ಲಿ ಶ್ರೀರಾಮಜನ್ಮ ಭೂಮಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿತ್ತಿರುವುದು ಲಕ್ಷಾಂತರ ಹಿಂದುಗಳ ಕನಸು ನನಸಾಗಿ ದೇಶದ ಹೆಮ್ಮೆ ಆದ್ರೆ, ಅಯೋಧ್ಯೆಯ ಶ್ರೀರಾಮನು ಭಕ್ತೆ ಶಬರಿಗಾಗಿ ಶಬರಿಕೊಳ್ಳಕ್ಕೆ ಬಂದು ಶಬರಿ ಸೇವೆ ಪಡೆದಿದ್ದು ನಮ್ಮ ಬೆಳಗಾವಿ ಜಿಲ್ಲೆ ಅನ್ನೊದು ಬೆಳಗಾವಿಗರಿಗೆ ಹೆಮ್ಮೆಯ ಕಿರಿಟ ಆಗಿದೆ..